Monday, November 25, 2024
Monday, November 25, 2024

DIPR ಮಾಧ್ಯಮ ಮಿತ್ರರಿಗೆ ಮಾಹಿತಿ ಸರಣಿ ಮಾಧ್ಯಮ ಹಾಗೂ ಬೆದರಿಕೆ

Date:

DIPR ಅನೇಕ ಬಾರಿ ನಾವು ಸುದ್ದಿ ಚಾನೆಲ್‍ಗಳು “ಅಧಿಕಾರಿಯ ಕಾಮ ಕಾಂಡ ಇನ್ನು ಕೆಲವೇ ಕ್ಷಣಗಳಲ್ಲಿ” “ಬಿಟ್ ಕಾಯನ್ ಹಗರಣದಲ್ಲಿ ಈ ಎಲ್ಲ ಅಧಿಕಾರಿಗಳ ಬಣ್ಣ ಬಯಲಾಗಲಿದೆ ಶೀಘ್ರದಲ್ಲಿ ವೀಕ್ಷಿಸಿ” “ಇಲಾಖೆಯಲ್ಲಿ ಬೃಹತ್ ಭ್ರಷ್ಟಾಚಾರ ಭ್ರಷ್ಟಚಾರಿಗಳನ್ನು ನಿಮ್ಮ ಮುಂದೆ” ಎನ್ನುವ ಬ್ರೆಕಿಂಗ್ ನ್ಯೂಸ್ ಹಾಕಿ ವೀಕ್ಷಕರಿಗೆ ಕಾಯುವ ಕುತೂಹಲ ಉಂಟು ಮಾಡಿ ಕೊನೆಗೆ ಸಿಡಿಸುವುದು ಟುಸ್ ಪಟಾಕಿಗಳನ್ನು ಅಥವಾ ಆ ಬ್ರೇಕಿಂಗ್ ನ್ಯೂಸ್ ಪ್ರಸಾರವಾಗದೇ ಕಾಣದಂತೆ ಮಾಯವಾದ ಸಂದರ್ಭಗಳನ್ನು ನೋಡಿದ್ದೇವೆ.

DIPR ಇದೇ ರೀತಿಯಲ್ಲಿ ಮುದ್ರಣ ಮಾಧ್ಯಮ ಅದರಲ್ಲೂ ವಿಶೇಷವಾಗಿ ಪಾಕ್ಷಿಕ ಪತ್ರಿಕೆಗಳು, ಅಪರಾಧ ಲೋಕವನ್ನು ಹೆಚ್ಚಾಗಿ ಪ್ರೀತಿಸುವ ಪತ್ರಿಕೆಗಳು ತಮ್ಮ ಮುಂದಿನ ಸಂಚಿಕೆಯಲ್ಲಿನ ಪ್ರಮುಖ ಲೇಖನದ ವಿವರವನ್ನು ಮುಂಗಡವಾಗಿ ಜನರ ಕುತೂಹಲವನ್ನು ಹೆಚ್ಚಿಸಲು ಪ್ರಕಟಿಸುತ್ತವೆ.

ಉದಾಹರಣೆಗೆ, ಪಿಎಸ್ ಐ ಕರ್ಮ ಕಾಂಡ ಬಯಲು ಮುಂದಿನ ಸಂಚಿಕೆಯಲ್ಲಿ ನಿರೀಕ್ಷಿಸಿ” ಅರಣ್ಯ ದೋಚುವ ಅರಣ್ಯಾಧಿಕಾರಿಗೆ ಇವರ ಶ್ರೀರಕ್ಷೆ ತನಿಖಾ ವರದಿ ನಿರೀಕ್ಷಿಸಿ” ಎಂಬ ರೀತಿಯಲ್ಲಿ ಆ ಅಧಿಕಾರಿ ಅಥವಾ ವ್ಯಕ್ತಿ/ಸಂಸ್ಥೆಯ ವಿವರಗಳನ್ನು ಪ್ರಕಟಿಸುವುದು. ಆದರೆ ಮುಂದಿನ ಸಂಚಿಕೆಗಳಲ್ಲಿ ಹೆಸರಿಗೆ ಮಾತ್ರ ಎಲ್ಲೋ ಮೂಲೆಯಲ್ಲಿ ಮುದ್ರಿಸಿ ಪತ್ರಿಕಾ ಧರ್ಮದ ಕರ್ತವ್ಯ ಪ್ರಜ್ಞೆ ಮೆರೆಯುತ್ತಾರೆ. ಅಥವಾ ಆ ವರದಿ ಮುಂದಿನ ಸಂಚಿಕೆಯಲ್ಲಿ ನಿಗೂಢವಾಗಿ ಕಣ್ಮರೆಯಾಗಿರುತ್ತದೆ.

