SAIL-VISL ಮಾರ್ಚ್ 23,2023 ರಂದು ಭದ್ರಾವತಿಯ ಕರ್ನಾಟಕ ಸರ್ಕಾರಿ ಶಾಲೆಗಳ 83 ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತಹ ಉಪಕರಣಗಳನ್ನು ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಸ್ಥಾವರದಿಂದ ಶಾರದ ಮಂದಿರದಲ್ಲಿ ವಿತರಿಸಲಾಯಿತು.
ಶ್ರೀ ಬಿ.ಎಲ್. ಚಂದ್ವಾನಿ, ಕಾರ್ಯಪಾಲಕ ನಿರ್ದೇಶಕರು, ಶ್ರೀ ಕೆ.ಎಸ್. ಸುರೇಶ್, ಮುಖ್ಯ ಮಹಾಪ್ರಬಂಧಕರು (ಸ್ಥಾವರ), ಶ್ರೀ ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧಕರು (ಸಿಬ್ಬಂದಿ ಮತ್ತು ಸಾರ್ವಜನಿಕ ಸಂಪರ್ಕ), ಶ್ರೀಮತಿ ಶೋಭ ಶಿವಶಂಕರನ್, ಮಹಾಪ್ರಬಂಧಕರು (ಹಣಕಾಸು), ಶ್ರೀ ಜೆ. ಜಗದೀಶ, ಅಧ್ಯಕ್ಷರು, VISL ಕಾರ್ಮಿಕರ ಸಂಘ, ಶ್ರೀ ನವೀನ್ ರಾಹುಲ್, ಉಪಾಧ್ಯಕ್ಷರು, VISL ಅಧಿಕಾರಿಗಳ ಸಂಘ ಮತ್ತು ಶಿಕ್ಷಣ ಇಲಾಖೆಯಿಂದ ಶ್ರೀ ಸಿ.ಆರ್.ಪರಮೇಶಪ್ಪ, ಉಪ ನಿರ್ದೇಶಕರು ಸಾರ್ವಜನಿಕ ಶಿಕ್ಷಣ, ಶಿವಮೊಗ್ಗ ಮತ್ತು ಶ್ರೀ ಕೆ. ನಾಗೇಂದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಭದ್ರಾವತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
4.82 ಲಕ್ಷ ರೂಪಾಯಿ ಮೌಲ್ಯದ 31 ವ್ಹೀಲ್ ಚೇರ್‌ಗಳು, 3 ಸಿ.ಪಿ. ಚೇರ್‌ಗಳು, 43 MSIED ಕಿಟ್‌ಗಳು, 4 ವಾಕರ್ಸ್, 2 ರೋಲೇಟರ್‌ಗಳನ್ನು ಗಣ್ಯರಿಂದ ವಿತರಿಸಲಾಯಿತು.
ಉಕ್ಕುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಿಗೆ ಶಾಲೆಯ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಉಪಯುಕ್ತವಾದ ಡಬಲ್ ಬರ್ನರ್ ಗ್ಯಾಸ್ ಸ್ಟೌವ್‌ನ್ನು ಹಸ್ತಾಂತರಿಸಲಾಯಿತು.
ಶ್ರೀ ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧಕರು (ಸಿಬ್ಬಂದಿ ಮತ್ತು ಸಾರ್ವಜನಿಕ ಸಂಪರ್ಕ), ಸ್ವಾಗತಿಸಿ, ಧನ್ಯವಾದಗಳನ್ನು ಕೋರಿದರು.
ಅಧ್ಯಕ್ಷೀಯ ಭಾಷಣ ಮಾಡಿದ ಕಾರ್ಯಪಾಲಕ ನಿರ್ದೇಶಕರಾದ ಶ್ರೀ ಬಿ.ಎಲ್. ಚಂದ್ವಾನಿ ಅವರು ಮಾತನಾಡಿ SAIL-VISL ವಿವಿಧ ಯೋಜನೆಗಳಡಿಯಲ್ಲಿ ಸಾಮಾನ್ಯ ಜನರ ಜೀವನವನ್ನು ಸುಧಾರಿಸಲು ಮತ್ತು ಬದುಕಲು ಸಮಾಜವನ್ನು ಉತ್ತಮ ಸ್ಥಳವನ್ನಾಗಿ ಮಾಡುವ ಕಾರ್ಯಕ್ರಮಗಳಲ್ಲಿ ಯಾವಾಗಲೂ ತೊಡಗಿಸಿಕೊಂಡಿದೆ.
ಈ ಹಣಕಾಸು ವರ್ಷದಲ್ಲಿ ದೊಡ್ಡೇರಿ ಗ್ರಾಮ, ಉಕ್ಕುಂದ ಗ್ರಾಮ, ಭದ್ರಾವತಿಯ ರೋಟರಿ ಕ್ಲಬ್‌ನಲ್ಲಿ ಸಹ್ಯಾದ್ರಿ ನಾರಾಯಣ ಹೃದಯಾಲಯ, ಶಂಕರ ನೇತ್ರಾಲಯ ಮತ್ತು VISL ಆಸ್ಪತ್ರೆಗಳು ಸಹಯೋಗದೊಂದಿಗೆ ಆರೋಗ್ಯ, ಮೂಳೆ, ಹೃದಯ, ನೇತ್ರ ತಪಾಸಣಾ ಶಿಬಿರಗಳನ್ನು ನಡೆಸಿದ್ದು, ಸುಮಾರು 500 ಮಂದಿ ಪ್ರಯೋಜನ ಪಡೆದುಕೊಂಡಿದ್ದಾರೆ.
