Thursday, October 3, 2024
Thursday, October 3, 2024

ದಿನಕ್ಕೊಂದು ದ್ವಾದಶ ಜ್ಯೋತಿರ್ಲಿಂಗದ ಮಾಹಿತಿ -02 ಶ್ರೀಶೈಲ ಮಲ್ಲಿಕಾರ್ಜುನ

Date:

ಎರಡನೇ  ಜ್ಯೋತಿರ್ಲಿಂಗ ಶ್ರೀಶೈಲದಲ್ಲಿದೆ. ಒಮ್ಮೆ ಈಶ್ವರ ಪಾರ್ವತಿ ದಂಪತಿಗಳಿಗೆ ಸ್ಕಂದ ಮತ್ತು ಗಣಪತಿ
ಈರ್ವರು ಮಕ್ಕಳಲ್ಲಿ ವಿವಾಹ ಮಾಡುವ ಪ್ರಸ್ತಾಪ ಬಂದಿತು.

ಸ್ಕಂದನು ತನಗೇ ಮೊದಲು ವಿವಾಹ ಮಾಡಿರೆಂದು ತರ್ಕವನ್ನ ಮುಂದಿಟ್ಟನು.
ಆಗ ಈಶ್ವರನು ನೀಮ್ಮೀರ್ವರಲ್ಲಿ ಯಾರು ಶೀಘ್ರ ಈ ಭೂಮಿಯ ಪ್ರದಕ್ಷಿಣೆ ಮುಗಿಸಿ ಬರುವರೋ ಅವರಿಗೇ ಮೊದಲು ವಿವಾಹ ಕಾರ್ಯ ಎಂದು ಹೇಳುತ್ತಾನೆ.

ಕೂಡಲೇ ಸ್ಕಂದನು ನವಿಲೇರಿ ಹೊರಟುಬಿಡುತ್ತಾನೆ.ಗಣಪನು
ಶುಚಿರ್ಭೂತನಾಗಿ ಬಂದು ತಂದೆತಾಯಿಗಳಿಗೆ ಏಳುಸಲ ಪ್ರದಕ್ಷಿಣೆ ಬಂದು ನಮಸ್ಕರಿಸುತ್ತಾನೆ.

ತಂದೆತಾಯಿಗಳಿಗೆ ಮಾಡಿದ ಪ್ರದಕ್ಷಿಣೆಗೆ ಭೂಪ್ರದಕ್ಷಿಣೆಯ ಫಲವಿದೆ ಎಂದೂ ಹೇಳುವನು. ಮೆಚ್ಚಿದ ಶಿವನು ಗಣಪನಿಗೆ ವಿವಾಹ ನೆರವೇರಿಸುತ್ತಾನೆ.

ಅತ್ತ ಭೂಪ್ರದಕ್ಷಿಣೆ ಪೂರೈಸಿ ಬಂದ ಸ್ಕಂದನಿಗೆ ಈ ವಿಚಾರ ತಿಳಿಯುತ್ತದೆ.ವೈರಾಗ್ಯ ಬಂದು ಕ್ರೌಂಚ ಬೆಟ್ಟದಲ್ಲಿ ಕುಳಿತುಬಿಡುತ್ತಾನೆ.
ಹೀಗಾಗಿ ಅಂದಿನಿಂದ ಸ್ಕಂದನಿಗೆ ಕುಮಾರ ಬ್ರಹ್ಮಚಾರಿ ಎಂಬ ಹೆಸರೂ ಬರುತ್ತದೆ.
ಪಾರ್ವತಿಯು ಪುತ್ರ ವ್ಯಾಮೋಹದಿಂದ ಅವನೊಟ್ಟಿಗಿರುತ್ತಾಳೆ.

ಶಿವನೂ ಆಗಾಗ ನೋಡಿಕೊಂಡು ಹೋಗಿಬರುವ ವಾಡಿಕೆ ಇರುತ್ತದೆ. ತಂದೆತಾಯಿಯರಿಂದ ಮೂರು ಯೋಜನ ದೂರವಿರಲು ಸ್ಕಂದನು ನಿರ್ಧರಿಸುತ್ತಾನೆ..

