Thursday, October 3, 2024
Thursday, October 3, 2024

ಕೊಪ್ಪಳ ಜಿಲ್ಲೆಯ ಹಿರೇಬೆಣಕಲ್ ಸನಿಹ ಅಪರೂಪದ ಶಿಲಾತಾಣ

Date:

ಕರ್ನಾಟಕ ಮಹಾ ಶಿಲೆಯ ತಾಣಗಳಲ್ಲಿ ಒಂದಾದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗುಡ್ಡಗಾಡಿನ ಬೆಟ್ಟದ ಮೇಲೆ ಇರುವ ಸುಮಾರು 2500 ವರ್ಷಗಳ ಹಿಂದಿನ ಪುರಾತನವಾದ ಶಿಲಾ ತಾಣ, ಹಾಗು ಗುಡ್ಡದ ದೂಡ್ಡದಾದ ಬಂಡೆಯ ಮೇಲೆ ಬಿಡಿಸಲಾದ ಬಣ್ಣದ ಚಿತ್ರಗಳನ್ನು ಮತ್ತು ಬೆಟ್ಟಪ್ರದೇಶದ ತುಟ್ಟ ತುದಿಯ ಮೇಲೆ ಇರುವ ಕೆರೆಯನ್ನು ಮತ್ತು ಹಿಂದಿನ ಕಾಲದ ಇತಿಹಾಸ, ಜನರ ಜೀವನ ಶೈಲಿ, ಇವುಗಳನ್ನು ಸಾಮಾನ್ಯವಾಗಿ ತಿಳಿಯಬೇಕಾದರೆ ಮತ್ತು ಆಗ ವಾಸವಾಗಿದ್ದ ಜನರ ಧೈರ್ಯ, ಸಾಹಸ, ಸಹಾಯ ,ಜಾಣ್ಮೆ, ಗುರಿಯನ್ನು ಕಾಣಬೇಕಾದರೆ ಈ ಪುರಾತನ ಸ್ಥಳಗಳ ವೀಕ್ಷಣೆ ಮತ್ತು ಇತಿಹಾಸದ ತಿಳುವಳಿಕೆಯಿಂದ ಮಾತ್ರ ಸಾಧ್ಯ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಪುಟ್ಟ ಗ್ರಾಮದ ಬೆಟ್ಟದ ಮೇಲೆ ಇರುವ ಶಿಲಾ ತಾಣಗಳು ಸುಮಾರು 500 ಕ್ಕೂ ಹೆಚ್ಚು.

ಸುಮಾರು 2500 ವರ್ಷಗಳ ಹಿಂದೆ, ಈ ಸ್ಥಳದಲ್ಲಿ ಕುಬ್ಚ ಜಾನಂಗದ ಜನತೆ ವಾಸವಾಗಿದ್ದರು, ಅವರು ಹೆಚ್ಚಾಗಿ ಘರ್ಷಣೆ ಮತ್ತು ಯುದ್ದದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರಂತೆ, ಸಾಮಾನ್ಯವಾಗಿ ಆ ಜನ ದನಕರುಗಳನ್ನು ಮತ್ತು ಕುರಿಗಳನ್ನು ಸಾಕುತ್ತಿದ್ದರು.

ಕಬ್ಬಿಣದ ಸಾಮಾಗ್ರಿಗಳನ್ನು ಅವರು ತಮ್ಮ ಕೈಯಿಂದ ಮಾಡುವುದನ್ನು ಅವರು ಅರೆತಿದ್ದರು. ಇಲ್ಲಿ ಒಂದು ವಿಶೇಷ ಎಂದರೆ ಈ ಜನ ಇವರ ಮರಣದ ನಂತರ ಶವಗಳನ್ನು ಹಿರೇಬೆಣಕಲ್ ಗುಡ್ಡದ ಮೇಲೆ ಟನ್ ಗಟ್ಟಲೆ ಭಾರವಾದ ಕಲ್ಲು ಚಪ್ಪಟೆಯನ್ನು ಜೋಡಿಸಿ ತಾಣಗಳಾಗಿ ಮಾಡಿ, ಆ ಸ್ಥಳದಲ್ಲಿ ಶವ ಸಂಸ್ಕಾರ ಮಾಡುತ್ತಿದ್ದರು.

