Friday, October 4, 2024
Friday, October 4, 2024

ಸೋಮನಾಥಂ ಶರಣಂ ಪ್ರಪದ್ಯೆ

Date:

ಶ್ರೀ ಸೋಮನಾಥ :

ಸೋಮನಾಥ ದೇವಾಲಯವು ಗುಜರಾತಿನ ಪಶ್ಚಿಮ ಕರಾವಳಿಯ ಸೌರಾಷ್ಟ್ರದ ಸಮೀಪ ವೆರಾವಲ್ ನಲ್ಲಿದೆ .

ಪೌರಾಣಿಕ ಹಿನ್ನೆಲೆಯಲ್ಲಿ ಸೋಮನಾಥಕ್ಕೆ ಸೂಕ್ತ ಮಾಹಿತಿ ಇದೆ. ದಕ್ಷ ಪ್ರಜಾಪತಿಯು 27 ಕನ್ಯೆಯರನ್ನ ಚಂದ್ರನಿಗೆ ಮದುವೆ ಮಾಡಿಕೊಟ್ಟಿರುತ್ತಾನೆ. ಕ್ರಮೇಣ ಚಂದ್ರ ಕೇವಲ ಕರ‍್ತಿಕೆ ಮತ್ತು ರೋಹಿಣಿಯರೊಂದಿಗೆ ತನ್ನ ಸಮಯವನ್ನ ಕಳೆಯಲು ಆರಂಭಿಸುತ್ತಾನೆ.

ಇದು ಮಿಕ್ಕವರಿಗೆ ಸಹಿಸಲಾಗುವುದಿಲ್ಲ. ತಂದೆಯ ಬಳಿ ದೂರುತ್ತಾರೆ.ಮಾವ ದಕ್ಷ ಅಳಿಯ ಚಂದ್ರನಿಗೆ ತನ್ನ ಎಲ್ಲ ಮಕ್ಕಳನ್ನೂ ಸಮನಾಗಿ ಕಾಣು ಎಂದು ತಿಳುವಳಿಕೆ ಹೇಳುತ್ತಾನೆ. ಆದರೆ, ಚಂದ್ರ ಮಾವನ ಮಾತಿನಂತೆ ನಡೆಯುವುದಿಲ್ಲ. ಮತ್ತೆ ಮಕ್ಕಳೆಲ್ಲ ತಂದೆಯ ಬಳಿ ಚಂದ್ರನ ನಡವಳಿಕೆ ಬಗ್ಗೆ ಆಕ್ಷೇಪಿಸುತ್ತಾರೆ.ಕುಪಿತಗೊಂಡ ದಕ್ಷ ಚಂದ್ರನಿಗೆ ಕ್ಷಯಿಸು ಎಂದು ಶಾಪ ನೀಡುತ್ತಾನೆ. ಭಯಗೊಂಡ ಚಂದ್ರ ಬ್ರಹ್ಮದೇವನನ್ನ ಪ್ರರ‍್ಥಿಸುತ್ತಾನೆ.

ಚಂದ್ರ ದಿನೇದಿನೆ ಕಂದಿಹೋಗುವುದನ್ನ ದೇವತೆಗಳು ನೋಡುತ್ತಾರೆ. ಅವನಿಲ್ಲದೇ ಜಗತ್ತು ಇರದು ಎಂದು ಬ್ರಹ್ಮನಲ್ಲಿ ಪರಿಪರಿ ಬಿನ್ನವಿಸುತ್ತಾರೆ. ಆಗ ಬ್ರಹ್ಮನು ಪರಿಹಾರವನ್ನ ಸೂಚಿಸುವನು. ಸರಸ್ವತಿ ನದಿತು ಸಮುದ್ರವನ್ನ ಸೇರುವ ಸಂಗಮಸ್ಥಾನದಲ್ಲಿ ಮೃತ್ಯುಂಜಯ
ಮಂತ್ರದಿಂದ ಶಿವನನ್ನು ಧ್ಯಾನಿಸಿದರೆ ಶಾಪ ವಿಮೋಚನೆ ಎಂದು ಹೇಳುತ್ತಾನೆ.

