ಇಂದು ಶಿವಮೊಗ್ಗದಲ್ಲಿ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಗೋಪಿ ಶೆಟ್ಟಿಕೊಪ್ಪದ ಚಾಲುಕ್ಯ ನಗರದ ಸಾಹಿತ್ಯ ಗ್ರಾಮದಲ್ಲಿ ನಡೆಯಲಿದೆ. ಎರಡು ದಿನಗಳ ಕಾಲ ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಲಕ್ಷ್ಮಣ ಕೊಡಸೆ ಅವರು ಅಲಂಕರಿಸಿದ್ದಾರೆ.
ಸಮ್ಮೇಳನದಲ್ಲಿ ಹಾಲು ಹಳ್ಳ ಹರಿಯಲಿ, ಸಮ್ಮೇಳನಾಧ್ಯಕ್ಷರ ಬದುಕು ಬರಹ, ಜಾನಪದ ಮರು ಓದು, ಎಂಬ ಗೋಷ್ಠಿ ಗಳು. ನಡೆಯಲಿವೆ.
ಲಕ್ಷ್ಮಣ ಕೊಡಸೆಯ ಅವರು ಹೊಸನಗರ ತಾಲೂಕಿನ ಹುಂಚ ಹೋಬಳಿಯ ಕೊಡಸೆಯವರು. ಇವರ ತಂದೆ ಕರಿಯ ನಾಯ್ಕ, ತಾಯಿ ಭರ್ಮಮ್ಮ. ತುಂಬಾ ಕುಟುಂಬದಲ್ಲಿ ಜನಿಸಿದ ಲಕ್ಷ್ಮಣ ಕೊಡಸೆಯವರಿಗೆ ಊರಿನ ಬಗ್ಗೆ ಅಪಾರ ಪ್ರೀತಿ. ಕನ್ನಡ ಸಾಹಿತ್ಯ ಲೋಕಕ್ಕೆ ಕೊಡಸೆ ಅವರ ಕೊಡುಗೆ ಅಪಾರ. ಕರ್ನಾಟಕದ ಮೂಲೆ ಮೂಲೆಗಳನ್ನು ಸುತ್ತಿ ಅಪಾರ ಅನುಭವಗಳನ್ನ ಗಳಿಸಿದವರು.
ಲಕ್ಷ್ಮಣ ಕೊಡಸೆ ಅವರ ಬರಹಗಳಲ್ಲಿ ಹಕ್ಕಿಗಳ ಕಲರವ, ತಾಯಿ ಮಣ್ಣಿನ ಘಮ, ದನಕರುಗಳ ಗೆಜ್ಜೆ ಸದ್ದುಗಳಿಗೆ ವಿಶೇಷ ಸ್ಥಾನವಿದೆ.
ಲಕ್ಷ್ಮಣ ಕೊಡಸೆಯವರು ಒಂಬತ್ತು ಕಾದಂಬರಿ, ವ್ಯಕ್ತಿ ಚಿತ್ರಗಳು, ಐದು ಕಥಾ ಸಂಕಲನ , ಅಂಕಣ ಬರಹಗಳು ಸೇರಿದಂತೆ 51ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಲಕ್ಷ್ಮಣ ಕೊಡಸೆಯವರ ಸಾಹಿತ್ಯ ಕುರಿತಂತೆ ಇಬ್ಬರು ವಿದ್ಯಾರ್ಥಿಗಳು ಪಿ ಎಚ್ ಡಿ ಮಾಡಿದ್ದಾರೆ ಎನ್ನುವುದು ವಿಶೇಷ.
ಹೊಸನಗರದ ಕಣಬಂದೂರು ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದರು.
ಅಲ್ಲಿಂದ ಅವರ ಸಾಹಿತ್ಯ ಲೋಕದ ಪಯಣ ಶುರುವಾಯಿತು.
ಮೊದಲಿಗೆ ಬದುಕನ್ನು ಸಾಧಿಸಲು ಅನಿವಾರ್ಯವಾಗಿ ಪತ್ರಿಕಾ ಲೋಕದ ಅಚ್ಚು ಮೊಳೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಈ ಸಮಯದಲ್ಲೇ ಹಲವು ಹಿರಿಯರನ್ನ ಸಂದರ್ಶಿಸಿದರು.
ಮಡೆಸ್ನಾನ , ಅಜಲು ಪದ್ದತಿ ಮುಂತಾದವುಗಳನ್ನು ಪತ್ರಿಕೆಯಲ್ಲಿ ಬರೆದ ಕೀರ್ತಿ ಲಕ್ಷ್ಮಣ ಕೊಡಸೆ ಅವರಿಗೆ ಸಲ್ಲುತ್ತದೆ.
ಲಕ್ಷ್ಮಣ ಕೊಡಸೆ ಅವರು ಪತ್ರಿಕೆ ಕೆಲಸದ ಜೊತೆ ಜೊತೆಗೆ ಸಾಹಿತ್ಯ ಲೋಕದೊಂದಿಗೆ ನಂಟನ್ನು ಬೆಳೆಸಿಕೊಂಡರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
