ಅಖಿಲ ಭಾರತ ಶಾಸನಸಭೆಗಳ 82ನೇ ಸಮ್ಮೇಳನ ಶಿಮ್ಲಾದಲ್ಲಿ ನಡೆಯಿತು. ಈ ಸಮ್ಮೇಳನವನ್ನು ಉದ್ದೇಶಿಸಿ ಮಾನ್ಯ ಪ್ರಧಾನ ಮಂತ್ರಿಯವರು ಆನ್ಲೈನ್ ಮುಖಾಂತರ ಮಾತನಾಡಿದರು.
“ಭಾರತೀಯ ಮೌಲ್ಯಗಳನ್ನು ಮರೆತು ಜನಪ್ರತಿನಿಧಿಗಳು ಸಂಸತ್ ಕಲಾಪಗಳನ್ನು ಬಹಳ ಸಾರಿ ಹಾಳುಗೆಡವುತ್ತಿದ್ದಾರೆ. ಏಕ ಭಾರತ, ಶ್ರೇಷ್ಠ ಭಾರತ ಮಂತ್ರಕ್ಕೆ ಪೂರ್ವಕವಾಗಿ ಜನ ಪ್ರತಿನಿಧಿಗಳು ಮನೆಯಲ್ಲಿ ಮತ್ತು ಸಾರ್ವಜನಿಕ ಜೀವನದಲ್ಲಿ ವರ್ತಿಸಬೇಕಿದೆ. ದೇಶದಲ್ಲಿ ವಿಭಿನ್ನ ಧ್ವನಿಗಳು, ಭಿನ್ನಾಭಿಪ್ರಾಯಗಳು ಇರುವುದು ಸಾಧಾರಣ. ಇದೆ ಈ ದೇಶದ ಶಕ್ತಿ. ವಿವಿಧತೆಗೆ ನಮ್ಮ ಸಂಘಟನಾ ಶಕ್ತಿ ಎನ್ನುವುದನ್ನು ಸಂಸದರು, ಶಾಸಕರು ಅಧಿಕಾರಿಗಳು ಮರೆಯಬಾರದು ಎಂದು ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.
ಮುಂದಿನ 25 ವರ್ಷಗಳು ಭಾರತಕ್ಕೆ ಬಹಳ ಪ್ರಮುಖವಾಗಿವೆ. ನಾವೆಲ್ಲರೂ ಒಂದೇ ಮಂತ್ರದೊಂದಿಗೆ ಪೂರ್ಣ ಬದ್ಧತೆ ಪ್ರದರ್ಶಿಸಿ, ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕಿದೆ. ನಮ್ಮ ಮಂತ್ರ, ಜವಾಬ್ದಾರಿ ನಿರ್ವಹಣೆ ಮಾತ್ರವೇ ಆಗಿರಬೇಕು ಎಂದು ಪ್ರಧಾನಿಯವರು ಕಿವಿಮಾತು ಹೇಳಿದ್ದಾರೆ.