ಈ ರೀತಿಯ ಜಾಳು ವರದಿಗಳನ್ನು ಪ್ರಕಟಿಸುವ ಅಥವಾ ಜನರಲ್ಲಿ ಕುತೂಹಲ ಮೂಡಿಸಿರುವ ಸುದ್ದಿಗಳು ಭವಿಷ್ಯದಲ್ಲಿ ಮರೆಯಾಗುವುದಕ್ಕೆ ಕಾರಣದ ಹಿಂದೆ ಯಾವ ಉದ್ದೇಶ ಅಡಗಿದೆ ಎಂಬುದನ್ನು ಪತ್ತೆ ಮಾಡಿದಾಗ ಕಂಡು ಬರುವ ಅಂಶಗಳೆಂದರೆ, ಸಂಬಂಧಿಸಿದ ವ್ಯಕ್ತಿ ಅಥವಾ ಸಂಸ್ಥೆಗೆ ಪರೋಕ್ಷವಾಗಿ ತಮ್ಮ ಬಳಿ ಬಂದು “ಸೆಟ್ಲ್” ಮಾಡಿಕೊಳ್ಳುವಂತೆ ಇರುವ ಆಹ್ವಾನ ಹಾಗೂ ಒಂದು ರೀತಿಯ ಬೆದರಿಕೆ ಎಂದರೆ ತಪ್ಪಾಗಲಿಕ್ಕಿಲ್ಲ.

ಒಂದು ಸ್ಟಿಂಗ್ ಆಪರೇಷನ್ ಮಾಡಿದ ಮಾಧ್ಯಮದ ಗುಂಪು ಅದನ್ನು ಪ್ರಸಾರ ಮಾಡಬಾರದೆಂದು ಹಣ ನೀಡಬೇಕೆಂಬ ಬೇಡಿಕೆ ಇಟ್ಟು ಸಂಬಂಧಿಸಿದ ವ್ಯಕ್ತಿಗಳಿಂದ ಹಣ ಪಡೆಯುವಾಗ

ರ ಕೈಗೆ ಸಿಕ್ಕಿ ಬಿದ್ದ ಘಟನೆಗಳು ತಮ್ಮ ವಶಕ್ಕೆ ಪಡೆದ ಅಧಿಕಾರಿಗಳು ಈ ಬೆದರಿಕೆ ತಂತ್ರಕ್ಕೆ ಬಲಿಯಾದ ಅನೇಕ ಘಟನೆಗಳನ್ನು ಬಾಯಿ ಬಿಡಿಸಿದ ನಿದರ್ಶನಗಳಿವೆ.

ಇದರ ಜೊತೆ “ಹನಿ ಟ್ರ್ಯಾಪ್” ಪ್ರಕರಣಗಳಲ್ಲಂತೂ ಪ್ರಸಾರ ಮಾಡುವ ಮೊದಲು ರೋಚಕವಾಗಿ ತೋರಿಸುವ ಪರಿ ಈ ತಂತ್ರದ ಸಂಚನ್ನು ಅನಾವರಣಗೊಳಿಸುತ್ತದೆ. ಉದಾಹರಣೆಗೆ “ರಾಜಕಾರಣಿಯ ಮಂಚ ಪುರಾಣ” ವೀಕ್ಷಿಸಿ ರಾತ್ರಿ.9 ಗಂಟೆಗೆ ಎಂದು ಬೆಳಗಿನ 8 ಗಂಟೆಯಿಂದ ಬಿಟ್ಟು ಬಿಡದೇ ಬ್ರೇಕಿಂಗ್ ನ್ಯೂಸ್ ರೀತಿಯಲ್ಲಿ ಮಿಂಚಿಸಿದರೆ ಅದು “ಅಪರಾಧಿಕ ಉದ್ದೇಶದ” ಮೂಲ ಅಂಶವನ್ನು ಆಕರ್ಷಿಸುತ್ತದೆ ಎಂಬುದನ್ನು ಮಾಧ್ಯಮವು ಅರಿತುಕೊಳ್ಳುವುದು ಸೂಕ್ತ.

