Self Ride Bike ಚಿಕ್ಕಮಗಳೂರು, ನಗರದಲ್ಲಿ ಸಂಚರಿಸುತ್ತಿರುವ ಸೆಲ್ಪ್ ಬೈಕ್‌ಗಳು ಕಾನೂನು ರೀತ್ಯಾ ಅಧಿಕೃತವಾದ ಪರವಾನಗಿಯನ್ನು ಕ್ರಮವಾಗಿ ಪಡೆದುಕೊಂಡು ಜಿಲ್ಲೆಯಲ್ಲಿ ಸಂಚರಿಸಲು ಮುಂದಾಗಿದೆ ಹೊರತು ಯಾವುದೇ ಇತರೆ ವಾಹನಗಳಿಗೆ ಪೈಪೋಟಿ ನೀಡಲು ಮುಂದಾಗಿಲ್ಲ ಎಂದು ಜಿಲ್ಲಾ ಸೆಲ್ಪ್ ರೈಡ್ ಬೈಕ್ ಬಾಡಿಗೆದಾರರ ಸಂಘವು ಪ್ರಾದೇಶಿಕ ಸಾರಿಗೆ ಅಧಿಕಾರಿಯನ್ನು ಶನಿವಾರ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಬಿಲಾಲ್ ಅಹ್ಮದ್ ಬ್ಲಾಕ್ ಬೋರ್ಡ್ ಹೊಂದಿರುವ ಸೆಲ್ಪ್ ರೈಡ್ ಬೈಕ್‌ಗಳನ್ನು ಎಲ್ಲಾ ರೀತಿಯ ಅಧಿಕೃತವಾದ ಪರವಾನಗಿಯಿಂದ ಕೂಡಿದ್ದು ಜಿಲ್ಲೆಯ ಪ್ರವಾಸೋದ್ಯಮ ದೃಷ್ಟಿಯಿಂದ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡ ವ್ಯಕ್ತಿಗಳಿಗೆ ಮಾತ್ರ ಸೆಲ್ಪ್ ಬೈಕ್‌ಗಳನ್ನು ನೀಡು ತ್ತಿದ್ದೇವೆ ಎಂದು ತಿಳಿಸಿದರು.
ನಮ್ಮ ಸೆಲ್ಪ್ ಬೈಕ್‌ಗಳ ವ್ಯವಹಾರದಿಂದ ಸ್ಥಳೀಯ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಯಾವುದೇ ರೀತಿಯ ಪ್ರತ್ಯೇಕ ಅಥವಾ ಪರೋಕ್ಷವಾದ ಪೈಪೋಟಿ ಇರುವುದಿಲ್ಲ. ಜೊತೆಗೆ ಯಾವುದೇ ಬಾಡಿಗೆದಾರರಿಗೆ ಸಾರ್ವಜನಿಕ ಸ್ಥಳದಲ್ಲಿ ನೇರವಾಗಿ ಹೋಗಿ ವಾಹನ ಬಾಡಿಗೆಗೆ ನೀಡುವುದು, ಬಾಡಿಗೆದಾರರನ್ನು ಪಿಕ್ ಮಾಡುವ ಗೋಜಿಗೆ ಸಂಘವು ಹೋಗಿರುವುದಿಲ್ಲ ಎಂದು ಹೇಳಿದರು.
ನೇರವಾಗಿ ಸೆಲ್ಪ್ ಬೈಕ್‌ಗಳ ಅವಶ್ಯಕತೆಯಿದ್ದವರು ವಾಹನವನ್ನು ಬಾಡಿಗೆಗೆ ಕೇಳುವುದು ಹಾಗೂ ಚಾಲನಾ ಪರವಾನಗಿ ಹೊಂದಿರುವ ವ್ಯಕ್ತಿಗಳಿಗೆ ಮಾತ್ರ ವಾಹನವನ್ನು ಬಾಡಿಗೆಗೆ ನೀಡಲಾಗುತ್ತಿದ್ದು ಸಂಪೂರ್ಣವಾಗಿ ಸೆಲ್ಪ್ ಬೈಕ್‌ಗಳ ವ್ಯವಸ್ಥೆಯು ವೆಬ್‌ಸೈಟ್ ಮೂಲಕ ಆನ್‌ಲೈನ್ ವ್ಯವಹಾರವಾಗಿರುತ್ತದೆ ಎಂದು ತಿಳಿಸಿದರು.
ಕಾನೂನು ಬಾಹಿರವಾಗಿ ಸೂಕ್ತ ಲೈಸೆನ್ಸ್ ಪಡೆಯದೇ ಬಿಳಿ ಬೋರ್ಡ್ ವಾಹನಗಳು ಹಲವೆಡೆ ಸಂಚರಿಸು ತ್ತಿದ್ದು ಈ ವಿರುದ್ಧ ಸಂಘವು ತೀವ್ರ ವಿರೋಧ ವ್ಯಕ್ತಪಡಿಸುತ್ತದೆ. ಈ ಬಗ್ಗೆ ಪ್ರಾದೇಶಿಕ ಸಾರಿಗೆ ಕಚೇರಿಗೆ ಬಿಳಿಬೋರ್ಡ್ ವಾಹನಗಳನ್ನು ಸಾಕ್ಷಿ ಸಮೇತ ಮಾಹಿತಿ ನೀಡಲು ಸಂಘವು ಸಂಪೂರ್ಣ ಸಹಕಾರ ನೀಡಲು ಮುಂದಾಗಿದೆ ಎಂದು ತಿಳಿಸಿದರು.
Self Ride Bike ಇತ್ತೀಚೆಗೆ ಕೆಲವು ಸಂಘಟನೆಗಳು ಸೆಲ್ಪ್ ಬೈಕ್‌ಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಲಾಗಿದೆ. ಆದರೆ ಯಾವುದೇ ಸ್ಥಳೀಯ ಆಟೋ ಅಥವಾ ಟ್ಯಾಕ್ಸಿ ವಾಹನಗಳ ನಿಲ್ದಾಣಗಳಿಗೆ ತೆರಳಿ ಬಾಡಿಗೆ ಪಡೆಯುವುದು ಇದುವರೆಗೂ ಮಾಡಿರುವುದಿಲ್ಲ. ಎಲ್ಲವು ಬೈಕ್ ಪಡೆಯುವವರು ಆನ್‌ಲೈನ್ ಮೂಲಕ ನೊಂದಣಿಯಾಗಿರುತ್ತಾರೆ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಸುಮಂತ್, ಸದಸ್ಯರಾದ ಅನೀಶ್ ಚಂದ್ರ, ಶಿಥಿಲ್ ಜೈನ್, ಸಂದೇಶ್ ಮತ್ತಿತರರು ಉಪಸ್ಥಿತರಿದ್ದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.