Wednesday, December 17, 2025
Wednesday, December 17, 2025

ಚಿಕ್ಕಮಗಳೂರು ಜಿಲ್ಲಾ ಉತ್ಸವದಲ್ಲಿ ದಲಿತರನ್ನ ಕಡೆಗಣಿಸಲಾಗಿದೆ

Date:

ದಲಿತ ನೌಕರರ ಮೇಲೆ ದೌರ್ಜನ್ಯ, ಟೆಂಡರ್ ಪ್ರಕ್ರಿಯೆಗಳಲ್ಲಿ ಭ್ರಷ್ಟಾಚಾರ, ಜಿಲ್ಲಾ ಉತ್ಸವದಲ್ಲಿ ದಲಿತರನ್ನು ಕಡೆಗಣ ಸಿರುವುದು ಸೇರಿದಂತೆ ವಿವಿಧ ಅಕ್ರಮದಲ್ಲಿ ತೊಡಗಿರುವ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಯನ್ನು ಕೂಡಲೇ ಅಮಾನತ್ತುಪಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘಟನೆಗಳ ಐಕ್ಯತಾ ಚಾಲನ ಸಮಿತಿ ಜಿಲ್ಲಾ ಪಂಚಾಯಿತಿ ಒತ್ತಾಯಿಸಿದೆ.

ಈ ಸಂಬಂಧ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿಯ ಸಹಾಯಕಿ ಲಾಸ್ಯ ಅವರಿಗೆ ಮನವಿ ಸಲ್ಲಿಸಿದ ಸಮಿತಿ ಪದಾಧಿಕಾರಿಗಳು ವಿವಿಧ ಕಾಮಗಾರಿಗಳಲ್ಲಿ ಅವ್ಯವಹಾರದ ಜೊತೆಗೆ ಹೆಣ್ಣುಮಕ್ಕಳಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯವನ್ನು ಒದಗಿಸದೇ ಭ್ರಷ್ಟಚಾರ ವೆಸಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಚಾಲನಾ ಸಮಿತಿ ಸದಸ್ಯ ಮರ್ಲೆ ಅಣ್ಣಯ್ಯ ಸಮಾಜ ಕಲ್ಯಾಣ ಇಲಾಖೆಯ ಭೈರಯ್ಯ ಎಂಬುವವರಿಗೆ ಜಾತಿ ನಿಂದನೆ ಹಾಗೂ ದೌರ್ಜನ್ಯ, ಆಹಾರ ಟೆಂಡರ್ ಪ್ರಕ್ರಿಯೆಯಲ್ಲಿ ಮೇಘ ಎಂಬ ಸಂಸ್ಥೆಗೆ ದಾಖಲೆಗಳು ದೃಢವಿಲ್ಲದಿದ್ದರೂ ಆಯ್ಕೆ ಮಾಡಿರುವುದು, ಎಸ್ಸಿ, ಎಸ್ಟಿ ಅಲ್ಲದ ರಸ್ತೆಗಳಿಗೆ ಕಾಮಗಾರಿ ನಡೆಸಿರುವ ಬಗ್ಗೆ ದಾಖಲೆ ಸಮೇತ ಸಾಕ್ಷಿ ನೀಡಿದರೂ ಯಾವುದೇ ಕ್ರಮಗೊಂಡಿಲ್ಲ ಎಂದು ತಿಳಿಸಿದರು.

