ಶಿವಮೊಗ್ಗದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಅವರ ಹೆಸರು ಇಡಲು ಭಾರತೀಯ ಜನತಾ ಪಕ್ಷ ಮತ್ತು ರಾಷ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಒಪ್ಪುವರೇ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್ ಅವರು ಪ್ರಶ್ನಿಸಿದ್ದಾರೆ.
ಕಾಂಗ್ರೇಸ್ ಸರ್ಕಾರ ರಾಜ್ಯಾದ್ಯಂತ ಬಡಜನರ ಹಸಿವು ನೀಗಿಸಲು ಸಾವಿರಾರು ಸಂಖ್ಯೆಯಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಿ ಈ ಕ್ಯಾಂಟೀನ್‌ಗಳಿಗೆ ಇಂದಿರಾ ಹೆಸರುಇಟ್ಟಾಗ ಬಿ.ಜೆ.ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮತ್ತು ಬಿ.ಜೆ.ಪಿ.ಯ ಕೆಲವು ನಾಯಕರು ಸರ್ಕಾರದ ಹಣದಿಂದ ನಿರ್ಮಿಸಿರುವ ಕ್ಯಾಂಟೀನ್‌ಗಳಿಗೆ ಇಂದಿರಾಗಾಂಧಿಯ ಹೆಸರು ಇಡಲು ಯಾರಪ್ಪನ ಮನೆಯಿಂದ ಅಥವಾ ನೆಹರು ಮತ್ತು ಇಂದಿರಾ ಗಾಂಧಿ ಕುಟುಂಬ ಮನೆಯಿಂದ ಹಣವನ್ನೇನಾದರೂಕಾಂಗ್ರೇಸ್ ನವರುತಂದು ಹಾಕಿದ್ದಾರೆಯೇಎಂದುಅಪಹಾಸ್ಯ ಮಾಡುವ ಮೂಲಕ ವಿರೋಧಿಸಿದ್ದರು.
ಶಿವಮೊಗ್ಗ ಜಿಲ್ಲೆಯನ್ನುಈ ಹಿಂದೆ ಸಜ್ಜನ ರಾಜಕಾರಣಿಗಳು ದಕ್ಷತೆ ಮತ್ತು ಪ್ರಾಮಾಣಿಕವಾಗಿ ಜನಪರ ಆಡಳಿತ ನಡೆಸಿ ಜಿಲ್ಲೆಯಕೀರ್ತಿಯನ್ನು ಹೆಚ್ಚಿಸಿದ್ದಾರೆ.ಇನ್ನುಜಿಲ್ಲೆಯ ಸಾಹಿತಿಗಳು ತಮ್ಮದೇಆದಅದ್ಬುತ ಸಾಹಿತ್ಯ ಬರವಣಿಗೆಯಿಂದ ಜಿಲ್ಲೆಯ ಕೀರ್ತಿಯನ್ನು ಉತ್ತುಂಗಕ್ಕೆ ಕ್ಕೆಕೊಂಡೋಯ್ದಿದ್ದಾರೆ. ಆದರೆ, ಇತ್ತೀಚೆಗೆ ಎರಡು ಮೂರು ದಶಕದಲ್ಲಿ ಬಂದ ರಾಜಕಾರಣಿಗಳು, ಜಿಲ್ಲೆಯನ್ನು ಲೂಟಿ ಮಾಡಿ, ಸಾವಿರಾರು ಕೋಟಿಗಳ ಹಣ ಮತ್ತು ಆಸ್ತಿಯನ್ನು ಮಾಡಿದ್ದು ಬಿಟ್ಟರೆ ಮತ್ತೇನನ್ನು ಮಾಡಿರುವುದಿಲ್ಲ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ನೂರಾರು ಸಂಖ್ಯೆಯಕಾಮಗಾರಿ ಪೂರ್ಣಗೊಳ್ಳದ ಸೇತುವೆ ಮತ್ತು ಕಟ್ಟಡಗಳನ್ನು ತರಾತುರಿಯಲ್ಲಿಉದ್ಘಾಟಿಸಲು ಮುಂದಾಗಿರುವುದು ಸುತಾರಾಮ್ ಒಪ್ಪುವಂತಹದ್ದು ಅಲ್ಲವೆಂದು ಜಿಲ್ಲಾವಕ್ತಾರರಾದ ವೈ.ಬಿ.ಚಂದ್ರಕಾಂತ್ ಖೇಧ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿಬಿ.ಜೆ.ಪಿ.ಯೇತರ ರಾಜಕೀಯ ಪಕ್ಷಗಳ ಸರ್ಕಾರಗಳು ಸರ್ಕಾರಿ ಕಟ್ಟಡಗಳಿಗೆ, ಸ್ಥಳಗಳಿಗೆ ತಮ್ಮ ಪಕ್ಷದ ನಾಯಕರ ಹೆಸರುಇಟ್ಟರೆ ಸಹಿಸದ ಬಿ.ಜೆ.ಪಿ ನಾಯಕರು,ತಮ್ಮ ಆಡಳಿತದಲ್ಲಿ ತಾವೇನುತಮ್ಮ ಮನೆಯಿಂದ ಹಣತಂದು ಹಾಕಿದವರಂತೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆಯಡಿಯೂರಪ್ಪರ ಹೆಸರುಇಡುವುದಕ್ಕೆ ಮುಂದಾಗಿದ್ದಾದರೂ ಏಕೆ..?
ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪರ ಹೆಸರುಇಡುವುದು, ಬಿಡುವುದು ಬಿ.ಜೆ.ಪಿ ಸರ್ಕಾರಕ್ಕೆ ಬಿಟ್ಟ ವಿಷಯವಾಗಿದೆ.ಆದರೆ, ಜಿಲ್ಲೆಯ ಜನರ ಅಭಿಪ್ರಾಯ ಕೇಳದೆ, ಜನರ ಅಭಿಪ್ರಾಯಕ್ಕೆ ಮನ್ನಣೆ ಕೊಡದೆ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪರ ಹೆಸರಿಡಲು ಸರ್ಕಾರ ಹೊರಟಿರುವುದು ಭಾರತೀಯ ಜನತಾ ಪಕ್ಷದ ನಾಯಕರ ಮತ್ತು ಸರ್ಕಾರದ ಸರಿಯಾದ ನಡುವಳಿಕೆ ಅಲ್ಲ ಎಂದು ಕಾಂಗ್ರೆಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್ ಅವರು ಹೇಳಿದ್ದಾರೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.