Wednesday, October 14, 2026
Wednesday, October 14, 2026

EPFO Pension ಇಪಿಎಫ್ಓ ಪಿಂಚಣಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ

Date:

EPFO Pension  ಇಪಿಎಫ್‍ಒ ಹೆಚ್ಚಿನ ವೇತನದ ಮೇಲೆ ಪಿಂಚಣಿಗೆ ಸಂಬಂಧಿಸಿದ ಅರ್ಜಿ ಅವಧಿಯನ್ನು ಮೇ 03 ರವರೆಗೆ ವಿಸ್ತರಿಸಲಾಗಿದೆ.

2014 ರ ಸೆಪ್ಟೆಂಬರ್ 01 ರ ಮೊದಲು ನಿವೃತ್ತರಾದ ಮತ್ತು ನಿವೃತ್ತಿಯ ಮೊದಲು ಪ್ಯಾರಾಗ್ರಾಫ್ 11(3) ಅಡಿಯಲ್ಲಿ ಆಯ್ಕೆಯನ್ನು ಚಲಾಯಿಸಿದ ನೌಕರರು ಹೆಚ್ಚಿನ ವೇತನದ ಮೇಲೆ ಪಿಂಚಣಿಗೆ ಅರ್ಹರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಹೇಳಿರುವನ್ವಯ ದಿನಾಂಕ: 29-12-2022 ಮತ್ತು 05-01-2023 ರ ಸುತ್ತೋಲೆ ಮೂಲಕ ಸೂಚನೆಗಳನ್ನು ನೀಡಲಾಗಿದೆ.

ದಿನಾಂಕ:01-09-2014 ರ ಮೊದಲು ನಿವೃತ್ತರಾದ ಮತ್ತು ಅವರ ನಿವೃತ್ತಿಯ ಮೊದಲು ಜಂಟಿ ಆಯ್ಕೆಗಳನ್ನು ಚಲಾಯಿಸಿದ ಉದ್ಯೋಗಿಗಳಿಗೆ ಜಂಟಿ ಆಯ್ಕೆಗಳ ಮೌಲ್ಯೀಕರಣಕ್ಕಾಗಿ ಅರ್ಜಿಗಳನ್ನು ಸಲ್ಲಿಸಲು ಆನ್‍ಲೈನ್ ಸೌಲಭ್ಯವನ್ನು ಇಪಿಎಫ್‍ಓ ವೆಬ್‍ಸೈಟ್‍ನಲ್ಲಿ ದಿನಾಂಕ: 03-03-2023 ರವರೆಗೆ ಒದಗಿಸಲಾಗಿದೆ.

EPFO Pension  ಈಗ ಉದ್ಯೋಗಿಗಳ/ಉದ್ಯೋಗದಾತರ ಸಂಘಗಳ ಬೇಡಿಕೆಯ ಮೇರೆಗೆ ಗೌರವಾನ್ವಿತ ಅಧ್ಯಕ್ಷರು, ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು ಅಂತಹ ಉದ್ಯೋಗಿಗಳಿಂದ ಜಂಟಿ ಆಯ್ಕೆಗಳನ್ನು ಊರ್ಜಿತಗೊಳಿಸುವುದಕ್ಕಾಗಿ ಅರ್ಜಿಗಳನ್ನು ಸಲ್ಲಿಸುವ ಸಮಯವನ್ನು ಮೇ 3 ರವರೆಗೆ ವಿಸ್ತರಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Mysuru Dasara ಮೈಸೂರು ದಸರಾ ವಿದ್ಯುತ್ ದೀಪಾಲಂಕಾರಕ್ಕೆ ಸಚಿವ ಜಾರ್ಜ್ ಚಾಲನೆ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ವಿದ್ಯುತ್‌ ದೀಪಾಲಂಕಾರಕ್ಕೆ...

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...