Thursday, March 26, 2026
Thursday, March 26, 2026

ಶ್ರೀಭಾರತೀ ತೀರ್ಥ ಗೋಶಾಲೆಗೆ ಭಕ್ತವೃಂದದವರಿಂದ ಒಣಹುಲ್ಲು ಸೇವೆ ಅರ್ಪಣೆ

Date:

ಹೊಸಗುಂದ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿರುವ ಶ್ರೀ ಭಾರತೀತೀರ್ಥ ಗೋಶಾಲೆಗೆ ಬೇಕಾಗಿರುವ ಒಣ ಹುಲ್ಲನ್ನು ಸೇವೆಯಾಗಿ ಸಾಗರ ತಾಲೂಕು ಹೊಸಗುಂದ ಗ್ರಾಮದ ಸುತ್ತ ಮುತ್ತಲಿನ ಭಕ್ತರು ನೀಡಿದ್ದ ಒಣ ಹುಲ್ಲನ್ನು ಗೋಮಾತೆಗೆ ಸಮರ್ಪಣೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು .

ರಾಜ್ಯದ ಬೆಂಗಳೂರು , ಹಾಸನ , ಮೈಸೂರು , ಹುಬ್ಬಳ್ಳಿ , ಧಾರವಾಡ , ಶಿವಮೊಗ್ಗ , ಶಿಕಾರಿಪುರ ಹಾಗು ಇನ್ನಿತರೇ ಪ್ರದೇಶಗಳಿಂದ ಆನ್ ಲೈನ್ ಮೂಲಕ ಹಣ ಸಂದಾಯ ಮಾಡಿ ಶ್ರೀ ಭಾರತೀತೀರ್ಥ ಗೋಶಾಲೆಗೆ ಬೇಕಾಗಿರುವ ಒಣ ಹುಲ್ಲನ್ನು ತೆಗೆದುಕೊಳ್ಳಲು ಸೇವೆಯಾಗಿ ನೀಡಿದ್ದಾರೆ ಹಾಗು ಸಾಗರ ತಾಲ್ಲೂಕು ಹೊಸಗುಂದ ಗ್ರಾಮದ ಸುತ್ತ ಮುತ್ತಲಿನ ಮೂನ್ನೂರುಕ್ಕೂ ಹೆಚ್ಚು ಭಕ್ತರು ಹಾಗು ಶಿಕಾರಿಪುರದ ಭಕ್ತರು ಒಣ ಹುಲ್ಲನ್ನು ಸೇವೆಯಾಗಿ ಹುಲ್ಲಿನ ರೂಪದಲ್ಲಿ ನೀಡಿದ್ದಾರೆ ಎಂದು ದೇವಾಲಯದ ಧರ್ಮ ದರ್ಶಿಗಳಾದ ಸಿ.ಎಂ. ನಾರಾಯಣ ಶಾಸ್ತ್ರೀ ನುಡಿದರು .

ದೇವಾಲಯದ ಪ್ರಧಾನ ಅರ್ಚಕರಾದ ಸುಬ್ರಮಣ್ಯ ಭಟ್ ಅವರು ಶ್ರೀ ಉಮಾಮಹೇಶ್ವರನ ಸನ್ನಿಧಾನದಲ್ಲಿ ಆನ್ ಲೈನ್ ಮೂಲಕ ಹಣ ಸಂದಾಯ ಮಾಡಿರುವ ಹಾಗು ಹೊಸಗುಂದ ಗ್ರಾಮದ ಸುತ್ತ ಮುತ್ತಲಿನ ಮೂನ್ನೂರುಕ್ಕೂ ಹೆಚ್ಚು ