Kannada literature ಶಿವಮೊಗ್ಗ ಯಾವ ದೇಶದಲ್ಲಿ ಸಾಹಿತ್ಯದ ಕೊರತೆ ಇರುತ್ತದೆಯೋ ಆ ದೇಶ ಎಂದೂ ಕೂಡ ಅಭಿವೃದ್ದಿ ಕಾಣದೆ ವಿನಾಶದ ಅಂಚಿಗೆ ಸಾಗುತ್ತದೆ. ಇದಕ್ಕೆ ಅಫ್ಘಾನಿಸ್ತಾನವೇ ಸಾಕ್ಷಿ ಎಂದು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ ಅಭಿಪ್ರಾಯಪಟ್ಟರು.
ಶಿವಮೊಗ್ಗದ ಗೋಪಾಳ, ವನಸಿರಿ ಉದ್ಯಾನವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ವನಸಿರಿ ಗೋಪಾಳ ನಿವಾಸಿಗಳ ಸಂಘ ವತಿಯಿಂದ ಆಯೋಜಿಸಿದ್ದ ‘ಸಾಹಿತ್ಯ ಹುಣ್ಣಿಮೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಫ್ಘಾನಿಸ್ತಾನದಲ್ಲಿ ಲಲಿತ ಕಲೆಗಳು, ಹಾಗೂ ಸಾಹಿತ್ಯವನ್ನು ಕಡೆಗಣಿಸಿ, ಅಲ್ಲಿ ಯಾವುದೇ ಅಭಿವೃದ್ಧಿ ಸಾಧಿಸದೆ ವಿನಾಶದ ಅಂಚಿಗೆ ತಲುಪಿದೆ ಎಂದ ಅವರು, ಒಬ್ಬ ಮನುಷ್ಯನಲ್ಲಿ ಸಾಹಿತ್ಯದ ಅಭಿರುಚಿ ಇದ್ದರೆ ಆತ ಕೆಟ್ಟ ಮಾರ್ಗದಲ್ಲಿ ಸಾಗುವುದಿಲ್ಲ ಎಂದರು.
ಸಾಹಿತ್ಯ ಜ್ಞಾನ ಬೆಳೆಸಿಕೊಂಡರೆ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಯೊಬ್ಬರೂ ಕೂಡ ನಮ್ಮವರೆ. ಜಾತಿ, ಧರ್ಮ ತೊರೆದು ಅವರಿಗೆ ಗೌರವ ಸಲ್ಲಿಸುವ ಕಾಯಕ ನಮ್ಮದಾಗಬೇಕು. ಆದರೆ, ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅವರ ಜನ್ಮ ದಿನ ಆಚರಿಸಲು ಒಕ್ಕಲಿಗ ಸಂಘಕ್ಕೆ ಹೇಳಿ ಕಳಿಸುವಂತಾಗಿದೆ. ಅದೇ ರೀತಿ ಸರ್ವಜ್ಞ ಜಯಂತಿ ಆಚರಿಸಲು ಕುಂಬಾರ ಸಂಘ, ಕನಕ ದಾಸರ ಜಯಂತಿಯನ್ನು ಕುರುಬರು ನೆರೆವೇರಿಸುತ್ತಾರೆ. ದ.ರಾ ಬೇಂದ್ರೆ ಅವರ ಜಯಂತಿಯನ್ನು ಬ್ರಾಹ್ಮಣರು ಆಚರಿಸುತ್ತಾರೆ. ನಾವು ಎಂತಹ ಕೆಟ್ಟ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ ಎಂದರೆ ಜಿಲ್ಲಾಡಳಿತ, ಸರ್ಕಾರ ಈ ರೀತಿ ಕಾರ್ಯಕ್ರಮ ಆಯೋಜಿಸಿದಾಗ ಹೋಗಲೂ ಕೂಡ ನಮಗೆ ಸೋಮರಿತನ ತಡೆಯುತ್ತದೆ ಎಂದು ಬೇಸರವ್ಯಕ್ತ ಪಡಿಸಿದರು.
ಸಮಾಜ ಜಾತಿಯ ವ್ಯವಸ್ಥೆಯಲ್ಲಿ ಬೆಂದು ಹೋಗುತ್ತಿದೆ. ಸಾಹಿತ್ಯದಿಂದ ಜಾತಿ ತೊಲಗಿಸಲು ಸಾಹಿತ್ಯವನ್ನು ಓದುವ ಜನರಿಂದ ಮಾತ್ರ ಸಾಧ್ಯ. ಸಾಮಾಜದ ಬಂದುಗಳು ಓದುವ ಹವ್ಯಾಸ ಬೇಳೆಸಿಕೊಳ್ಳಬೇಕು. ಆಗ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಮನೆಯಲ್ಲಿ ಪೋಷಕರು ಓದುವ ಹವ್ಯಾಸ ಬೆಳೆಸಿಕೊಂಡರೆ ಮಕ್ಕಳು ಅದನ್ನೆ ಪಾಲಿಸುತ್ತಾರೆ. ಹರಟೆ ಕೂಡ ಸಾಹಿತ್ಯದ ಒಂದು ಭಾಗ. ಆದರೆ ಅನಾವಶ್ಯಕ ಹರಟೆಯಲ್ಲಿ ಕಾಲ ಕಳೆಯುವುದು ಬೇಡ ಎಂದು ಸಲಹೆ ನೀಡಿದರು.
ವನಸಿರಿ ಗೋಪಾಳ ನಿವಾಸಿಗಳ ಸಂಘ ಅಧ್ಯಕ್ಷ ಡಾ.ಶ್ರೀನಿವಾಸ್ ರೆಡ್ಡಿ ಅವರು ಮಾತನಾಡಿ, ಈ ರೀತಿಯ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮದಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ. ಸಾಹಿತ್ಯಾಸಕ್ತಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಸಮಾಜ ಸುಧಾರಿಸಲು ಸಾಧ್ಯ ಎಂದ ಅವರು, ಮುಂದಿನ ದಿನದಲ್ಲಿ ಸಮಾಜದ ಬಾಂದವರೆ ಒಟ್ಟಾಗಿ ಈ ರೀತಿಯ ವೇದಿಕೆ ನಿರ್ಮಾಣಕ್ಕೆ ಸಾಕ್ಷಿ ಆಗಲಿ ಎಂದರು.
Kannada literature ಶ್ರೀ ಆದಿ ರಂಗನಾಥ ಕಲಾ ಬಳಗ ಮತ್ತು ಗೋಪಾಳ, ಶ್ರೀನಿಕೇತನ ಭಜನಾ ಮಂಡಳಿ, ಶ್ರೀ ರಾಗರಂಜನಿ ಭಜನಾ ಮಂಡಳಿ ವತಿಯಿಂದ ಭಜನೆ ನಡೆಯಿತು. ತುಂಗಾನಗರ ಎನ್.ಜೆ ಮೆಲೋಡೀಸ್ ನವಜ್ಯೋತಿ ಅಂದರ ಸಂಸ್ಥೆ ಕೆ.ಆರ್. ಬಸವರಾಜ್ ಹಾಗೂ ದೀಪ್ತಿ ಶಿವಕುಮಾರ್ ಅವರಿಂದ ಹಾಡು, ರಾಜಲಕ್ಷ್ಮಿ ಮತ್ತು ತಂಡದಿಂದ ವೃಂದಗಾನ, ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಎಚ್.ಆರ್. ಕೃಷ್ಣ ಮೂರ್ತಿ, ಲೇಖಕಿ ದೀಪಾ ಕುಬ್ಸದ್, ಚಾಲುಕ್ಯನಗರ ಭಾರತಿ ಅವರಿಂದ ಕವನ ವಾಚನ ಹಾಗೂ ಕುಂಸಿ ಪ್ರಶಾಂತ್ ಅವರಿಂದ ಹನಿಗವನ ವಾಚನ ನೆರೆವೇರಿತು. ಈ ಸಂದರ್ಭದಲ್ಲಿ ಹೋಳಿ ಹುಣ್ಣಿಮೆ ಹಾಗೂ ಮಹಿಳಾ ದಿನವನ್ನು ಆಚರಿಸಲಾಯಿತು.
ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಎಸ್ ಮಂಜುನಾಥ್, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಮಂಜುನಾಥ್, ವನಸಿರಿ ಗೋಪಾಳ ನಿವಾಸಿಗಳ ಸಂಘ ಕಾರ್ಯದರ್ಶಿ ಉಮೇಶ್ ಬಾಪಟ್, ಆದಿ ರಂಗನಾಥ ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್. ಜಿ ಆನಂದರಾವ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಮಹಾದೇವಿ, ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕಿ ಲತಾ ಶುಭಕರ್, ಸಾಹಿತಿ ಡಾ. ಶುಭಮರವಂತೆ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.