Inauguration of Smart Class ಸ್ಪರ್ಧಾತ್ಮಕ ಯುಗದಲ್ಲಿ ಮಾನವ ಜೀವನ ನಡೆಸುತ್ತಿದ್ದು ಕಾಲಕ್ರಮೇಣ ಜ್ಞಾನವು ಎಲ್ಲಾ ಕ್ಷೇತ್ರದಲ್ಲೂ ಪ್ರಭಾವ ಬೀರಿ ವೇಗವಾಗಿ ಮುನ್ನೆಡೆಯುತ್ತಿದೆ ಎಂದು ಎಐಟಿ ಕಾಲೇಜಿನ ಪ್ರಾಂಶು ಪಾಲ ಸಿ.ಟಿ.ಜಯದೇವ ಹೇಳಿದರು.
ಚಿಕ್ಕಮಗಳೂರು ತಾಲ್ಲೂಕಿನ ಬೀಕನಹಳ್ಳಿ ಸಮೀಪದ ಸಂತ ಝೇವಿರ‍್ಸ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಕೃತಕಬುದ್ದಿಮತ್ತೆ ಕುರಿತ ಸ್ಮಾರ್ಟ್ಕ್ಲಾಸ್‌ನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಶಾಲೆಯಲ್ಲಿ ಪ್ರಥಮ ಬಾರಿಗೆ ಸ್ಲಾರ್ಟ್ ಪ್ರಾರಂಭವಾಗಿದ್ದು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯ ಬೇಕು. ಕೃತಕಬುದ್ದಿಮತ್ತೆಯು ಕಲಿಕಾ ವಿಧಾನ, ಕೌಶಲ್ಯ ಮತ್ತು ಮನೋಭಾವಗಳ ಜ್ಞಾನ ಸಂಪಾದನೆಯ ಪ್ರಕ್ರಿಯೆ ಯಾಗಿದೆ. ಈ ತಂತ್ರಜ್ಞಾವನ್ನು ಬಳಸಿಕೊಂಡು ವಿದ್ಯಾರ್ಥಿಗಳು ಜ್ಞಾನವನ್ನು ಸಂಪಾದಿಸಬೇಕು ಎಂದರು.
ಹಿಂದಿನ ಕಾಲಘಟ್ಟದಲ್ಲಿ ಶಿಕ್ಷಣ ಸಾಂಪ್ರದಾಯಿಕವಾಗಿ ಬೋಧನೆಗೆ ಮಾತ್ರ ಸೀಮಿತವಾಗಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಬೋಧನೆ ಮತ್ತು ಕಲಿಕೆ ಒಟ್ಟೊಟ್ಟಿಗೆ ನಡೆಯಬೇಕಿದೆ. ಆ ನಿಟ್ಟಿನಲ್ಲಿ ತಾಂತ್ರಿಕತೆಯ ವಿಜ್ಞಾನ ಮತ್ತು ಗಣಿತ ಮೂಲಭೂತ ಕಲಿಕೆಗೆ ತುಂಬಾ ಉಪಕಾರಿಯಾಗಲಿದೆ ಎಂದು ತಿಳಿಸಿದರು.
ಸ್ಮಾರ್ಟ್ಪೋನ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಇಂದಿನ ಸಮಯದಲ್ಲಿ ಮಾಹಿತಿಯನ್ನು ಕಲೆ ಹಾಕಲು ಬಳಸ ಲಾಗುತ್ತಿದ್ದು ಈ ತಾಂತ್ರಿಕತೆಯು ವಿದ್ಯಾರ್ಥಿಗಳ ಜೀವನವನ್ನು ಸರಳಗೊಳಿಸಿ ಅನೇಕ ಪ್ರಯೋಜನಗಳನ್ನು ನೀಡು ತ್ತಿದೆ. ಇದೇ ವೇಳೆ ಪ್ರಥಮ ಬಾರಿಗೆ ಶಾಲೆಯಲ್ಲಿ ಸ್ಮಾರ್ಟ್ಕ್ಲಾಸ್ ಆರಂಭಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.
Inauguration of Smart Class ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಪ್ರಾಂಶುಪಾಲ ರೋಷನ್ ಸಿಕ್ವೇರಾ ಕೃತಕಬುದ್ದಿಮತ್ತೆ ತಾಂತ್ರಿಕತೆಯು ವಿದ್ಯಾರ್ಥಿಗಳಲ್ಲಿ ವಿಚಾರಣಾಶಕ್ತಿಯನ್ನು ಅಭಿವೃದ್ದಿಪಡಿಸಿ ವಿಷಯವನ್ನು ವಿಶ್ಲೇ ಷಣೆ ಮಾಡಿ ವಿವಿಧ ಆಯಾಮಗಳಲ್ಲಿ ಕಲಿಕೆಯನ್ನು ಪ್ರೋತ್ಸಾಹಿಸುವುದು ಇದರ ಮೂಲ ಉದ್ದೇಶವಾಗಿದೆ ಎಂದರು.
ಈ ತಾಂತ್ರಿಕತೆಯಿಂದ ವಿದ್ಯಾರ್ಥಿಗಳಿಗೆ ಕಲಿಯಲು, ಪ್ರಯತ್ನಶೀಲರಾಗಲು ಮತ್ತು ಪರೀಕ್ಷೆಗೆ ಒಳಪಡಿಸಲು ಸಹಾಯ ಮಾಡುತ್ತದೆ. ವಿದ್ಯಾರ್ಥಿಗಳು ಹೇಳಿದ ವಿಷಯವನ್ನು ಅರ್ಥ ಮಾಡಿಕೊಂಡಿದ್ದಾರೆಯೇ ಅಥವಾ ಇಲ್ಲ ಎಂಬುದನ್ನು ಪರೀಕ್ಷಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಹೋಲಿ ಫ್ಯಾಮಿಲಿ ಸೇವಾ ಸಮಿತಿ ಅಧ್ಯಕ್ಷ ಬಿ.ಜಿ.ಮೋಕ್ಷಿತ್, ವಕೀಲ ಎಂ.ಬಿ.ಜಯಕೀರ್ತಿ, ಆಯೋಜಕರಾದ ಆದಿತ್ಯ, ರಾಕೇಶ್, ಶಾಲೆಯ ಆಡಳಿತ ಮಂಡಳಿಯ ಸೌಮ್ಯಶ್ರೀ, ರೇಷ್ಮಾ ಮತ್ತಿತರರು ಉಪಸ್ಥಿತರಿದ್ದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.