ಅಂಥ ರೋಚಕ ಮಾಹಿತಿಗಳನ್ನು ಪ್ರಕಟಿಸುವ/ಪ್ರಸಾರಿಸುವ ಮುನ್ನ ಮಾಡುವ “ಸ್ಟಂಟ್” ಗಳು ಪರೋಕ್ಷವಾಗಿ ಭಾರತ ದಂಡ ಸಂಹಿತೆಯ ಅಪರಾಧದ ಅಂಶಗಳನ್ನು ಆ ಕೃತ್ಯಗಳ ಜೊತೆ ಸೇರತೊಡಗುತ್ತದೆ ಎಂಬುದನ್ನು ಗಮನಿಸಬೇಕು.

ಕಲಂ 383 ರ ದೃಷ್ಟಾಂತ ಹೀಗೆ ಹೇಳುತ್ತದೆ-
“ʼಯʼನು ಕೊಡದಿದ್ದರೆ ತಾನು ʼಯʼನಿಗೆ ಸಂಬಂಧಿಸಿದ ಮಾನಹಾನಿಕರ ಲೇಖನವನ್ನು ಪ್ರಕಟಿಸುವುದಾಗಿ ʼಕʼನು ಹೆದರಿಸುತ್ತನೆ. ಹೀಗೆ ಅವನು ತನಗೆ ಹಣ ಕೊಡುವಂತೆ ʼಯʼನನ್ನು ಪ್ರೇರೇಪಿಸುತ್ತಾನೆ. ʼಕʼನು ಬಲಾದ್ಗ್ರಹಣ ಮಾಡಿದ್ದಾನೆ.”

ಈ ದೃಷ್ಟಾಂತವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಬೆದರಿಕೆ ತಂತ್ರ ಹೇಗೆ ಅಪರಾಧವಾಗುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಅದಕ್ಕೂ ಮೊದಲು ಕಲಂ 383 ವ್ಯಾಖ್ಯಾನವನ್ನು ಗಮನಿಸುವುದು ಸೂಕ್ತ-
383.

ಸುಲಿಗೆ ಹಣ(Extortion)– ಒಬ್ಬ ವ್ಯಕ್ತಿಗೆ, ಅವನಿಗೆ ಅಥವಾ ಇತರ ಯಾವ ವ್ಯಕ್ತಿಗೆ ಉದ್ದೇಶಪೂರ್ವಕವಾಗಿ ಯಾವುದೇ ಕ್ಷತಿಯನ್ನುಂಟು ಮಾಡುವನೆಂದು ಭಯವನ್ನು ಉಂಟುಮಾಡಿ, ಆ ಮೂಲಕ ಹಾಗೆ ಭಯಕ್ಕೊಳಗಾದ ವ್ಯಕ್ತಿಯು, ಯಾವ ವ್ಯಕ್ತಿಗೆ ಯಾವುದೇ ಸ್ವತ್ತನ್ನು ಅಥವಾ ಬೆಲೆಯುಳ್ಳ ಭದ್ರತಾ ಪತ್ರವನ್ನು ಅಥವಾ ಬೆಲೆಯುಳ್ಳ ಭದ್ರತಾ ಪತ್ರವನ್ನಾಗಿ ಪರಿವರ್ತಿಸಬಹುದಾದ ರುಜು ಮಾಡಿದ ಅಥವಾ ಮೊಹರು ಮಾಡಿದ ಯಾವುದೇ ವಸ್ತುವನ್ನು ಕೊಡಲು ಅಪ್ರಾಮಾಣಿಕವಾಗಿ ಪ್ರೇರೇಪಿಸುವ ಯಾವ ವ್ಯಕ್ತಿಯು ಬಲಾದ್ಗ್ರಹಣ ಮಾಡಿದನೆಂದಾಗುತ್ತದೆ.
ದೃಷ್ಟಾಂತಗಳು:

(ಎ) ʼಯʼನು ಹಣ ಕೊಡದಿದ್ದರೆ ತಾನು ʼಯʼನಿಗೆ ಸಂಬಂಧಿಸಿದ ಮಾನಹಾನಿಕರ ಲೇಖನವನ್ನು ಪ್ರಕಟಿಸುವುದಾಗಿ ʼಕʼನು ಹೆದರಿಸುತ್ತಾನೆ. ಹೀಗೆ ಅವನು ತನಗೆ ಹಣ ಕೊಡುವಂತೆ ʼಯʼನನ್ನು ಪ್ರೇರೇಪಿಸುತ್ತಾನೆ.

