Thirthahalli ತೀರ್ಥಮತ್ತೂರು ವ್ಯಾಪ್ತಿಯ ಕೊಡಿಗೆಬೈಲು ದೇವಾಲೇಕೊಪ್ಪದಲ್ಲಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ನೂತನ ಶಿಲಾಮಯ ಗರ್ಭಗುಡಿಯ ಪುನರ್ ಪ್ರತಿಷ್ಠಾಪನಾ ಮತ್ತು ಮಹಾಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ.
ಇದರ ಪ್ರಯುಕ್ತ ಮಾರ್ಚ್ 8ರಿಂದ 10ರವರೆಗೆ ವೈವಿಧ್ಯ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಶೃಂಗೇರಿ ಶಾರದಾಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳ ಅಮೃತಹಸ್ತದಿಂದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮತ್ತು ಪರಿವಾರ ದೇವರುಗಳ ಪುನರ್ ಪ್ರತಿಷ್ಠಾಪನಾ, ಮಹಾಕುಂಭಾಭಿಷೇಕ ಕಾರ್ಯಗಳು ನೆರವೇರಲಿವೆ.
ಮಾರ್ಚ್ 8ರಿಂದ ಧಾರ್ಮಿಕ ಪೂಜಾ ವಿಧಿ ವಿಧಾನಗಳು ಆರಂಭಗೊಳ್ಳಲಿದೆ. ಮಾರ್ಚ್ 8ರ ಬೆಳಗ್ಗೆ 9ಕ್ಕೆ ಫಲ ಸಮರ್ಪಣೆ, ಗುರು ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ, ದೇವನಾಂದಿ, ಮಹಾಗಣಪತಿ ಹೋಮ, ಪ್ರಾಯಶ್ಚಿತ್ತ ಹೋಮ, ಬಿಂಬಶುದ್ಧಿ, ನೇತ್ರೋನ್ಮಿಲನ, ಸಂಜೆ 6ಕ್ಕೆ ಶಿಲ್ಪಿ ಪೂಜಾ, ಪ್ರಾಕಾರ ಶುದ್ಧಿ, ಗೋಪ್ರವೇಶ, ಗೇಹ ಪರಿಗ್ರಹ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾಬಲಿ, ಪ್ರತಿಷ್ಠಾಂಗ ಸಮಷ್ಟಿ ಹೋಮ, ದೇವಯ ಶಯ್ಯಾಕಲ್ಪನ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ನಡೆಯಲಿವೆ.
ಮಾರ್ಚ್ 9ರಂದು ಬೆಳಗ್ಗೆ 5.30ಕ್ಕೆ ನಡೆಯುವ ಕುಂಭ ಲಗ್ನದಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ, ಮತ್ತು ಪರಿವಾರ ದೇವರುಗಳ ಪುನಃ ಪ್ರತಿಷ್ಠಾಪನಾ, ಅಷ್ಟಬಂಧ ಸಂಯೋಜನೆ, ಪ್ರತಿಷ್ಠಾ ಹೋಮ, ಜೀವಕುಂಭ ಸ್ಥಾಪನಾ, ಪ್ರಾಣಪ್ರತಿಷ್ಠೆ, ತತ್ವಕಲಶಾಭಿಷೇಕ, ಪಂಚವಿಂಶತಿ, ದ್ರವ್ಯಕಲಶಾಧಿವಾಸ ಪೂಜೆ ಹೋಮ ನಡೆಯಲಿದೆ.
ಮಾ. 9ರ ಬೆಳಗ್ಗೆ 10ಕ್ಕೆ ಶೃಂಗೇರಿ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳ ಆಗಮಿಸಲಿದ್ದಾರೆ. ಪೂರ್ಣಕುಂಭ ಸ್ವಾಗತ ಮಾಡಲಿದ್ದು, ಬ್ರಹ್ಮ ಕಲಶೋತ್ಸವ ನಡೆಯಲಿದೆ.
