ಭಾರತದ ಯುವತಿಯರ ತಂಡ ಐಸಿಸಿ 19 ರ ವಯೋಮಿತಿ ಮಹಿಳೆಯರ ಟಿ20 ವಿಶ್ವಕಪ್ ಜಯಿಸುವಲ್ಲಿ ಯಶಸ್ವಿಯಾಗಿದೆ. ಮಹಿಳೆಯರ 19 ರ ವಯೋಮಿತಿಯಲ್ಲಿ ಇದು ಮೊದಲ ಟಿ20 ವಿಶ್ವಕಪ್. ಪ್ರಥಮ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಹೆಗ್ಗಳಿಕೆ ಈಗ ಭಾರತದ ಕಿರಿಯರ ಕ್ರಿಕೆಟ್ ತಂಡ ಭಾಜನವಾಗಿದೆ.
ಮಹಿಳೆಯರ ವಿಭಾಗದಲ್ಲಿ ಭಾರತಕ್ಕೆ ದೊರೆತ ಮೊದಲ ಐಸಿಸಿ ಪ್ರಶಸ್ತಿ ಇದಾಗಿದೆ. ಭಾನುವಾರ ಪೋಚೆಫ್ ಸ್ಟ್ರೂಮ್ ನ ಸೆನ್ವೆಸ್ ಪಾರ್ಕ್ ನಲ್ಲಿ ನಡೆದ ಫೈನಲ್ ನಲ್ಲಿ ಆಟವಾಡುವ ಮೂಲಕ ಶಫಾಲಿ ವರ್ಮ ಬಳಗ ಬಲಿಷ್ಠ ಇಂಗ್ಲೆಂಡ್ ತಂಡವನ್ನು 7 ವಿಕೆಟ್ ಗಳ ಅಂತರದಿಂದ ಬಗ್ಗು ಬಡಿಯಿತು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಶಫಾಲಿ ಬಳಗ ಇಂಗ್ಲೆಂಡ್ ತಂಡವನ್ನು ಇನ್ನಿಂಗ್ಸ್ ನಲ್ಲಿ ಇನ್ನೂ 17 ಎಸೆತಗಳ ಬಾಕಿ ಇರುವಾಗಲೇ 68 ರನ್ ಗಳಲ್ಲಿ ಆಲ್ ಔಟ್ ಮಾಡಿತು.
36 ಎಸೆತಕ್ಕೆಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು. ಗುರಿ ಬೆನ್ನಟ್ಟುವ ಹಾದಿಯಲ್ಲಿ ಇಬ್ಬರು ಆರಂಭಿಕ ಆಟಗಾರ್ತಿಯರಾದ ಶಫಾಲಿವರ್ಮ ಹಾಗೂ ಶ್ವೇತಾ ಸೆಹ್ರಾವತ್ ತಂಡದ ಮೊತ್ತ 20 ರನ್ ಗಳಾಗುವಷ್ಟರಲ್ಲಿ ವಿಕೆಟ್ ಒಪ್ಪಿಸಿದ್ದರಿಂದ ಸ್ವಲ್ಪ ಆತಂಕ ಮನೆ ಮಾಡಿತ್ತು. ನಂತರ ಸೌಮ್ಯ ತಿವಾರಿ 24 ರನ್, 37ಎಸೆತ, ಹಾಗೂ 3 ನೇ ವಿಕೆಟ್ ಗೆ 46 ರನ್ ಸೇರಿಸಿ ತಂಡಕ್ಕೆ ಆಸರೆಯಾದರು. 66ರ ಮೊತ್ತದಲ್ಲಿ ತ್ರಿಶಾ ಔಟಾದರು. ಅಷ್ಟರಲ್ಲಿ ಭಾರತದ ಗೆಲುವು ಖಚಿತವಾಗಿತ್ತು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