ಹೀಗಾಗಿ ಮಗನಿಗಾಗಿ ಬಂದು ನೆಲಸಿದ್ದ ಶಿಖರದಲ್ಲಿ ತಾಣ ಶ್ರೀಶೈಲ
ಎಂದು ಪ್ರಸಿದ್ಧಿಪಡೆಯುತ್ತದೆ. ಶಿವನನ್ನು ಮಲ್ಲಿಕಾರ್ಜುನ ಎಂದು ಕರೆಯುತ್ತಾರೆ.ಪಾರ್ತಿಗೆ ಭ್ರಮರಾಂಬಿಕೆ ಎಂಬ ಹೆಸರು ಬರುತ್ತದೆ.
ಇಲ್ಲಿ ರಮಣೀಯ ಪರಿಸರವಿದೆ. ಒಂಭತ್ತು ಶಿಖರಗಳು ,ಒಂಭತ್ತು ಪುಣ್ಯನದಿಗಳು,ಒಂಭತ್ತು ನಗರಗಳು,ಒಂಭತ್ತು ಪವಿತ್ರ ಜಲಬಾವಿಗಳು
ಮತ್ತು ಒಂಭತ್ತು ಮಠಗಳ ಪ್ರಮುಖರು ಇಲ್ಲಿದ್ದಾರೆ.

ಶ್ರೀಶೈಲ ಶಿಖರ ದರ್ಶನ ಮಾತ್ರದಿಂದ ಮೋಕ್ಷ ಪ್ರಾಪ್ತಿಯೆಂಬ ಪ್ರತೀತಿಯಿದೆ.

ಇಲ್ಲಿ ಶಿವನು ಜ್ಯೋತಿರ್ಲಿಂಗವಾಗಿ ಜಗತ್ತಿಗೆ ಪ್ರಕಟವಾದ ಬಗ್ಗೆ ಪುಟ್ಟ ಕಥಾನಕವಿದೆ.
ಕೃಷ್ಣಾ ನದಿತೀರದ ಉತ್ತರಭಾಗದಲ್ಲಿದ್ದ ರಾಜ ಚಂದ್ರಗುಪ್ತನ ಮಗಳು
ಚಂದ್ರಾವತಿಯ ಗಮನಕ್ಕೆ ಒಂದು ವಿಚಿತ್ರ ಪ್ರಸಂಗ ಗಮನಕ್ಕೆ ಬರುತ್ತದೆ.

ಪ್ರಯಿನಿತ್ಯವೂ ಒಂದು ಹಸು ಒಂದು ಮಣ್ಣಿನ ಗುಡ್ಡೆಯ ಮೇಲೆ ಹಾಲು ಸುರಿಸಿ ಬರುವುದನ್ನ ನೋಡಿ ಅವಾಕ್ಕಾಗುವಳು. ಅಲ್ಲಿ ಮಣ್ಣಿನ ಗುಡ್ಡೆ ತೆಗೆಸಿದಾಗ ಶಿವಲಿಂಗ ಇರುವುದು ಗೋಚರವಾಗುತ್ತದೆ.
ಅಲ್ಲಿಂದ ಬೇರೆಡೆಗೆ ಲಿಂಗವನ್ನ ಸ್ಥಳಾಂತರಿಸಲು ಮಾಡಿದ ಪ್ರಯತ್ನ ನಿಷ್ಫಲವಾಗುತ್ತದೆ.

ಆ ಸ್ಥಳದಲ್ಲಿಯೇ ಶಿವನ ಅಣತಿ ಪ್ರಕಾರ ಮಲ್ಲಿಗೆ ಹೂವಿನ ಹಾರದಿಂದ ಪೂಜಿಸಿ ಧನ್ಯಳಾಗುತ್ತಾಳೆ.
ಇದೇ ಶ್ರೀಶೈಲದ ಜ್ಯೋತಿರ್ಲಿಂಗ.

ಶ್ರೀಶೈಲ ಶಿಖರ ತಲುಪ ಬೆರಕಾದರೆ ಐದು ಬೆಟ್ಟಗಳನ್ನು ದಾಟಬೇಕು.ಅಲ್ಲಿ ಮನೋಹರವಾದ ನಿಸರ್ಗ ಎಂಥವರನ್ನಾದರೂ ಮಂತ್ರ ಮುಗ್ಧರನ್ನಾಗಿಸುವಂತಿದೆ. ಮಲ್ಲಿಕಾರ್ಜುನನ ಗುಡಿಗೆ ಮುನ್ನ ಶಿಖರೇಶ್ವರ ದೇವಾಲಯವಿದೆ.

ಅಲ್ಲಿ ಸಾಕ್ಷಿಗಣಪತಿ ಮೂರ್ತಿ ಇದೆ.ಒಂದು ಕೈನಲ್ಲಿ ತಾಳೆಗರಿ
ಮತ್ತೊಂದರಲ್ಲಿ ಬರೆಯುವ ಸಾಮಗ್ರಿಯಿದೆ.