ಮುರಾರ್ಜಿ ಶಾಲೆಯ ಪ್ರಾಂಶುಪಾಲರ ಹಾಗೂ ಸಿಬ್ಬಂದಿಗಳೇ ಮೇಲೆ ದೂರು ಸಲ್ಲಿಸಿದ್ದರೂ ನಿರ್ಲಕ್ಷ್ಯ ವಹಿಸಿರುವುದು, ಬೀಕನಹಳ್ಳಿ ಶಾಲೆಯ ಶೃತಿ ಎಂಬುವವರಿಗೆ ನಿಲಯ ಪಾಲಕರಾಗಿ ಜಿ.ಪಂ.ನಿಂದ ಆದೇಶವಿದ್ದರೂ ಪಾಲನೆ ಮಾಡದಿರುವುದು, ವಿದ್ಯಾರ್ಥಿನಿ ನಿಲಯದ ಹಾಸ್ಟೆಲ್‌ನಲ್ಲಿ ಹೆರಿಗೆಯಾಗಿದ್ದರೂ ವಾರ್ಡನ ವಿರುದ್ಧ ಕ್ರಮ ಕೈಗೊಳ್ಳದಿರುವುದು, ಹೆಣ್ಣು ಮಕ್ಕಳ ಋತು ಸಮಯದಲ್ಲಿ ಪ್ಯಾಡ್ ನೀಡದೇ ಲಕ್ಷಾಂತರ ರೂ. ವಂಚನೆವೆಸಗಿದ್ದಾರೆ ಎಂದು ಆರೋಪಿಸಿದರು.

ಶೃಂಗೇರಿ ಹಾಗೂ ಎನ್.ಆರ್.ಪುರದಲ್ಲಿ ಇಬ್ಬರು ವ್ಯಕ್ತಿಗಳಿಗೆ ಸಹಾಯಕ ಹುದ್ದೆ ನೀಡಿದ್ದು ಇವರುಗಳು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಭ್ರಷ್ಟಚಾರ ನಡೆಸಿರುವುದು, ದ್ವಿತೀಯ ದರ್ಜೆ ಸಹಾಯಕಿಯನ್ನು ಪ್ರಭಾರ ಆದೇಶದ ಮೇಲೆ ಜಿಲ್ಲಾ ಕಚೇರಿಯಲ್ಲಿ ಇರಿಸಿ ಭ್ರಷ್ಟಚಾರಕ್ಕೆ ಅವಕಾಶ ಮಾಡಿ ಕೊಟ್ಟಿರುವುದು ಸೇರಿದಂತೆ ಅನೇಕ ಅವ್ಯವಹಾರದಲ್ಲಿ ಸಮಾಜ ಕಲ್ಯಾಣಾಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ದೂರಿದರು.

ಕೂಡಲೇ ಇಷ್ಟೆಲ್ಲಾ ಅಕ್ರಮ ನೇಮಕಾತಿ, ಭ್ರಷ್ಟಾಚಾರ ಹಾಗೂ ದಲಿತರ ಮೇಲೆ ದೌರ್ಜನ್ಯವೆಸಗಿರುವ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಚೈತ್ರ ಎಂಬುವವರಿಗೆ ಒಂದುವಾರದಲ್ಲಿ ಅಮಾನತ್ತುಗೊಳಿಸಬೇಕು. ಇಲ್ಲದಿದ್ದ ಪಕ್ಷದಲ್ಲಿ ಚಾಲನ ಸಮಿತಿ ವತಿಯಿಂದ ಜಿ.ಪಂ. ಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಚಾಲನಾ ಸಮಿತಿ ಸದಸ್ಯರಾದ ದಂಟರಮಕ್ಕಿ ಶ್ರೀನಿವಾಸ್, ಬಾಲಕೃಷ್ಣ ಬಿಳೇಕಲ್ಲು, ಯಲಗುಡಿಗೆ ಹೊನ್ನಪ್ಪ, ಅಂಗಡಿ ಚಂದ್ರು, ಚಂದ್ರಶೇಖರ್ ಪುರ ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Women and Child Development Department ಡಿಸೆಂಬರ್ 20. ಶಿವಮೊಗ್ಗದಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

Women and Child Development Department ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Madhu Bangappa ಯಾವುದೇ ಶಾಲೆ ಆದರೂ ಕನ್ನಡ ಕಲಿಸಬೇಕು ಅಂತ ಮುಚ್ಚಳಿಕೆ ಬರೆಸಿಕೊಳ್ಳುತ್ತೇವೆ- ಮಧು ಬಂಗಾರಪ್ಪ

Madhu Bangappa ರಾಜ್ಯದ ಎಲ್ಲಾ ಮಾದರಿ ಬೋರ್ಡ್‌ಗಳು ಕಡ್ಡಾಯವಾಗಿ ಕನ್ನಡ...