ಇತಿಹಾಸ ತಜ್ಞರು ಹೇಳುವಂತೆ ಇಲ್ಲಿನ ಎಲ್ಲಾ ಶಿಲಾ ತಾಣಗಳು ವಯಸ್ಕ ಪುರುಷ ತಾಣವಾಗಿರುತ್ತವೆ ಆದರೆ ಮಕ್ಕಳು ಅಥವಾ ಮಹಿಳೆಯರ ಶವವನ್ನು ಅವರು ಏನುಮಾಡುತ್ತಿದ್ದರು ಎಂಬುದು ತಿಳಿದಿಲ್ಲ, ಮತ್ತು ದೂಡ್ಡ ದೂಡ್ಡ ಬಂಡೆಗಳನ್ನು ಯಾವರೀತಿ ಕತ್ತರಿಸಿ ಟನ್ ಗಟ್ಟಲೆ ಭಾರವಾದ ಬಂಡೆಗಳನ್ನು ಗುಡ್ಡದ ಮೇಲೆ ಯಾವರೀತಿ ಸಾಗಿಸುತ್ತಿದ್ದರು ಮತ್ತು ತಾಣವಾಗಿ ಮಾರ್ಪಾಡು ಮಾಡುತ್ತಿದ್ದರು ಎಂಬುದು ಇಂದಿಗೂ ನಿಗೂಢವಾಗಿದೆ.

ಸುಮಾರು 2500 ವರ್ಷಗಳ ಹಿಂದಿನ ಈ ಗುಡ್ಡ ಇಂದು ಪ್ರವಾಸಿ ತಾಣವಾಗಿದೆ. ಹೊಸಪೇಟೆ, ಕೊಪ್ಪಳ ಮತ್ತು ಗಂಗಾವತಿ ಭಾಗದ ಜನರು ಈ ಪ್ರವಾಸಿ ಐತಿಹಾಸಿಕ ಪುರಾತನ ಶಿಲಾತಾಣವನ್ನು ನೋಡಲು ಹೋಗಿ ಒಂದು ದಿನ ಇಲ್ಲಿಯೇ ಉಳಿದು ವಾಪಾಸು ಬರುತ್ತಾರೆ.
ಇಲ್ಲಿ ಇನ್ನೊಂದು ಮುಖ್ಯವಾಗಿ ನೋಡಬಹುದು, ಏನೆಂದರೆ ಈ ಗುಡ್ಡದ ಮೇಲ್ಭಾಗದಲ್ಲಿ ದೂಡ್ಡದಾದ ಬಂಡೆಗಳ ಮೇಲೆ ಬಿಡಿಸಲಾದ ಚಿತ್ರಗಳಿಗೆ ಆಗಿನ ಚಿತ್ರಗಾರರು ಬಣ್ಣವನ್ನು ಹಚ್ಚಿರುವ ಬಣ್ಣದ ಚಿತ್ರಗಳನ್ನು ಸಹ ಸ್ವಲ್ಪ ಮಟ್ಟಿಗೆ ನೋಡಬಹುದು ಸುಮಾರು 2500 ವರ್ಷಗಳ ಹಿಂದಿನ ಚಿತ್ರಕಲೆಗೆ ಬಣ್ಣ ಹಚ್ಚಿದ್ದು ಅದು ಇನ್ನೂ ಕಾಣುತ್ತಿದೆ.