ಶ್ರೀಶೈಲದಲ್ಲಿ ಪಾತಾಳಗಂಗೆಯಿದೆ. ಶಿಖರದ ಅಕ್ಕಪಕ್ಕ ಕೃಷ್ಣಾ ನದಿ ಹರಿಯುತ್ತದೆ. ಇಲ್ಲಿಯೇ ಶ್ರೀ ಶಂಕರಾಚಾರ್ಯರು ಮಿಂದು ಶಿವದರ್ಶನ ಮಾಡಿದ್ದಾರೆ. ಮಲ್ಲಿಕಾರ್ಜುನ ಆಲಯವು ವಿಸ್ತಾರವಾಗಿದೆ.ಸುತ್ತ ಇಪ್ಪತ್ತು ಅಡಿ ಎತ್ತರವಿರುವ ಬೃಹದಾಕಾರವಾದ ಗೋಡೆಯಿದೆ.

ಇಲ್ಲಿ ಯಾರು ಬೇಕಾದರೂ ಶಿವಲಿಂಗವನ್ನ ಸ್ಪರ್ಶಿಸಿ ಪೂಜೆ ಮಾಡಬಹುದು.ಜಾತಿಭೇದವಿಲ್ಲ.ಶಿವನನ್ನ ದರ್ಶನಮಾಡಿ ಕೆಲವೇ ಮೆಟ್ಟಲುಗಳನ್ನ ಹತ್ತಿ ನಡೆದರೆ ಭ್ರಮರಾಂಬಿಕೆಯ ದರ್ಶನವೂ ಆಗುತ್ತದೆ.

ಈ ಸ್ಥಳದಲ್ಲಿಯೇ ಶ್ರೀಶಂಕರಾಚಾರ್ಯರಿಗೆ ನರಸಿಂಹ ದರ್ಶನವಾದ ಪ್ರಸಂಗ
ನಡೆದಿರುವುದು. ಶಂಕರರು ಈ ಸ್ಥಳದ ಬಗ್ಗೆ ಶ್ಲೋಕ ರಚಿಸಿದ್ದಾರೆ.

ಶ್ರೀಶೈಲಶೃಂಗೇ ವಿವಿಧಪ್ರಸಂಗೇ | ಶೇಷಾದ್ರಿ ಶೃಂಗೇಪಿ ಸದಾವಸಂತಮ್||
ತಮರ್ಜುನಂ ಮಲ್ಲಿಕ ಪೂರ್ಮೇಕಂ| ನಮಾಮಿ ಸಂಸಾರ
ಸಮುದ್ರ ಸೇತುಂ||

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ಹೆಣ್ಣುಮಕ್ಕಳಿಗೆ ಪಾಠ ಪ್ರವಚನ ಕಲ್ಪಿಸಿರುವ ಸರ್ಕಾರ ದ ಮಹತ್ವ ಯೋಜನೆ- ಭಾರದ್ವಾಜ್

Rotary Shivamogga ದೇಶದ ಏಳಿಗೆಗಾಗಿ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಮಹತ್ವದ ಕಾರ್ಯ...

Gandhi Jayanthi ಗಾಂಧೀಜಿ ಅವರಲ್ಲದೇ ಅನೇಕರ ಹೋರಾಟದ ಫಲ, ಸ್ವಾತಂತ್ರ್ಯ. ಅದನ್ನ ಉಳಿಸಿಕೊಳ್ಳಬೇಕು- ಮಧು ಬಂಗಾರಪ್ಪ

Gandhi Jayanthi ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದ ಫಲದಿಂದ ನಮಗೆ...

Shivamogga Dasara ಶಿವಮೊಗ್ಗ ದಸರಾ ಉತ್ಸವಕ್ಕೆ ಕ್ಷಣಗಣನೆ

Shivamogga Dasara ರಾಜ್ಯದ ಎರಡನೇ ಅತಿ ದೊಡ್ಡ ದಸರಾ ಮಹೋತ್ಸವ ‘ಶಿವಮೊಗ್ಗ...

Chaudeshwari Temple ಶಿವಮೊಗ್ಗ ಚಾಲುಕ್ಯನಗರದ ಶ್ರೀಚೌಡೇಶ್ವರಿ ದೇಗುಲದಲ್ಲಿ ನವರಾತ್ರಿ ಉತ್ಸವ

Chaudeshwari Temple ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ನವರಾತ್ರಿಯ...