Swachh Bharath ಮನೆ ಮನೆ ಕಸ ಸಂಗ್ರಹಕಾರರ ಪೌರಕಾರ್ಮಿಕರರಿಗೆ ಕನಿಷ್ಟ ವೇತನವನ್ನು ನೀಡದೇ ಹಾಗೂ ಸುರಕ್ಷತೆಯ ಕಿಟ್ ವ್ಯವಸ್ಥೆಯು ಕಲ್ಪಿಸದಿರುವ ಪರಿಣಾಮ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ದಸಂಸ (ಪ್ರೋ.ಕೃಷ್ಣಪ್ಪ ಸ್ಥಾಪಿತ ಬಣ) ರಾಜ್ಯ ಸಂಚಾಲಕ ತರೀಕೆರೆ ವೆಂಕಟೇಶ್ ಹೇಳಿದರು.
ಚಿಕ್ಕಮಗಳೂರಿನ ಆಜಾದ್‌ಪಾರ್ಕ್ನಲ್ಲಿ ಎರಡನೇ ದಿನಕ್ಕೆ ಕಾಲಿಟ್ಟ ಗುತ್ತಿಗೆ ಪೌರಕಾರ್ಮಿಕರ ಸಂಘದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರತಿನಿತ್ಯ ಮನೆ ಮನೆಗಳಿಗೆ ಗಂಟೆಗಾಡಿಗಳ ಮೂಲಕ ಕಸ ಸಂಗ್ರಹಿಸುವವರಿಗೆ ಸೂಕ್ತ ಭದ್ರತೆಯಿಲ್ಲದೇ ಪರಿತಪಿಸುವಂತಾಗಿದೆ ಎಂದು ತಿಳಿಸಿದರು.
Swachh Bharath ಕಳೆದ ಹಲವಾರು ವರ್ಷಗಳಿಂದ ಕಸ ಸಂಗ್ರಹಣೆ ವೃತ್ತಿಯಲ್ಲಿ ಬದುಕುತ್ತಿರುವ ಪೌರಕಾರ್ಮಿಕರು ಅನೇಕ ರೋಗರುಜಿನಿಗಳಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗೆಂದು ತೆರಳಿದರೆ ಸಾವಿರಾರು ರೂ.ಗಳು ತಗುಲಲಿದೆ. ಇದರೊಂದಿಗೆ ವೃತ್ತಿಯಲ್ಲಿ ಕನಿಷ್ಟ ವೇತನವು ಸಿಗದ ಪರಿಣಾಮ ಊಟಕ್ಕಿದ್ದರೆ ಬಟ್ಟೆಗಿಲ್ಲ, ಬಟ್ಟೆಗಿದ್ದರೆ ಊಟಕ್ಕಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ನಗರಸಭಾ ಆಡಳಿತವು ಗುತ್ತಿಗೆ ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಮೂಲಕ ಸಮಾಜ ದಲ್ಲಿ ಸದೃಢವಾಗಿ ಬದುಕಲು ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆ ನಂತರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿ ಮಾಹಿತಿ ತಿಳಿಸಿದ ತರೀಕೆರೆ ವೆಂಕಟೇಶ್ ಕೂಡಲೇ ಗುತ್ತಿಗೆ ಪೌರಕಾರ್ಮಿಕರ ಕನಿಷ್ಟ ವೇತನ, ಸೂಕ್ತ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ಕೀರ್ತಿ, ಸಂಘದ ಅಧ್ಯಕ್ಷ ನಾಗರಾಜ್, ಮುಖಂಡರುಗಳಾದ ಮೋಹನ್, ಆನಂದ್, ಶ್ರೀನಿವಾಸ್, ಎಸ್.ಪಿ.ಪವನ ಮತ್ತಿತರರು ಹಾಜರಿದ್ದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