ಈ ಜಾಗದಲ್ಲಿ ಕೆಲವೂಂದು ಜಾಗದಲ್ಲಿ ತಿಳಿಯಾದ ನೀರು ಶೇಖರಣೆ ಯಾಗಿ ನಿಂತಿರುವುದು, ಆದರೆ ಅದು ಸೇವಿಸಲು ಯೋಗ್ಯವಾಗಿಲ್ಲ,

ಹೊಸಪೇಟೆ ಯಿಂದ ಗಂಗಾವತಿಗೆ ಹೋಗುವ ದಾರಿಯಲ್ಲಿ ಈ ಶಿಲಾತಾಣ ಬರುತ್ತದೆ. ಈ ಜಾಗಕ್ಕೆ ಹೋಗುವವರು ಕುಡಿಯುವ ನೀರು, ಕಾಲಿಗೆ ಸುರಕ್ಷತಾ ಬೂಟು ಮತ್ತು ಹಸಿವಾದರೆ ತಿನ್ನುವುದಕ್ಕೆ ಉಪಹಾರ ಕಟ್ಟಿಕೊಂಡು ತಂಪಾದ ವೇಳೆಯಲ್ಲಿ ಹೋಗಿಬನ್ನಿ ,ವೀಕ್ಷಣೆ ಮಾಡಿದ ನಂತರ ನಿಮ್ಮ ಅನುಭವವನ್ನು ಹಂಚಿಕೊಳ್ಳಿ, ಇಲ್ಲವೆ ಈಗಾಗಲೆ ಹೋಗಿಬಂದಿದ್ದರೆ ಅಲ್ಲಿಯ ಬಗ್ಗೆ ಹೆಚ್ಚಿನ ಇತಿಹಾಸ ತಮಗೆ ತಿಳಿದಿದ್ದರೆ ಹಂಚಿಕೊಂಡರು ಬೇರೆಯವರಿಗೆ ಅನುಕೂಲವಾಗುತ್ತದೆ.

ಪುರಾತನ ಕಾಲದ ಗಂಗಾವತಿ ಹತ್ತಿರ ಇರುವ ಮಹಾ ಶಿಲಾ ತಾಣಕ್ಕೆ ಹೋಗುವವರಿಗೆ ಸೂಚನೆ ಗುಡ್ಡಗಾಡುಪ್ರದೇಶದ ಒಳಭಾಗದಲ್ಲಿ ಹೋಗುವಾಗ ದಾರಿತಪ್ಪುವ ಸಂಭವ ಇರುತ್ತದೆ. ಮತ್ತು ಕರಡಿ ಹಾವಳಿ ಇರುತ್ತದೆ ಹೋಗುವವರು ಒಬ್ಬರಾಗಿ ಹೋಗಬೇಡಿ, ಕಳೆದ ಎರಡು ವರ್ಷಗಳ ಹಿಂದೆ ಅಲ್ಲಿಗೆ ನಾವು ನಮ್ಮ ಕಿರ್ಲೋಸ್ಕರ್ ಕುಟುಂಬದ ಸದಸ್ಯರು ಸಹ ಈ ಶಿಲಾ ತಾಣವನ್ನು ವೀಕ್ಷಣೆ ಮಾಡಿ ಬಂದಿದ್ದೇವೆ.

ಮತ್ತೊಮ್ಮೆ ಕಳೆದ ತಿಂಗಳು ನಮ್ಮ ಕಾರ್ಖಾನೆಯ ಛೇರ್ಮನ್ ಶ್ರೀ ಅತುಲ್ ಕಿರ್ಲೋಸ್ಕರ್, ವ್ಯವಸ್ಥಾಪಕ ನಿರ್ದೇಶಕರು ಶ್ರೀ ಆರ್ ವಿ ಗುಮಾಸ್ತೆ ಮತ್ತು ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ ಶ್ರೀವತ್ಸನ್ ಇವರು ಸಹ ಮತ್ತೊಮ್ಮೆ ಈ ಪುರಾತನ ಹಿರೇಬೆಣಕಲ್ ಗ್ರಾಮದ ಗುಡ್ಡಗಾಡು ಪ್ರದೇಶದಲ್ಲಿ ವೀಕ್ಷಣೆ ಮಾಡಿಬಂದಿರುತ್ತಾರೆ.