ಈ ಬಲಾದ್ಗ್ರಹಣದ ವ್ಯಾಖ್ಯಾನ ಹಾಗೂ ಮೊದಲನೇ ದೃಷ್ಟಾಂತವನ್ನು ನೋಡಿದಾಗ, ಈ ಕೃತ್ಯದ ವ್ಯಾಪ್ತಿ ಹಾಗೂ ಸ್ವಭಾವ ನಮಗೆ ಗೋಚರವಾಗುತ್ತದೆ. ಸಾಮಾನ್ಯವಾಗಿ ಎಕ್ಸಟಾರ್ಷನ್ ಎಂದರೆ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯಿಂದ ಯಾವುದೇ ಸ್ವತ್ತನ್ನಾಗಲಿ(ಹಣವನ್ನು ಒಳಗೊಂಡಂತೆ) ಪಡೆಯಲು ಅಥವಾ ಭದ್ರತಾ ಪತ್ರಗಳನ್ನಾಗಿ ಮಾರ್ಪಡಿಸಲು ಬರುವಂತಹ ದಾಖಲಾತಿಗಳನ್ನು ಪಡೆಯುವುದಕ್ಕೊಸ್ಕರ ಆ ವ್ಯಕ್ತಿಯನ್ನು ಹೆದರಿಕೆಯಲ್ಲಿಟ್ಟುಕೊಂಡು ಆತನಿಂದ ಪಡೆಯುವ ಕೃತ್ಯಕ್ಕೆ ಸುಲಿಗೆ ಎನ್ನಬಹುದು.

ಇತ್ತೀಚಿಗೆ ಮಾಧ್ಯಮವೊಂದರಲ್ಲೇ ವರದಿಯಾದಂತೆ, ಇನ್ನೊಂದು ಮಾಧ್ಯಮದ ವರದಿಗಾರ ಒಬ್ಬ ವ್ಯಕ್ತಿಗೆ ಆತನ ವಿರುದ್ಧ ಕೆಟ್ಟದಾಗಿ ವರದಿ ಮಾಡುವುದಾಗಿ, ಆ ಮೂಲಕ ಆತನ ಹೆಸರನ್ನು ಸಮಾಜದಲ್ಲಿ ಹಾಳು ಮಾಡುವ, ವರ್ಚಸ್ಸಿಗೆ ಧಕ್ಕೆ ತಂದು, ತೇಜೋವಧೆ ಮಾಡುವಾಗಿ ಹೆದರಿಸಿ ಆತನಿಂದ ಹಣ ಪಡೆಯುವಾಗ ಪೋಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದನ್ನು ನಾವೆಲ್ಲ ನೋಡಿದ್ದೇವೆ.ಈ ಎಲ್ಲ ಕೃತ್ಯಗಳು ಸುಲಿಗೆ/ಬಲದ್ಗ್ರಹಣ ಅಪರಾಧವೆಂದು ಪರಿಗಣಿಸಲಾಗುತ್ತದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ನವೆಂಬರ್ 27. ಎಂ.ಆರ್.ಎಸ್. ನಲ್ಲಿ ತ್ರೈಮಾಸಿಕ ನಿರ್ವಹಣೆ. ಶಿವಮೊಗ್ಗದ ಬಹುಪಾಲು ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

MESCOM ಶಿವಮೊಗ್ಗ ಎಂ.ಆರ್.ಎಸ್. ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ...

Constitution Day ನವೆಂಬರ್ 26.”ಸಂವಿಧಾನ ದಿನ” .ಫ್ರೀಡಂ ಪಾರ್ಕಿನಲ್ಲಿ ವಿಶೇಷ ಕಾರ್ಯಕ್ರಮ

Constitution Day ನ. 26 ರಂದು 'ಸಂವಿಧಾನ ದಿನಾಚರಣೆ' ಪ್ರಯುಕ್ತ ಭಾರತ...

Shivamogga police ವಿಷ ಸೇವಿಸಿ ಮೃತಪಟ್ಟ ಅಪರಿಚಿತ ವ್ಯಕ್ತಿ.ಪೊಲೀಸ್ ಪ್ರಕಟಣೆ

Shivamogga police ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರ್ಕಾರಿ ಬಸ್ ನಿಲ್ದಾಣದ...