Chikmagalur ಮಕ್ಕಳಲ್ಲಿ ದೇಶವನ್ನು ಪ್ರೀತಿಸುವ, ದೇಶಪ್ರೇಮ ಬೆಳೆಸುವ ಶಿಕ್ಷಣವನ್ನು ಭಾರತ ಸೇವಾದಳ ನೀಡುತ್ತಿದೆ. ಎಲ್ಲಾ ಶಾಲೆಗಳಲ್ಲಿ ಭಾರತ ಸೇವಾದಳ ಘಟಕಗಳ ಸ್ಥಾಪನೆಗೆ ಮುಂದಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್.ಮಂಜುನಾಥ್ ಹೇಳಿದರು.
ಚಿಕ್ಕಮಗಳೂರು
ತಾಲ್ಲೂಕಿನ ಬೀಕನಹಳ್ಳಿ ಸಮೀಪದ ಸಂತ ಝೇವಿರ‍್ಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಾ.ಸು.ಹರ್ಡಿಕರ್ ಅವರ ಭಾರತ ಸೇವಾದಳ ನೂತನ ಶಾಖೆಯನ್ನು ಸ್ಥಾಪಿಸಿ ಅವರು ಮಾತನಾಡುತ್ತಿದ್ದರು.
ಶಾಲೆಗಳಲ್ಲಿ ಭಾರತ ಸೇವಾದಳ ಘಟಕಗಳು ಸ್ಥಾಪನೆಯಾಗುವುದರಿಂದ ಮಕ್ಕಳಲ್ಲಿ ಶಿಸ್ತು, ದೇಶಪ್ರೇಮ ಮೂಡಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಎಲ್ಲ ಶಾಲೆಗಳಲ್ಲಿಯೂ ಭಾರತ ಸೇವಾದಳ ಘಟಕಗಳು ಪ್ರಾರಂಭವಾಗಿ ಉತ್ತಮ ನಡಾವಳಿ ಶಿಸ್ತು ಬೆಳೆಸುವಂತಾಗುತ್ತದೆ ಎಂದು ತಿಳಿಸಿದರು.
ಪ್ರತಿಯೊಬ್ಬರು ರಾಷ್ಟಧ್ವಜ, ಚಿಹ್ನೆ, ರಾಷ್ಟçಲಾಂಛನಗಳನ್ನು ಗೌರವಿಸಬೇಕು. ಸೇವಾಮನೋಭಾವನೆ ಎನ್ನುವುದು ಸೇವಾದಳದ ಮುಖ್ಯ ಧೇಯ್ಯೋದ್ಧೇಶವಾಗಿದೆ. ಶಿಕ್ಷಕರು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವತ್ತ ಗಮನ ನೀಡಬೇಕು ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲೆಯನ್ನು ಬೀಕನಹಳ್ಳಿ ಸಮೀಪದ ಬೆಟ್ಟ ಗುಡ್ಡಗಳು ಹಾಗೂ ನದಿಗಳ ಸಮೀಪದಲ್ಲಿ ನಿರ್ಮಿಸಲಾಗಿದೆ. ಉತ್ತಮ ಗಾಳಿ ಹಾಗೂ ಪರಿಸರವನ್ನು ಹೊಂದಿರುವ ಶಾಲೆಯು ಮುಂದಿನ ದಿನ ಗಳಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
Chikmagalur ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂತ ಝೇವಿಯರ್ ಶಾಲೆಯ ಸ್ಥಾಪಕ ರೋಷನ್ ಸಿಕ್ವೇರಾ ಮಕ್ಕಳ ಅನುಕೂಲಕ್ಕಾಗಿ ಭಾರತ ಸೇವಾದಳ ಸಂಸ್ಥೆ ವತಿಯಿಂದ ಇಂದು ಶಾಲೆಯಲ್ಲಿ ಶಾಖೆಯನ್ನು ಸ್ಥಾಪಿಸಿ ರುವುದು ಅತ್ಯಂತ ಖುಷಿಯ ಸಂಗತಿ. ವಿದ್ಯಾರ್ಥಿಗಳು ಸೇವಾದಳದಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಶೀಲರಾ ಗಬೇಕು ಎಂದು ತಿಳಿಸಿದರು.
ಸೇವಾದಳ ಕಾರ್ಯದರ್ಶಿ ಹಂಪಯ್ಯ ಮಾತನಾಡಿ ವಿದ್ಯಾರ್ಥಿಗಳಿಗೆ ಸೇವಾದಳ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಶಾಖೆಯನ್ನು ಪ್ರಾರಂಭಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಬೇಕು ಎಂದು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಸೇವಾದಳದ ದೈಹಿಕ ಶಿಕ್ಷಣಾಧಿಕಾರಿ ಜ್ಞಾನಮೂರ್ತಿ, ತಾಲ್ಲೂಕು ಶಿಕ್ಷಣ ಪರಿವೀಕ್ಷಕ ಛಲವಾದಿ, ಜಿಲ್ಲಾ ಸಂಘಟಕರಾದ ಚಂದ್ರಕಾಂತ್, ಕುಮಾರ್, ರಾಜಶೇಖರಪ್ಪ, ಕುಮಾರಸ್ವಾಮಿ, ಶಿವಪ್ಪ, ಪಾಂಡು, ಶ್ರೀನಿವಾಸ್, ಪ್ರಕಾಶ್, ರಶ್ಮಿ, ಮೀನಾಕ್ಷಿ ಶಾಲೆಯ ಶಿಕ್ಷಕರಾದ ರೇಷ್ಮಾ, ಸೌಮ್ಯಶ್ರೀ ಮತ್ತಿತರರು ಉಪಸ್ಥಿತರಿದ್ದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.