City corporation Shivamogga ಪಾಲಿಕೆಯಲ್ಲಿ ಮಂಡಿಸಿರುವ ಬಜೆಟ್ ಮನೆಗೂ ಅಲ್ಲ ,ಸ್ಮಶಾನಕ್ಕೂ ಅಲ್ಲ. ಇದು ಕನ್ನಡಿಯೊಳಗಿನ ಗಂಟು ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಕನ್ನಡಿ ಹಿಡಿದು ಪಾಲಿಕೆ ಆವರಣದಲ್ಲಿ ಪ್ರತಿಭಟಸಿದರು.
ಬಜೆಟ್ ಮಂಡನೆ ನಂತರ ಹಿಂದಿನ ವರ್ಷದ ಖರ್ಚು ವೆಚ್ಚದ ಕುರಿತು ಸಭೆಯಲ್ಲಿ ಚರ್ಚೆಗೆ ಆಸ್ಪದ ಕೊಡಿ ಎಂದು ವಿರೋಧ ಪಕ್ಷದ ಸದಸ್ಯರು ಕೇಳಿಕೊಂಡರು.
City corporation Shivamogga 2023-24ನೇ ಸಾಲಿನ ಬಜೆಟ್ ನಲ್ಲಿ ಲವ ಕುಶ ಮಕ್ಕಳ ಕಲ್ಯಾಣ ಯೋಜನೆ ಅಡಿ ಪಾಲಿಕೆ ವ್ಯಾಪ್ತಿಯಲ್ಲಿ ಮಕ್ಕಳಲ್ಲಿ ಕಲೆ, ನಾಟಕ, ಆಟ ಇತ್ಯಾದಿ ವಿಕಾಸಕ್ಕಾಗಿ ಬಾಲ ವಿಕಾಸ ಕೇಂದ್ರಗಳ ಮೂಲಕ ಚಟುವಟಿಕೆ ರೂಪಿಸಲು 10 ಲಕ್ಷ ಮೀಸಲಿರಿಸಲಾಗಿದೆ ಎಂದು ಹೇಳುತ್ತಿದ್ದಾರೆ.
ಆದರೆ ಕಳೆದ ಬಜೆಟ್ ನಲ್ಲಿಯೂ ಕೂಡ ಇದೆ ಯೋಜನೆಗೆ 10 ಲಕ್ಷ ಮೀಸಲಿಡಲಾಗಿತ್ತು . ಆದರೆ ಅದರಲ್ಲಿ ಒಂದು ರೂಪಾಯಿ ಕೂಡ ಬಳಕೆಯಾಗಿಲ್ಲ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್, ಚನ್ನಬಸಪ್ಪ, ರಮೇಶ್ ಹೆಗಡೆ, ಎಚ್ ಸಿ ಯೋಗೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.