ಅದರಂತೆ, ಚಂದ್ರನು ಅಲ್ಲಿಗೆ ಹೋಗಿ ಭಕ್ತಿ ಶ್ರದ್ಧೆಗಳಿಂದ ಹಠಕೇಶ್ವರ ಎಂಬ ಲಿಂಗವನ್ನು ಸ್ಥಾಪಸುತ್ತಾನೆ.ಅಷ್ಟೇ, ಅಲ್ಲದೆ ಒಂಟಿಕಾಲಿನಲ್ಲಿ ಮೃತ್ಯುಂಜಯ ಜಪಮಾಡುತ್ತಾನೆ.

ಹೀಗೆ ಕಠಿಣವಾಗಿ ನಿಂತು ಹತ್ತುಕೋಟಿಯಷ್ಟು ಜಪ ಮಾಡುತ್ತಾನೆ.ತಕ್ಷಣ ಶಿವನು ಪ್ರತ್ಯಕ್ಷವಾಗುತ್ತಾನೆ.
ಆಗ ಅವನಿಗೆ ಹದಿನೈದು ದಿನ ಕ್ಷಯ ಮತ್ತೆ ಹದಿನೈದು ದಿನ ವೃದ್ಧಿಯನ್ನ ದಯಪಾಲಿಸುವನು. ಪತ್ನಿಯರ ಸಂಗಡ ಸಮಾನ ಪ್ರೀತಿಯನ್ನ ತೋರಿಸೆಂದು ಬುದ್ಧಿವಾದ ಹೇಳುವನು. ಹೀಗಾಗಿ ಸೋಮನಿಗೆ ಮರುಜೀವ ನೀಡಿದ ಶಿವನ
ಲಿಂಗಕ್ಕೆ ಮತ್ತು ಸ್ಥಳಕ್ಕೆ ಸೋಮನಾಥ ಎಂಬ ಹೆಸರು ಬಂದಿದೆ.

ಕ್ರಿ.ಶ. 800 ರಲ್ಲಿ ಇಲ್ಲಿನ ಆಲಯವನ್ನು ಚಾಲುಕ್ಯರು ಮೂರನೇ ಬಾರಿಗೆ ಕಟ್ಟಿದರಂತೆ. ಆಲಯದ ಸುತ್ತ ಚಿನ್ನದ ಸರಪಳಿ,ದೀಪಗಳು,ಚಿನ್ನ ಬೆಳ್ಳಿಯಿಂದ ನರ‍್ಮಿಸಿದ ಶಿಲಾಬಾಲಿಕೆ ಇತ್ತಂತೆ. ಗರ್ಭಗುಡಿಯ ಮುಂದೆ ಚಿನ್ನದ ಸರಪಳಿಯ ಗಂಟೆ ,ನವರತ್ನದ ಆಭರಣಗಳಿಂದ ಪ್ರಜ್ವಲಿಸುತ್ತಿತ್ತಂತೆ. ಘಜ್ನ ಮಹ್ಮದನ
ದಾಳಿಯಿಂದ ಆಲಯ ಧ್ವಂಸವಾಯಿತು.

ಚಿನ್ನಬೆಳ್ಳಿಯನ್ನೆಲ್ಲ ದೋಚಿಕೊಂಡು ಹೋದ. ನಂತರ 50 ವರ್ಷಗಳ ನಂತರ ಕುಮಾರ ಬಾಲ ಎಂಬ ರಾಜ
ಮತ್ತದೇ ಚಿನ್ನಬೆಳ್ಳಿ ವೈಭದಿಂದ ಅಭಿವೃದ್ಧಿಗೊಳಿಸಿದ.ಅವನ ಕಾಲದಲ್ಲಿ ವಿದ್ಯಾಕೇಂದ್ರವಾಗಿ ಶೋಭಿಸಿತು.

ಪುನಃ ಅಲ್ಲಾವುದ್ದೀನ್ ಖಿಲ್ಜಿಯ ದಾಳಿಗೆ ತುತ್ತಾಯಿತು.ಅಲ್ಲಿಂದ ಮುನ್ನೂರು ರ‍್ಷಗಳು ಪೂಜೆಯೇ ಇರಲಿಲ್ಲ.

ಇಂದೂರಿನ ರಾಣಿ ಅಹಲ್ಯಾಬಾಯಿ ಹೊಸದಾಗಿ ಆಲಯ ನಿರ್ಮಿಸಿದರು.
ಶಿವಲಿಂಗವನ್ನ ಪ್ರತಿಷ್ಠಾಪಿಸಿದರು.

