Wednesday, November 20, 2024
Wednesday, November 20, 2024

SHARAVATHI HABBA ಹೊಸನಗರ ಮತ್ತು ಸಾಗರಕ್ಕೆ ಸಾಮೀಪ್ಯ ಬೆಸೆದ ಪಟಗುಪ್ಪೆ ಸೇತುವೆ-ಹರತಾಳು ಹಾಲಪ್ಪ

Date:

SHARAVATHI HABBA ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪಟಗುಪ್ಪ ಸೇತುವೆಯ ಬಳಿ ಶರಾವತಿ ಹಿನ್ನೀರಿನ ಹಬ್ಬವನ್ನು ಆಚರಿಸಲಾಯಿತು.

ಮುಖ್ಯ ವೇದಿಕೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ಮತ್ತು ಕಲಾತಂಡಗಳು ನಡೆಸಿಕೊಟ್ಟ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಕರಿಗೆ ರಂಜಿಸುವಂತೆ ಮಾಡಿತು.


ಸಮೂಹ ನೃತ್ಯ, ದೇವರ ಕುಣಿತ, ಜಾನಪದ ನೃತ್ಯ, ಬಳೆ ಕೋಲಾಟ, ಚಂಡೆ- ಮದ್ದಳೆ ಎಲ್ಲರ ಗಮನಿಸಿರುವಂತೆ ಮಾಡಿತು. ಮಂಗಳೂರಿನ ಕಲಾತಂಡದವರು ವೈವಿಧ್ಯಮಯವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.


ಸಾಗರ, ಹೊಸನಗರ, ರಿಪ್ಪನ ಪೇಟೆ ಭಾಗದ ಜನರು ಕುಟುಂಬ ಸಮೇತರಾಗಿ ಹಿನ್ನೀರ ಹಬ್ಬಕ್ಕೆ ಆಗಮಿಸಿದ್ದರು. ಶರಾವತಿ ಹಿನ್ನೆರ ಹಬ್ಬದಲ್ಲಿ ಆಹಾರ ಮೇಳ ಕೂಡ ನಡೆದಿತ್ತು. ವೈವಿಧ್ಯಮಯವಾದ ಖಾದ್ಯಗಳನ್ನು ಜನರು ಸವಿದರು.


ರುಮಾಲಿ ರೋಟಿ, ಮಲೆನಾಡಿನ ವಿಶೇಷವಾದ ಅಕ್ಕಿ ಕಡುಬು, ಕಜ್ಜಾಯ, ಗೋಬಿ ಮಂಚೂರಿ, ಪಾನಿ ಪುರಿ, ಖಾರ ಮಂಡಕ್ಕಿ ಹೀಗೆ ನಾನಾ ಬಗೆಯ ಖಾದ್ಯಗಳಿದ್ದವು.


SHARAVATHI HABBA ಶರಾವತಿ ಹಿನ್ನೀರಿನ ಹಬ್ಬ ಉದ್ದೇಶಿಸಿ ಮಾತನಾಡಿದ ಸಾಗರದ ಶಾಸಕ ಹರತಾಳು ಹಾಲಪ್ಪ ಅವರು, ಪಟಗುಪ್ಪ ಸೇತುವೆ ಈ ಹಿಂದೆ ಸಾಗರ ಮತ್ತು ಹೊಸನಗರ ಪಟ್ಟಣಗಳಿಗೆ ಹತ್ತಿರ ದಾರಿ. ಈ ಮೊದಲು ಇದ್ದ ಸೇತುವೆ ಶರಾವತಿ ಹಿನ್ನೀರಿ ನಲ್ಲಿ ಮುಳುಗಿ ಹೋಗಿತ್ತು. ಸಣ್ಣ ಸೇತುವೆ ಇರುವ ಜಾಗ ಹಿನ್ನೀರಿನಿಂದ ಮುಳುಗಿದ್ದ ರೂ ಐದಾರು ದಶಗಳವರೆಗೆ ದಾರಿ ಕಾಣದೆ ಬಟ್ಟೆ ಮಲ್ಲಾಪುರ ದ ಮೂಲಕ ಸಾಗರ – ಹೊಸನಗರ ದಾರಿ ಕಂಡು ಕೊಳ್ಳುವಂತಾಗಿತ್ತು. ಆದ್ದರಿಂದ 56 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಸೇತುವೆ ಕಟ್ಟಿ ವರ್ಷದ ಹಿಂದೆ ಲೋಕಾರ್ಪಣೆ ಮಾಡಲಾಗಿದೆ ಎಂದರು.


ಹಿನ್ನೀರ ಹಬ್ಬದ ಬಗ್ಗೆ ಕಣ್ಣೀರ ಹಬ್ಬ ಎಂಬ ಭಾಗಶಃ ಟೀಕೆ ಕೇಳಿ ಬಂದಿದೆ.
ಒಂದು ರೀತಿ ನಾಡಿಗೇ ಬೆಳಕು ಕೊಟ್ಟವರು ನೆಲೆಯಿಲ್ಲದೇ ನರಳುತ್ತಿರುವವರ ಕಣ್ಣೀರಿಗೆ ಬೆಳಕು ಪಡೆದ ನಾವು ಎಲ್ಲರೂ ಕಾರಣರು ಎಂಬುದನ್ನ
ಮರೆಯುವಂತಿಲ್ಲ
ಸ್ವಲ್ಪ ಕಾಲವಾದರೂ
ಆ ಕಣ್ಣುಗಳಲ್ಲಿ ಸಂತೋಷ ಬಂತಲ್ಲ ಅದೇ ಹಬ್ಬದ ಸಾಫಲ್ಯ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Kannada and Culture ಶಿವಮೊಗ್ಗ ಜಿಲ್ಲೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ- ಉಮೇಶ್ ಹಾಲಾಡಿ

Department of Kannada and Culture ಸಾಂಸ್ಕೃತಿಕ ಕ್ಷೇತ್ರದಲ್ಲಿ ಶಿವಮೊಗ್ಗ ಜಿಲ್ಲೆ...