Chikkamagaluru ಭಾರತದ ಯುವವಿಜ್ಞಾನಿ ಹಾಗೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಪ್ರತಿಮ ಸಾಧನೆ ಮಾಡಿರುವ ಅವೇಸ್ ಅಹಮದ್ ಅವರಿಗೆ ದೊಡ್ಡಮಾಗರವಳ್ಳಿ ಗ್ರಾ.ಪಂ, ನಾಗರೀಕ ಸನ್ಮಾನ ಸಮಿತಿ ಹಾಗೂ ಜಿಲ್ಲಾ ಸರ್ಕಾರಿ ಮುಸ್ಲೀಂ ನೌಕರರ ಕ್ಷೇಮಾಭಿವೃದ್ದಿ ಸಂಘದಿಂದ ಆಲ್ದೂರಿನಲ್ಲಿ ಕಾಫಿ ನಾಡ ಕಣ್ಮಣಿ ಎಂಬ ಪ್ರಶಸ್ತಿ ನೀಡಿ ಅವರನ್ನು ಗೌರವಿಸಿದೆ.
ಈ ವೇಳೆ ಮಾತನಾಡಿದ ಮುಸ್ಲೀಂ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಫೈರೋಜ್ ಅಹ್ಮದ್ ಹದಿಹರೆಯದ ವಯಸ್ಸಿನಲ್ಲಿ ಅವೇಸ್ ಅಹಮದ್ ಅವರು ಮೋಜುಮಸ್ತಿಗಾಗಿ ಬಳಸಿಕೊಳ್ಳದೇ ಶಿಸ್ತುಬದ್ಧ ಅಧ್ಯಯನದಿಂದ ಗಣಿತ ಶಾಸ್ತçದ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.
Chikkamagaluru ಅವೇಸ್ 19ನೇ ಹರೆಯದಲ್ಲಿ ಪಿಕ್ಸೆಲ್ ಬಾಹ್ಯಾಕಾಶ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿ ವಿಶ್ವದ ಗಮನ ಸೆಳೆಯುವುದರ ಜೊತೆಗೆ ಕಳೆದೆರಡು ವರ್ಷಗಳಲ್ಲಿ ಬಾಹ್ಯಾಕಾಶ ಮತ್ತಿತರ ವಿಜ್ಞಾನ ಕ್ಷೇತ್ರದಲ್ಲಿ ಮಾಡುತ್ತಿ ರುವ ಅನುಪಮ ಸಾಧನೆ ಅವರದು. 2022ರಲ್ಲಿ ಮತ್ತೊಂದು ಉಪಗ್ರಹವನ್ನು ಭಾರತದ ಶ್ರೀಹರಿ ಕೋಟಾದಿಂದ ಉಡಾವಣೆಗೈದು ಭಾರತೀಯ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದಾರೆ ಎಂದರು.
ಇಂತಹ ಅಪ್ರತಿಮ ಸಾಧಕರು ಮಲೆನಾಡು ಪುಟ್ಟ ಊರಿನವರಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾದ ಹಿನ್ನೆಲೆಯಲ್ಲಿ ಅವರಿಗೆ ಕಾಫಿ ನಾಡು ಕಣ್ಮಣಿ ಎಂದು ಪ್ರಶಸ್ತಿ ನೀಡಿ ಗೌರವಿಸಲಾಗಿರುವುದು ಸಂತೋಷದ ಸಂಗತಿ ಎಂದರು.
ಇದೇ ವೇಳೆ ಶಾಸಕ ಎಂ.ಪಿ.ಕುಮಾರಸ್ವಾಮಿ, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಡಾ. ಸಿ.ಕೆ.ಸುಬ್ಬರಾಯ ಸೇರಿ ದಂತೆ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವೇಸ್ ಅಹಮದ್ ಅವರಿಗೆ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ದೊಡ್ಡಮಾಗರವಳ್ಳಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ನಂದಿನಿ ಈ ಮಂಜುನಾಥ್, ಆಲ್ದೂರು ಗ್ರಾ.ಪಂ. ಅಧ್ಯಕ್ಷ ಫೃಥ್ವಿ ಸಂತೋಷ್, ಮುಸ್ಲಿಂ ನೌಕರರ ಸಂಘದ ಉಪಾಧ್ಯಕ್ಷ ಆಫ್ತಾಭ್, ಸುಹಾನ, ಕಾರ್ಯದರ್ಶಿ ತಾರೀಖ್ ಆಲಿ, ಖಜಾಂಚಿ ಜಾಕೀರ್ ಹುಸೇನ್, ರಾಜ್ಯ ನಿರ್ದೇಶಕ ಅಜ್ಗರ್ ಆಲಿ ಮತ್ತಿತರರು ಉಪಸ್ಥಿತರಿದ್ದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.