ಅತ್ಯಂತ ಭವ್ಯವಾದ ದೇಗುಲವೀಗ ನರ‍್ಮಾಣವಾಗಿದೆ. ಅದರಲ್ಲಿ ಪ್ರಾಂಗಣ,ಸಭಾಮಂಟಪ,ರ‍್ಭಗುಡಿಪ್ರಾಕಾರಗಳಿವೆ. ಸ್ರಂಭಗಳಲ್ಲಿ ಭಗವದ್ಗೀತೆ ಶ್ಲೋಕಗಳನ್ನ ಕೆತ್ತಲಾಗಿದೆ.
ಸೋಮನಾಥದಲ್ಲಿ ಐದು ಗಣೇಶ ದೇವಾಲಯ,ನೂರಮೂವತೈದು ಸರ‍್ಯದೇವಾಲಯ,ಇಪ್ಪತೈದು ದೇವಿ ಆಲಯ,ಐದು ವಿಷ್ಣು,ಹದಿನಾರು ಸರ‍್ಯ,ಒಂದು ಚಂದ್ರನ ದೇವಾಲಯಗಳಿವೆ.ಸನಿಹ ತ್ರಿವೇಣಿ ಸಂಗಮದಲ್ಲಿ ಹತ್ತೊಂಭತ್ತು ಸ್ನಾನಘಟ್ಟಗಳಿವೆ.
ಆಧುನಿಕವಾಗಿ ಸರ್ದಾರ್ ವಲ್ಲಭ ಭಾಯಿ ಪಟೇಲರಿಂದ ಹಿಡಿದು ಇಂದಿನ ಗಣ್ಯಾತಿಗಣ್ಯರ ವರೆಗೆ ತಮ್ಮದೇ ಕೊಡುಗೆಯಿಂದ ಸೋಮನಾಥದ ಪ್ರವಾಸಿ ಆಕರ್ಷಣೆಯನ್ನ ಇಮ್ಮಡಿಸಿದ್ದಾರೆ.

ಜೀವನದಲ್ಲಿ ಒಮ್ಮೆ ದರ್ಶಿಸಬೇಕಾದ ದೇವಾಲಯವಿದಾಗಿದೆ .
ಶ್ರೀಶಂಕರಾಚರ‍್ಯರು ರಚಿಸಿದ ಶ್ಲೋಕ

ಸೌರಾಷ್ಟ್ರದೇಶೇ ವಸುಧಾವಕಾಶೇ
ಜ್ಯೋತರ‍್ಮಯಂ ಚಂದ್ರಕಲಾವಸಂತಂ |
ಭಕ್ತಿ ಪ್ರದಾನಾಯ ಕೃತಾವತಾರಂ
ತಂ ಸೋಮನಾಥಂ ಶರಣಂ ಪ್ರಪದ್ಯೆ||

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Jawahar Navodaya Vidyalaya ಗಾಜನೂರಿನ ನವೋದಯ ಶಾಲಾ ಪ್ರವೇಶಾತಿ 2025-26 ಪರೀಕ್ಷೆಗೆ ಆನ್ ಲೈನ್ ಅರ್ಜಿ ಆಹ್ವಾನ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯವು 2025-26ನೇ ಸಾಲಿಗೆ 9...

Department of Parliamentary Affairs and Legislation ಅಕ್ಟೋಬರ್ 5 ರಂದು ನಡೆಯುವ “ಯುವ ಸಂಸತ್” ಸ್ಥಳ‌ ಬದಲಾವಣೆ ಗಮನಿಸಿ

Department of Parliamentary Affairs and Legislation ಸಂಸದೀಯ ಮತ್ತು ವ್ಯವಹಾರಗಳು...

MESCOM ಅ.4 ರಿಂದ7 ವರೆಗೆ ಮೆಸ್ಕಾಂ ಆನ್ ಲೈನ್ ಸೇವೆ ತಾತ್ಕಾಲಿಕ ಅಲಭ್ಯ

MESCOM ಅ.04ರಿಂದ 07 ರ ವರೆಗೆ ಮೆಸ್ಕಾಂ ಮಾಹಿತಿ ತಂತ್ರಜ್ಞಾನ...

Shivamogga Dasara ಶಿವಮೊಗ್ಗ ಚಲನಚಿತ್ರ ದಸರಾ ಚಾಲನೆಗೆ ಹಿರಿಯ ನಟಿ ಉಮಾಶ್ರೀ ಆಗಮನ

Shivamogga Dasara ಶಿವಮೊಗ್ಗ ಮಹಾ ನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿರುವ...