Sunday, August 23, 2026
Sunday, August 23, 2026

Hosanagara ಕಾರಣಗಿರಿಯಲ್ಲಿ ಸಾಹಿತ್ಯ ಸಂಸ್ಕೃತಿ ಉತ್ಸವ

Date:

Hosanagara  ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಪ್ರಾಬಲ್ಯ ಇನ್ನಷ್ಟು ಹೆಚ್ಚಬೇಕು ಎಂದು ಅಖಿಲ ಭಾರತ ಕವಯಿತ್ರಿ ಸಂಘದ ಅಧ್ಯಕ್ಷೆ ಡಾ.ಜಿ.ಎಸ್. ಸರೋಜ ಅಭಿಪ್ರಾಯಪಟ್ಟಿದ್ದಾರೆ.

ಹೊಸನಗರದ ಕಾರಣಗಿರಿಯ ಸಿದ್ಧಿವಿನಾಯಕ ಸಭಾಭವನ ಗ್ರಾಮಭಾರತಿ ಟ್ರಸ್ಟ್ , ರಾಷ್ಟ್ರೋತ್ಥಾನ ಬಳಗದ ಆಶ್ರಯದಲ್ಲಿ ನಡೆದ 2 ದಿನಗಳ ಸಾಹಿತ್ಯ ಸಂಸ್ತೃತಿ ಉತ್ಸವದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಹಿಂದೆಲ್ಲ ದೇವಸ್ಥಾನಗಳು ಕಲೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಕ್ಕೆ ಆಶ್ರಯ ನೀಡಿದ್ದವು. ಈಗಲೂ ದೇವಸ್ಥಾನ ಕೇಂದ್ರೀತವಾಗಿ ಕಲೆ, ಸಾಹಿತ್ಯದ ಚಟುವಟಿಕೆ ಪ್ರೋತ್ಸಾಹಗಳು ಹೆಚ್ಚ ಬೇಕು ಎಂದರು.

ಲೇಖಕಿ ಶಾರದಾ ವಿ ಮೂರ್ತಿಯವರು ಸಾಹಿತ್ಯಾವಲೋಕನದ ಕುರಿತು ಮಾತನಾಡಿದ ಅವರು, ಶಾರದ ಮೂರ್ತಿಯವರು 50ರಷ್ಟು ಕೃತಿಗಳನ್ನು ಹೊರ ತಂದಿದ್ದು ಅವರ ಸಾಹಿತ್ಯದ ವಿಮರ್ಶೆಯ ಕಾರ್ಯ ಶ್ಲಾಘನೀಯ  ಎಂದರು.

ಸಾಹಿತ್ಯ ಸಂಸ್ಕೃತಿ ಉತ್ಸವವನ್ನು ವಿದುಷಿ ಶ್ರೀಮತಿ ಶೀಲಾ ರಾಮನ್ ಉದ್ಘಾಟಿಸಿದರು. ಶಾರದ ಮೂರ್ತಿಯವರ ಸಾಹಿತ್ಯದ ಕುರಿತು ಶ್ರೀಮತಿ ವಸುಧಾ ಚೈತನ್ಯ ಹಾಗೂ ಡಾ.ಅಂಜಲಿ ಅಶ್ವಿನ್ ಕುಮಾರ್ ಮಾತನಾಡಿದರು.

ಹುಬ್ಬಳ್ಳಿಯ ಶ್ರೀಮತಿ ನಿವಣಿ ನಾಗರತ್ನ ವಿ .ಜೋಶಿ ಮತ್ತು ಸಾಹಿತಿ ಶಾರದಾ ವಿಮೂರ್ತಿಯವರನ್ನು ಸನ್ಮಾನಿಸಿದರು.

Hosanagara  ಕಲದರ್ಶನ ಮಾಸಿಕೆಯ ಪ್ರಧಾನ ಸಂಪಾದಕ ಡಾ. ಹಾದಿಗಲ್ಲು ಲಕ್ಷ್ಮಿ ನಾರಾಯಣ ಅಭಿನಂದನಾ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಭಾರತೀ ಟ್ರಸ್ಟ್ ಅಧ್ಯಕ್ಷರಾದ ಎನ್ ಡಿ ನಾಗೇಂದ್ರರಾವ್, ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ಕೆ ಎಸ್ ನಳಿನ ಚಂದ್ರ ಇನ್ನು ಮುಂತಾದ ಗಣ್ಯರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Karnataka Nataka Academy 2026-27 ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ‌ ಪ್ರಶಸ್ತಿ‌ ಘೋಷಣೆ

Karnataka Nataka Academy ಕರ್ನಾಟಕ ನಾಟಕ ಅಕಾಡೆಮಿಯ 2026-27ನೇ ಸಾಲಿನ ಜೀವಮಾನ...

Paripurna Educational Charitable Trust ನಿತ್ಯ ದೇಹಕ್ಕೆ ಅಗತ್ಯವಿರುವಷ್ಟು ನೀರು ಸೇವಿಸಿ. ಸದೃಢ ಆರೋಗ್ಯ ಸಾಧಿಸಿ- ಸತೀಶ್ ಚಂದ್ರ

ಮಕ್ಕಳು ಪ್ರತಿ ದಿನ ದೇಹಕ್ಕೆ ಅಗತ್ಯ ಇರುವಷ್ಟು ನೀರು ಕುಡಿಯಬೇಕು. ಅಗತ್ಯವಿರುವಷ್ಟು...