Friday, October 4, 2024
Friday, October 4, 2024

ಶಿವಮೊಗ್ಗ ಕ್ಷೇತ್ರದ ಅಭಿವೃದ್ಧಿಗೆ ಜನರ ಸಹಕಾರ ಅಗತ್ಯ- ಶಾಸಕ ಅಶೋಕ ನಾಯ್ಕ

Date:

ಶಿವಮೊಗ್ಗ: ಕ್ಷೇತ್ರದ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರ ಅಗತ್ಯ. ಸರ್ಕಾರದ ಯೋಜನೆಗಳು ಫಲಪ್ರದವಾಗಿ ಸರ‍್ವಜನಿಕರಿಗೆ ತಲುಪಿ ಯೋಜನೆ ಯಶಸ್ವಿಯಾಗಲು ಎಲ್ಲರೂ ಕೈಜೋಡಿಸಬೇಕು ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ.ಅಶೋಕನಾಯ್ಕ್ ಹೇಳಿದರು.

ಶಿವಮೊಗ್ಗದ ಎಲ್‌ಬಿಎಸ್ ನಗರದಲ್ಲಿ ಕುಟುಂಬ ಮಿಲನ ಹಾಗೂ ಸಾಂಸ್ಕೃತಿಕ ಸಂಗೀತ ಸಂಜೆ ಕಾರ‍್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಬಡಾವಣೆಗಳಲ್ಲಿ ಪರ‍್ಕ್ ರಸ್ತೆಗಳ ಅಭಿವೃದ್ಧಿಗೆ ಸರ‍್ವಜನಿಕರ ಮರ‍್ಗರ‍್ಶನ, ಸಹಕಾರ ಹಾಗೂ ಸಲಹೆ ಅಗತ್ಯವಾಗಿದೆ. ರ‍್ಕಾರದ ಅನುದಾನ ಸದ್ವಿನಿಯೋಗವಾಗಲಿದೆ ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಸದಸ್ಯ ಇ.ವಿಶ್ವಾಸ್ ಮಾತನಾಡಿ, ಎಲ್‌ಬಿಎಸ್ ನಗರ ಬಡಾವಣೆಯ ಅಭಿವೃದ್ಧಿಗೆ ಸಂಪರ‍್ಣ ಪ್ರಯತ್ನ ನಡೆಸಿದ್ದು, ನಗರದಲ್ಲಿ ಸುಂದರ ಬಡಾವಣೆಯಾಗಿ ರೂಪುಗೊಳ್ಳುತ್ತಿದೆ. ಗ್ರಾಮಾಂತರ ಕ್ಷೇತ್ರವ್ಯಾಪ್ತಿಯಲ್ಲಿ ಅಶೋಕನಾಯ್ಕ ಅವರು ಉತ್ತಮ ಕೆಲಸ ಮಾಡಿದ್ದಾರೆ ಎಂದರು.

ಯೂತ್ ಹಾಸ್ಟೆಲ್ ಸಹಕಾರದಿಂದ ಆಯೋಜಿಸಿದ್ದ ಬೆಳದಿಂಗಳ ಕುಟುಂಬ ಮಿಲನ ಕರ‍್ಯಕ್ರಮದಲ್ಲಿ ಶಾಸಕ ಕೆ.ಬಿ.ಅಶೋಕನಾಯ್ಕ ಅವರು ಕಲಾವಿದ ಜಿ.ವಿಜಯ್‌ಕುಮಾರ್ ಅವರನ್ನು ಸನ್ಮಾನಿಸಿದರು.

ಎಲ್ ಬಿ ಎಸ್ ನಗರ ಪರ‍್ಕ್ ಸಮಿತಿ ಅಧ್ಯಕ್ಷ ಸಿ.ಪಿ.ವೀರಣ್ಣ ಮಾತನಾಡಿ, ಬಡಾವಣೆ ನಿವಾಸಿಗಳ ಪರಸ್ಪರ ಓಡನಾಟ, ಬಾಂಧವ್ಯವನ್ನು ಗಟ್ಟಿಗೊಳಿಸುವ ಕಾರ‍್ಯಕ್ರಮ ಇದಾಗಿದೆ ಎಂದರು.

ಕಲಾವಿದ ಜಿ.ವಿಜಯ್‌ಕುಮಾರ್ ಅವರು ಹಾಸ್ಯಗೀತೆ, ಕನ್ನಡ ಹಳೇ ಚಿತ್ರಗೀತೆಗಳನ್ನು ಹಾಡಿದರು.

ಸಾಂಸ್ಕೃತಿಕ ಕರ‍್ಯಕ್ರಮ ಎಲ್ಲರ ಮೆಚ್ಚುಗೆ ಗಳಿಸಿತು.
ಪ್ರಮುಖರಾದ ಮಹಾಬಲೇಶ್ವರ ಹೆಗಡೆ, ರಾಜೇಂದ್ರ ಪ್ರಸಾದ್, ರಾಜೀವ್ ಪಾಂಡುರಂಗಿ, ನಾಗರಾಜ್, ಮಂಜುನಾಥ್, ಡಾ. ರಾಜೇಂದ್ರ, ಗೋಪಾಲ್, ಯೂತ್ ಹಾಸ್ಟೆಲ್ ಅಸೊಸಿಯೆಷನ್ ಆಫ್ ಇಂಡಿಯಾದ ತರುಣೋದಯ ಘಟಕದ ಅಧ್ಯಕ್ಷ ಎಸ್.ಎಸ್.ವಾಗೀಶ್, ರಾಜ್ಯ ಮಾಜಿ ಉಪಾಧ್ಯಕ್ಷ ಜಿ.ವಿಜಯಕುಮಾರ್, ನರ‍್ದೇಶಕರಾದ ಮಲ್ಲಿಕರ‍್ಜುನ ಕಾನೂರ್, ಮಮತ, ಸುರೇಖಾ ಮತ್ತು ಎಲ್ ಬಿ ಎಸ್ ನಗರದ ನಿವಾಸಿಗಳು ಕುಟುಂಬ ಸಮೇತರಾಗಿ ಭಾಗವಹಿಸಿ ಕರ‍್ಯಕ್ರಮ ಯಶಸ್ವಿಗೊಳಿಸಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Backward Classes Welfare Department ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶಾತಿಗೆ ಅರ್ಜಿ ಆಹ್ವಾನ

Backward Classes Welfare Department ಶಿವಮೊಗ್ಗ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ...

Klive Special Article ನವರಾತ್ರಿ ಎರಡನೇ ದಿನ.ದೇವಿಯ ಶ್ರೀಬ್ರಹ್ಮಚಾರಿಣಿ ರೂಪದಲ್ಲಿ ಆರಾಧನೆ. ...

Klive Special Article "ದಧಾನಾಂ ಕರಪದ್ಮಾಭ್ಯಾಂಅಕ್ಷಮಾಲಾ ಕಮಂಡಲೂ/ದೇವಿ ಪ್ರಸೀದತು ಮಯಿಬ್ರಹ್ಮಚಾರಿಣ್ಯನುತ್ತಮಾ//ಮೊದಲನೆಯ ದಿನ...

Jawahar Navodaya Vidyalaya ಗಾಜನೂರಿನ ನವೋದಯ ಶಾಲಾ ಪ್ರವೇಶಾತಿ 2025-26 ಪರೀಕ್ಷೆಗೆ ಆನ್ ಲೈನ್ ಅರ್ಜಿ ಆಹ್ವಾನ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯವು 2025-26ನೇ ಸಾಲಿಗೆ 9...