ಶಿಕ್ಷಣ ವಲಯದಲ್ಲಿ, 2 ಕಂಪ್ಯೂಟರ್‌ಗಳು ಮತ್ತು ಒಂದು ವೆಬ್ ಕ್ಯಾಮೆರಾವನ್ನು ಒಳಗೊಂಡಿರುವ ವೀಡಿಯೋ ಕಾನ್ಫರೆನ್ಸ್ ಸೌಲಭ್ಯವನ್ನು ಹಸ್ತಾಂತರಿಸಲಾಯಿತು, ಇದು ಗ್ರಾಮೀಣ ಶಿಕ್ಷಕರಿಗೆ ಸ್ಮಾರ್ಟ್ ಕ್ಲಾಸ್ ತರಬೇತಿ ನಡೆಸಲು ಶಿಕ್ಷಣ ಇಲಾಖೆಗೆ ನೆರವಾಗುತ್ತದೆ. ವಿಶೇಷವಾಗಿ ವಿಕಲಚೇತನರಿಗೆ ಭದ್ರಾವತಿಯ ತರಂಗ ಕಿವುಡರ ಶಾಲೆಯ ಶ್ರವಣದೋಷವುಳ್ಳ ವಿದ್ಯಾರ್ಥಿಗಳಿಗೆ ೨೨ ಜೋಡಿ ಶ್ರವಣ ಸಾಧನಗಳನ್ನು ಡಿಸೆಂಬರ್
3,2022ರಂದು ಅಂತರಾಷ್ಟ್ರೀಯ ವಿಶೇಷ ಚೇತನರ ದಿನದ ಸಂದರ್ಭದಲ್ಲಿ ಮತ್ತು ಇಂದು ಕರ್ನಾಟಕ ಸರ್ಕಾರದ ಭದ್ರಾವತಿಯ ಶಾಲೆಗಳ 83 ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಉಪಕರಣಗಳನ್ನು ಹಸ್ತಂತರಿಸಲಾಗಿದೆ.
ನಮ್ಮ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯಡಿಯಲ್ಲಿ ನೆರವನ್ನು ಮತ್ತು ಉಪಕರಣಗಳನ್ನು ಹಸ್ತಾಂತರಿಸಲಾಯಿತು.
ಒಟ್ಟಾರೆಯಾಗಿ ಈ ಹಣಕಾಸು ವರ್ಷದಲ್ಲಿ SAIL-VISL ನಿಂದ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಈ ಉದಾತ್ತ ಉದ್ದೇಶಕ್ಕಾಗಿ 8.22ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಮತ್ತು ಇದು ಭವಿಷ್ಯದಲ್ಲಿಯೂ ಮುಂದುವರಿಯುತ್ತದೆ.
ಶ್ರೀ ಸಿ.ಆರ್. ಪರಮೇಶಪ್ಪ, ಡಿ.ಡಿ.ಪಿ.ಐ, ಶಿವಮೊಗ್ಗ ಮತ್ತು ಶ್ರೀ ಎ.ಕೆ. ನಾಗೇಂದ್ರಪ್ಪ, ಬಿ.ಈ.ಓ, ಭದ್ರಾವತಿ ಅವರು SAIL-VISL ಕೊಡುಗೆಗೆ ಧನ್ಯವಾದ ಸಲ್ಲಿಸಿದರು ಮತ್ತು ಸರ್ಕಾರಿ ಶಿಕ್ಷಣ ಇಲಾಖೆಯ ಮೂಲಸೌಕರ್ಯಗಳನ್ನು ಸುಧಾರಿಸಲು ಮತ್ತು ವಿಶೇಷ ಚೇತನರಿಗೆ ಭವಿಷ್ಯದಲ್ಲಿಯೂ ಸಹಾಯ ಮತ್ತು ಬೆಂಬಲವನ್ನು ಕೋರಿದರು.
SAIL-VISL ಭದ್ರಾವತಿಯ ಕ್ಷೇತ್ರ ಶಿಕ್ಷಣ ಕಛೇರಿಯಲ್ಲಿರುವ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಗಣ್ಯರು ವಿಡಿಯೋ ಕಾನ್ಫರೆನ್ಸ್ ಸೌಲಭ್ಯಗಳೊಂದಿಗೆ ಗ್ರಾಮೀಣ ಶಿಕ್ಷಕರಿಗೆ ಸ್ಮಾರ್ಟ್ ಕ್ಲಾಸ್ ತರಬೇತಿ ಕೇಂದ್ರಕ್ಕೆ ಚಾಲನೆ ನೀಡಿದರು.
ಶ್ರೀಮತಿ ಕೆ.ಎಸ್. ಶೋಭ, ಸಹಾಯಕ ವ್ಯವಸ್ಥಾಪಕರು (ಸಿಬ್ಬಂದಿ ಮತ್ತು ಸಿ.ಎಸ್.ಆರ್) ಕಾರ್ಯಕ್ರಮವನ್ನು ನಿರೂಪಿಸಿ ಸಂಯೋಜಿಸಿದರು.
ಶ್ರೀ ವಿ.ಹೆಚ್, ಪಂಚಾಕ್ಷರಿ, ಭದ್ರಾವತಿಯ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಮತ್ತು ಶ್ರೀಮತಿ ಕವಿತಾ, ಕ್ಷೇತ್ರ ಸಮನ್ವಯಾಧಿಕಾರಿ ಉಪಸ್ಥಿತರಿದ್ದರು.