Tuesday, May 5, 2026
Tuesday, May 5, 2026

ರೋವರ್ಸ್ ಕ್ಲಬ್ ಅಂತಾರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿಗಳಿಸಲಿ- ಕೆ.ಎಸ್.ಈಶ್ವರಪ್ಪ

Date:

ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಜತೆಯಲ್ಲಿ ಕೌಟುಂಬಿಕ ಮೌಲ್ಯಗಳಿಗೆ ಮಹತ್ವ ನೀಡುತ್ತ ಬರುತ್ತಿರುವ ರೋವರ್ಸ್‌ ಕ್ಲಬ್ ಕಾರ್ಯ ಶ್ಲಾಘನೀಯ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.

ರೋವರ್ಸ್‌ ಕ್ಲಬ್ ವತಿಯಿಂದ ಆಯೋಜಿಸಿದ್ದ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಮಾತನಾಡಿ, ಕ್ಲಬ್‌ಗಳಿಗೆ ಪುರುಷರು ಮಾತ್ರ ಬರುವುದು ಸಾಮಾನ್ಯ. ಆದರೆ ರೋವರ್ಸ್‌ ಕ್ಲಬ್ ಕೌಟುಂಬಿಕ ಕ್ಲಬ್ ಆಗಿದ್ದು, ಮಹಿಳೆಯರು, ಮಕ್ಕಳು ಪಾಲ್ಗೊಳ್ಳುವ ಜತೆಯಲ್ಲಿ ಕ್ರೀಡೆಗಳಿಗೆ ಆದ್ಯತೆ ನೀಡುತ್ತಿರುವುದು ಉತ್ತಮ ಕಾರ್ಯ ಎಂದು ತಿಳಿಸಿದರು.

ರೋವರ್ಸ್‌ ಕ್ಲಬ್‌ಗೆ 40 ವರ್ಷಗಳ ಇತಿಹಾಸ ಇದ್ದು, ಅನೇಕ ಕ್ರೀಡಾ ಸಾಧಕರು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಲು ಕ್ಲಬ್ ಸಹಕಾರಿಯಾಗಿದೆ. ಕ್ಲಬ್ ಎಂದರೆ ಮೋಜು ಮಸ್ತಿ ಮಾತ್ರವಲ್ಲ, ಕ್ರೀಡಾ ಪ್ರತಿಭೆಗಳಿಗೂ ಉತ್ತಮ ವೇದಿಕೆ ಎಂದರು.

ರೋವರ್ಸ್‌ ಕ್ಲಬ್ ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದು, ಆರಂಭದಲ್ಲಿ ನಾನು ಕೂಡ ಷಟಲ್ ಬ್ಯಾಡ್ಮಿಂಟನ್ ಕಲಿತ ಜಾಗ ರೋವರ್ಸ್‌ ಕ್ಲಬ್ ಆಗಿದೆ. ಮುಂದಿನ ದಿನಗಳಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿಗೆ ಅಗತ್ಯ ಪ್ರೋತ್ಸಾಹ ನೀಡಿ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುವಂತಾಗಲಿ ಎಂದು ಆಶಿಸಿದರು.

ರೋವರ್ಸ್‌ ಕ್ಲಬ್ ವತಿಯಿಂದ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ಸದಸ್ಯರಿಗೆ ಬಹುಮಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಶಾಸಕ ಕೆ.ಎಸ್.ಈಶ್ವರಪ್ಪ ಅವರಿಗೆ ರೋವರ್ಸ್‌ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋವರ್ಸ್‌ ಕ್ಲಬ್ ಅಧ್ಯಕ್ಷ ಕೆ.ಸಿ.ಮಲ್ಲಿಕಾರ್ಜುನಪ್ಪ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಿಕೊಂಡು ಬರಲಾಗಿದೆ.

ಕರೊನಾ ಸಂದರ್ಭದಲ್ಲಿ ವಿವಿಧ ರೀತಿಯಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿದೆ ಎಂದು ತಿಳಿಸಿದರು.
ಉಪಾಧ್ಯಕ್ಷ ಕೆ.ರವಿ, ಕಾರ್ಯದರ್ಶಿ ಆರ್.ಎಸ್.ದತ್ತಾತ್ರಿ, ಸಹ ಕಾರ್ಯದರ್ಶಿ ಎಚ್.ಕೃಷ್ಣ, ಖಜಾಂಚಿ ಪಿ.ಎಲ್.ನಾಗರಾಜ ಪಾಟ್ಕರ್, ನಿರ್ದೇಶಕರಾದ ಕೆ.ಶಂಕರ ಗನ್ನಿ, ಅ.ಮ.ಪ್ರಕಾಶ್, ಬಸವರಾಜ.ಎಂ.ಆರ್., ವಿನಾಯಕ.ಎಂ.ಬಿ, ಜಿ.ವಿಜಯ್‌ಕುಮಾರ್, ಚಿನ್ನಪ್ಪ.ಎಸ್., ಎ.ಎಚ್.ಸುನೀಲ್, ಶ್ರೀರಾಮ.ಎ.ಜಿ., ಸದಸ್ಯರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

K. R. Periyakaruppan ಒಂದೇ ಒಂದು ಮತದ ಅಂತರದಲ್ಲಿ ಸೋತ (ಮಂತ್ರಿ) ಡಿಎಂಕೆ ಅಭ್ಯರ್ಥಿ ಪೆರಿಯಾಕರುಪ್ಪನ್.

ಒಂದು ಮತ ತಾನೆ. ಎಂಬ ನಿರ್ಲಕ್ಷ್ಯ ಬಹಳ ಅಭ್ಯರ್ಥಿಗಳಲ್ಲಿದೆ. ಆದರೆ ಆ...

Ballari News ಪಾರಾಗುವ ಬಗೆ ಹೇಗೆ?. ಬಳ್ಳಾರಿ ಜಿಲ್ಲಾ ವೈದ್ಯಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ನೀಡಿರುವ ಮಾಹಿತಿ ಎಲ್ಲರಿಗೂ ಅನ್ವಯ

Ballari News ಜಿಲ್ಲೆಯಾದ್ಯಂತ ದಿನದಿಂದ ದಿನಕ್ಕೆ ಬಿಸಿಲಿನ ಪ್ರಖರತೆ ಮತ್ತು ತೀವ್ರತೆ...

S.N. Channabasappa ಪಶುವೈದ್ಯಕೀಯ ಮತ್ತು‌ ಮೀನುಗಾರಿಕೆ ವಿಜ್ಞಾನ ವಿವಿಗಳ ನೌಕರರಿಗೆ ನೀಡುತ್ತಿರುವ ಎನ್ ಪಿ ಎ ಕಡಿತ: ಶಾಸಕ ಚೆನ್ನಿ ಅವರಿಂದ ಖಂಡನೆ

S.N. Channabasappa "ಕರ್ನಾಟಕ ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ...

Summer ಬೇಸಿಗೆಯ ಬಿರುಬಿಸಿಲು!. ಜಾನುವಾರು ರಕ್ಷಣೆಗೆ ಪಶುವೈದ್ಯಕೀಯ ಕಾಲೇಜಿನ ತಜ್ಞರ ಮಾರ್ಗದರ್ಶನ – ಮಾಹಿತಿ ಇಲ್ಲಿದೆ.

Summer ಮಲೆನಾಡು ಸೇರಿದಂತೆ ರಾಜ್ಯಾದ್ಯಂತ ಮೇ ತಿಂಗಳಲ್ಲಿ ಬಿಸಿಲ ಧಗೆ ಹೆಚ್ಚಾಗುವ...