Friday, March 20, 2026
Friday, March 20, 2026

Sarji Super Speciality Hospital ಕಲೆ ಉಳಿಯ ಬೇಕೆಂದರೆ ಕಲಾವಿದರನ್ನ ಪ್ರೋತ್ಸಾಹಿಸಬೇಕು-ಚಿತ್ರನಟಿ ಆಶಾಭಟ್

Date:

Sarji Super Speciality Hospital ಶಿವಮೊಗ್ಗದ ಸರ್ಜಿ ಫೌಂಡೇಶನ್‌ ವತಿಯಿಂದ ದಕ್ಷಿಣ ಭಾರತದ ಖ್ಯಾತ ನಟಿ, ರಾಬರ್ಟ್‌ ಸಿನಿಮಾದ ಹೀರೋಯಿನ್‌ ಆಶಾಭಟ್‌ ಅವರನ್ನು ಸರ್ಜಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನೀವು ನಮ್ಮ ಹೆಮ್ಮೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಆಶಾಭಟ್‌ ಅವರು ಮಾತನಾಡಿ, ಈ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ತುಂಬಾ ಸಂತಸವನ್ನು ಕೊಟ್ಟಿದೆ. ಇದು ನನ್ನ ಸೌಭಾಗ್ಯಕೂಡ. ಕಲೆ ಮತ್ತು ಕಲಾವಿದರು ಬೆಳೆಯಬೇಕು, ಉಳಿಯಬೇಕು ಎಂದರೆ ಕಲಾವಿದರನ್ನು ಪ್ರೋತ್ಸಾಹಿಸುವಂತಹ ಕೆಲಸಗಳಾಬೇಕು.ಈ ನಿಟ್ಟಿನಲ್ಲಿ ಡಾ.ಧನಂಜಯ ಸರ್ಜಿ ಅವರು ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ಅಲ್ಲದೇ ಇಂತಹ ಸನ್ಮಾನಗಳು ಸಾಧಕರಿಗೆ ಮತ್ತಷ್ಟು ಸಾಧನೆ ಮಾಡಲು ಪ್ರೇರಣೆ ನೀಡುತ್ತವೆ ಎಂದು ಹೇಳಿದರು.

ಸರ್ಜಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ಮ್ಯಾನೇಜಿಂಗ್‌ ಡೈರೆಕ್ಟರ್‌ ಡಾ.ಧನಂಜಯ ಸರ್ಜಿ ಅವರು ನಟಿ ಆಶಾಭಟ್‌ ಅವರನ್ನು ಸನ್ಮಾನಿಸಿ ಮಾತನಾಡಿ, ಸಾಧನೆಗೆ ಕುಟುಂಬದವರ ಪ್ರೋತ್ಸಾಹ ಹಾಗೂ ಉತ್ತಮ ವಾತಾವರಣವೂ ಪ್ರಮುಖವಾಗುತ್ತದೆ.ಹೆತ್ತವರ ಬೆಂಬಲ ಮತ್ತು ಸತತ ಪ್ರಯತ್ನದ ಫಲವಾಗಿ ಇಂದು ನಟಿ ಆಶಾಭಟ್‌ ಸಿನಿಮಾ ರಂಗದಲ್ಲಿ ಬಹು ಎತ್ತರಕ್ಕೆ ಬೆಳೆದಿದ್ದಾರೆ. ದೊಡ್ಡ ಕನಸನ್ನು ಇಟ್ಟುಕೊಂಡು ಗುರಿ ಬೆನ್ನತ್ತಿದಾಗ ಜೀವನವೂ ಹಾಗೆಯೇ ರೂಪುಗೊಳ್ಳುತ್ತದೆ. ಹಲವಾರು ಭಾಷೆ ಹಾಗೂ ಹಲವು ಕಲೆಗಳನ್ನು ಕರಗತ ಮಾಡಿಕೊಂಡು ನಿರಂತರ ಶ್ರಮದೊಂದಿಗೆ ಒಳ್ಳೆಯ ಕಲಾವಿದೆಯಾಗಿ ಆಶಾಭಟ್‌ ಅವರು ಹೆಸರು ಮಾಡಿದ್ದಾರೆ. ಇನ್ನಷ್ಟು ದೊಡ್ಡಮಟ್ಟದಲ್ಲಿ ಬೆಳೆಯಲಿ ಎಂದು ಆಶಿಸಿದರು.

Sarji Super Speciality Hospital ಹುಟ್ಟು ಮತ್ತು ಸಾವಿನ ಮಧ್ಯೆ ಜೀವನವನ್ನು ಹೇಗೆ ರೂಪಿಸಿಕೊಳ್ಳುತ್ತೇವೆ ಎಂಬುದು ಮುಖ್ಯ. ಇಂದಿಗೂ ಕನ್ನಡನಾಡು ನಟ ಪುನೀತ್‌ ರಾಜ್‌ಕುಮಾರ್‌ ಅವರನ್ನು ನಿತ್ಯವೂ ಸ್ಮರಣೆ ಮಾಡುತ್ತಿದೆ. ನಟನೆಯೊಂದಿಗೆ ದಾನ, ಧರ್ಮ , ಮಾನವೀಯ ಹಾಗೂ ಸಮಾಜಮುಖಿ ಕಾರ್ಯಗಳು ಅದಕ್ಕೆ ಕಾರಣ ಎಂದರು.

ಸರ್ಜಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕಿ ನಮಿತಾ ಸರ್ಜಿ ಹಾಜರಿದ್ದರು.

ನಟಿ ಆಶಾಭಟ್‌ ಅವರ ತಾಯಿ ಶಾಮಲಾ ಭಟ್‌, ಸಿಹಿಮೊಗೆಯ ಸಾಲು ದೀಪಗಳು ಪುಸ್ತಕದ ಲೇಖಕಿ ದೀಪಾ ಕುಬಸದ್‌ ಅವರನ್ನು ಸನ್ಮಾನಿಸಲಾಯಿತು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...