ಬೆಳಗ್ಗೆ 11ರಿಂದ 11.30ಕ್ಕೆ ಸಲ್ಲುವ ವೃಷಭ ಲಗ್ನದಲ್ಲಿ ಶ್ರೀ ಜಗದ್ಗುರುಗಳಿಂದ ಮಲ್ಲಿಕಾರ್ಜುನ ಸ್ವಾಮಿ ದೇವರು ಮತ್ತು ಪರಿವಾರ ದೇವರುಗಳಿಗೆ ಕುಂಭಾಭಿಷೇಕ ಮಹಾಪೂಜೆ, ಶಿಖರ ಕುಂಭಾಭಿಷೇಕ ನಡೆಯಲಿದೆ.
ಮಧಾಹ್ನ 12ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ವೇದಘೋಷ, ಜಗದ್ಗುರುಗಳಿಗೆ ಫಲಸಮರ್ಪಣೆ ಹಾಗೂ ಶ್ರೀ ಜಗದ್ಗುರುಗಳಿಂದ ಆಶೀರ್ವಚನ, ಫಲ ಮಂತ್ರಾಕ್ಷತೆ ನಡೆಯಲಿದೆ.
ಮಾ. 9ರ ಸಂಜೆ 6ಕ್ಕೆ ಶಾಂತಿ ಹೋಮ, ಪ್ರಾಯಶ್ಚಿತ ಹೋಮ, ನಾಗ ಪ್ರತಿಷ್ಠೆಯ ಪ್ರಯುಕ್ತ ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ನಾಗಬಿಂಬ ಶುದ್ಧಿ, ನೇತ್ರೋನ್ಮಿಲನ, ಶಯ್ಯಾಕಲ್ಪನ, ದಿಕ್ಬಲಿ ಪೂಜೆ ನೆರವೇರಲಿದೆ. ಮಾ. 10ರ ಬೆಳಗ್ಗೆ 9.45ಕ್ಕೆ ಮೇಷ ಲಗ್ನದಲ್ಲಿ ನಾಗ ಪ್ರತಿಷ್ಠಾಪನೆ ಕಲಶಾಭಿಷೇಕ, ಮಲ್ಲಿಕಾರ್ಜುನ ದೇವರಿಗೆ ಶತರುದ್ರಾಭಿಷೇಕ, ಮಹಾಪೂಜೆ ಹಾಗೂ ಮಹಾಪ್ರಸಾದ ವಿನಿಯೋಗ ಇರಲಿದೆ.
ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ ನೂತನ ಶಿಲಾಮಯ ಗರ್ಭಗುಡಿ ಪ್ರತಿಷ್ಠಾಪನೆ ಪ್ರಯುಕ್ತ ಮಾ. 8, 9, 10ರಂದು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಮಾ. 8ರ ಸಂಜೆ 7ಕ್ಕೆ ಭಜನಾ ಕಾರ್ಯಕ್ರಮ, ಮಾ. 9ರ ಸಂಜೆ 6.30ರಿಂದ ಆರ್ಟ್ ಆಫ್ ಲಿವಿಂಗ್‌ನ ಸ್ವಾಮಿ ಸೂರ್ಯಪಾದಾ(ಛಾಯಣ್ಣ)ಜೀ ಅವರಿಂದ ದಿವ್ಯಸತ್ಸಂಗ(ಗಾನ, ಜ್ಞಾನ, ಧ್ಯಾನ) ಕಾರ್ಯಕ್ರಮ ಹಾಗೂ ಮಾ. 10ರ ಸಂಜೆ 7ಕ್ಕೆ ರೂಪಕಲಾ ಕುಂದಾಪುರ ಬಾಲಕೃಷ್ಣ ಪೈ ( ಕುಳ್ಳಪ್ಪು ) ಅರ್ಪಿಸುವ “ಮೂರು ಮುತ್ತು” ಕಲಾವಿದರಿಂದ ಹಾಸ್ಯ ನಗೆ ನಾಟಕ ನಡೆಯಲಿದೆ.
ಭಕ್ತಾಧಿಗಳಿಗೆ ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಅನ್ನ ಸಂತರ್ಪಣೆ ಇರುತ್ತದೆ.
Thirthahalli ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಜೀಣೋದ್ಧಾರ ಸಮಿತಿ ಹಾಗೂ ದೇವಾ ಸಮಿತಿಯು ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆಸಲಾಗಿದೆ. ದೇವಸ್ಥಾನದ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.