Saturday, November 23, 2024
Saturday, November 23, 2024

Araga Jnanendra ಗೃಹ ಸಚಿವರಿಗೆ ಶಿವಮೊಗ್ಗ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅರುಣ್ ಪ್ರಸಾದ್ ಮನವಿ ಪತ್ರ

Date:

Araga Jnanendra ಗೃಹ ಸಚಿವರಿಗೆ ಶಿವಮೊಗ್ಗ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅರುಣ್ ಪ್ರಸಾದ್ ಅವರು ಗೃಹ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಈ ಪತ್ರದಲ್ಲಿ
ಮಲೆನಾಡಿನ ಒಂಟಿಮನೆಗಳಿಗೆ ಭದ್ರತೆ ಒದಗಿಸುವ ಕಾಳಜಿಯಿದೆ.

ಮಾನ್ಯ ಗೃಹ ಮಂತ್ರಿಗಳಾದ ಶ್ರೀ ಆರಗ ಜ್ಞಾನೇಂದ್ರ ಅವರಿಗೆ.

ಮಾನ್ಯರೆ,

ವಿಷಯ: ಮಲೆನಾಡಿನ ಒ೦ಟಿ ಮನೆಗಳ ಸುರಕ್ಷತೆಗಾಗಿ.

ಮಲೆನಾಡಿನ ಒಂಟಿ ಮನೆಗಳು ಕಳ್ಳಕಾಕರಿಗೆ ಸುಲಭ ಗುರಿಗಳಾಗಿ ಅನೇಕ ದರೋಡೆ ಕೊಲೆಗಳು ಆಗುತ್ತಿರುವುದು ನಿಮ್ಮ ಗಮನದಲ್ಲಿದೆ.

ಹಳ್ಳಿಗಳ ಒಂಟಿ ಮನೆಗಳಲ್ಲಿ ವಯಸ್ಸಾದ ತಂದೆ ತಾಯಿಗಳು ವಾಸ ಮಾಡುತ್ತಿದ್ದಾರೆ ಅವರ ಮಕ್ಕಳು ಉದ್ಯೋಗಕ್ಕಾಗಿ ಪಟ್ಟಣ ಸೇರುತ್ತಿರುವುದು ಒಂದು ಕಾರಣ.

ಗ್ರಾಮೀಣ ಪ್ರದೇಶದಲ್ಲಿ ಅವಿಭಕ್ತ ಕುಟುಂಬಗಳು ಈಗಿಲ್ಲ ಮತ್ತು ನಾಯಿಗಳೂ ಸಾಕುವುದಿಲ್ಲ ಈ ಎಲ್ಲಾ ಕಾರಣದಿಂದ ಮಲೆನಾಡಿನ ಒಂಟಿ ಮನೆಗಳಲ್ಲಿ ಸುರಕ್ಷಿತವಾಗಿ ಜೀವನ ಮಾಡುವುದು ಕಷ್ಟವಾಗಿದೆ.

ಸರ್ಕಾರಕ್ಕೆ ಆರ್ಥಿಕ ಹೊರೆ ಇಲ್ಲದ ಈ ಕೆಳಕಂಡ ಅಂಶಗಳನ್ನು ತಾವು ಪರಿಶೀಲಿಸಿ ಜಾರಿ ತಂದರೆ ಮಲೆನಾಡಿನ ವಾಸಿಗಳಿಗೆ ದೊಡ್ಡ ಉಪಕಾರವಾಗಲಿದೆ.

1. ಮಲೆನಾಡಿನ ಒಂಟಿ ಮನೆಗಳಿಗೆ ಕಡ್ಡಾಯ ಸಿಸಿ ಕ್ಯಾಮೆರಾ ಅಳವಡಿಸುವ ಬಗ್ಗೆ ಸ್ಥಳಿಯ ಗ್ರಾಮ ಪಂಚಾಯತ್ ಸಹಯೋಗದಿಂದ ಪೋಲಿಸ್ ಇಲಾಖೆ ಜನ ಜಾಗೃತಿ ಮಾಡಿ ಸಿಸಿ ಕ್ಯಾಮೆರಾ ಆಯಾ ಮನೆಯವರು ಅವರ ಸ್ವಂತ ಹಣದಿಂದ ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಮಾಡುವುದು.

2. ಹಳ್ಳಿಗಳ ಪ್ರಮುಖ ಜಂಕ್ಷನ್ ಗಳಲ್ಲಿ ಸ್ಥಳೀಯ ದಾನಿಗಳ ಗ್ರಾಮ ಪಂಚಾಯತ್ ಗಳ ಮತ್ತು ಸ್ಥಳಿಯ ಸಂಘ ಸಂಸ್ಥೆಗಳಿಂದ ಸಿಸಿ ಕ್ಯಾಮೆರಾ ಅಳವಡಿಸಲು ಪೋಲಿಸ್ ಇಲಾಖೆ ಪ್ರೇರೇಪಿಸಬೇಕು (ಸಾಗರದಲ್ಲಿ ಎ.ಎಸ್.ಪಿ ಆಗಿದ್ದ ನಿಶಾ ಜೇಮ್ಸ್ ಇದನ್ನ ಯಶಸ್ವಿಗೊಳಿಸಿದ್ದರು)

3. ಶಾಸಕರು ಮತ್ತು ಸಂಸದರ ನಿಧಿಯಲ್ಲಿ ಹೈ ಮಾಸ್ಕ್ ದೀಪ ಅಳವಡಿಸುತ್ತಾರೆ ಅದೇ ಕಂಬಕ್ಕೆ 360° ಸಿಸಿ ಕ್ಯಾಮೆರಾ ಅಳವಡಿಕೆಯ ಅನಿವಾರ್ಯತೆ ಅವರುಗಳಿಗೆ ಗೃಹ ಇಲಾಖೆಯಿಂದ ಮನವರಿಕೆ ಮಾಡಿ ಅದರ ಅಳವಡಿಕೆ ವೆಚ್ಚ ಅವರಿಂದಲೇ ಹೈ ಮಾಸ್ಕ್ ದೀಪದ ಜೊತೆ ಸೇರಿಸುವಂತೆ ಮಾಡಬೇಕು.

4. ಒಂಟಿ ಮನೆಗಳಲ್ಲಿ ಒಂದಕ್ಕಿಂತ ಹೆಚ್ಚು ಒಳ್ಳೆಯ ತಳಿಯ ನಾಯಿಗಳನ್ನು ಸಾಕಲು ಪೋಲಿಸ್ ಇಲಾಖಾ ಅಧಿಕಾರಿಗಳು ಜನಸ್ಪಂದನಾ ಸಭೆಗಳ ಮೂಲಕ ಪ್ರೇರೇಪಿಸಬೇಕು.

5. ಮಲೆನಾಡಿನಲ್ಲಿ ವಯಸ್ಸಾದ ತಂದೆ ತಾಯಿಗಳನ್ನು ಬಿಟ್ಟು ಪಟ್ಟಣಗಳಲ್ಲಿ ಉದ್ಯೋಗ ಮಾಡುವ ಮಕ್ಕಳಿಗೆ ಪೋಲಿಸ್ ಇಲಾಖೆ ಸಿಸಿ ಕ್ಯಾಮೆರಾ ಅಳವಡಿಸಿ ಅವರ ಸೆಲ್ ಫೋನ್ ಗಳಲ್ಲಿ ಮಾನಿಟರಿಂಗ್ ಮಾಡುವ ಬಗ್ಗೆ ಏನಾದರೂ ಅಪಾಯವಾದರೆ ತಕ್ಷಣ ಯಾರನ್ನ ಸಂಪರ್ಕಿಸಬೇಕೆಂಬ ಮಾಹಿತಿ ಸಾಮಾಜಿಕ ಜಾಲ ತಾಣದ ಮೂಲಕ ಪೋಲಿಸ್ ಪ್ರಕಟನೆಗಳು ನಿರಂತರವಾಗಿ ನೀಡುತ್ತಿರಲಿ.

Araga Jnanendra 6. ಮಲೆನಾಡಿನ ಹಳ್ಳಿಗಳಲ್ಲಿ ಆಸಕ್ತ ಯುವ ಜನಾಂಗದವರಿಗೆ ತರಬೇತಿ ನೀಡಿ ಗ್ರಾಮ ರಕ್ಷಕ ಪಡೆ ರಚಿಸಿ ಸ್ಥಳಿಯ ಪೋಲಿಸರಿಗೆ ಸಹಕರಿಸಲು, ಗುಪ್ತ ಮಾಹಿತಿ ಹಂಚಿಕೊಳ್ಳುವ ಮೂಲಕ ಅನೇಕ ಅನುಕೂಲ ಪೋಲಿಸ್ ಇಲಾಖೆ ಪಡೆಯಬಹುದು ಸಾಂಗ್ಲಿಯಾನ ಸಾಗರ ತಾಲ್ಲೂಕಿನಲ್ಲಿ ಅವರ ಅವದಿಯಲ್ಲಿ ಇದನ್ನು ಮಾಡಿದ್ದರು.

7. ಪೋಲಿಸ್ ಇಲಾಖೆ ಬಂದೂಕು ತರಬೇತಿ ನೀಡಿ ಒಂಟಿ ಮನೆಗಳಿಗೆ ಸುಲಭವಾಗಿ ಗನ್ ಹೊಂದಲು ಗನ್ ಲೈಸೆನ್ಸ್ ಕೊಡಿಸಬೇಕು.

8. ಚುನಾವಣೆಗಳಲ್ಲಿ ಬಂದೂಕು ಪೋಲಿಸ್ ಇಲಾಖೆಗೆ ಸರೆಂಡರ್ ಮಾಡುವ ಅವೈಜ್ಞಾನಿಕ ಆದೇಶ ಹಿಂಪಡೆಯಬೇಕು.

ಇದಕ್ಕೆಲ್ಲ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆ ಬೀಳುವುದಿಲ್ಲವಾದ್ದರಿಂದ ಜಿಲ್ಲೆಯವರೇ ಆದ ಗೃಹ ಮಂತ್ರಿಗಳಾದ ಆರಗ ಜ್ಞಾನೇಂದ್ರ ಅವರು ತಕ್ಷಣ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ವಿನಂತಿಸುತ್ತೇನೆ.

ಇತಿ ವಿಶ್ವಾಸಗಳೊಂದಿಗೆ.

ಕೆ.ಅರುಣ್ ಪ್ರಸಾದ್
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ
ಆನಂದಪುರಂ – ಸಾಗರ ತಾಲ್ಲೂಕ್

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...