ಬಹಳ ಬದಲಾವಣೆ ಆಗಬೇಕಾಗಿದೆ. ಪುರತತ್ವ ಇಲಾಖೆ ಈ ಪ್ರದೇಶಕ್ಕೆ ಹೆಚ್ಚಿನ ಗಮನ ನೀಡಿ ಅಭಿವೃದ್ಧಿ ಮಾಡಬೇಕು. ಈಜಿಪ್ಟಿನ ಪಿರಮಿಡ್ ತರಹ ಇರುವ ಈ ಪ್ರದೇಶದ ಅಭಿವೃದ್ಧಿ ಆಗಬೇಕು. ಪುರಾತನ ಕಾಲದ ಶಿಲಾಯುಗ ಉಳಿಯಬೇಕು, ಮುಂದಿನ ಪೀಳಿಗೆ ಹೆಚ್ಚಾಗ ತಿಳಿಯಬೇಕು. ಸ್ಥಳೀಯ ಸಾರ್ವಜನಿಕರ ಸಂಪರ್ಕ ಪಡೆದು ಅವರ ಸಹಕಾರದಿಂದ ಮತ್ತು ಮಾರ್ಗದರ್ಶನದಿಂದ ನೋಡಿ ಸುರಕ್ಷವಾಗಿ ವಾಪಾಸು ಬರಬೇಕು. ತಾವು ಸಹ ಹೋದರೆ ಅಲ್ಲಿಯ ಗ್ರಾಮದ ಗ್ರಾಮಸ್ಥರು ಸಹಾಯ ಮಾಡಿರಿ ಮತ್ತು ವಿಚಾರ ತಿಳಿದು ಮುಂದುವರೆದರೆ ಉತ್ತಮ.

ಮುರಳೀಧರ್ ನಾಡಿಗೇರ್
ಹೊಸಪೇಟೆ
9008017727

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ಹೆಣ್ಣುಮಕ್ಕಳಿಗೆ ಪಾಠ ಪ್ರವಚನ ಕಲ್ಪಿಸಿರುವ ಸರ್ಕಾರ ದ ಮಹತ್ವ ಯೋಜನೆ- ಭಾರದ್ವಾಜ್

Rotary Shivamogga ದೇಶದ ಏಳಿಗೆಗಾಗಿ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಮಹತ್ವದ ಕಾರ್ಯ...

Gandhi Jayanthi ಗಾಂಧೀಜಿ ಅವರಲ್ಲದೇ ಅನೇಕರ ಹೋರಾಟದ ಫಲ, ಸ್ವಾತಂತ್ರ್ಯ. ಅದನ್ನ ಉಳಿಸಿಕೊಳ್ಳಬೇಕು- ಮಧು ಬಂಗಾರಪ್ಪ

Gandhi Jayanthi ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದ ಫಲದಿಂದ ನಮಗೆ...

Shivamogga Dasara ಶಿವಮೊಗ್ಗ ದಸರಾ ಉತ್ಸವಕ್ಕೆ ಕ್ಷಣಗಣನೆ

Shivamogga Dasara ರಾಜ್ಯದ ಎರಡನೇ ಅತಿ ದೊಡ್ಡ ದಸರಾ ಮಹೋತ್ಸವ ‘ಶಿವಮೊಗ್ಗ...

Chaudeshwari Temple ಶಿವಮೊಗ್ಗ ಚಾಲುಕ್ಯನಗರದ ಶ್ರೀಚೌಡೇಶ್ವರಿ ದೇಗುಲದಲ್ಲಿ ನವರಾತ್ರಿ ಉತ್ಸವ

Chaudeshwari Temple ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ನವರಾತ್ರಿಯ...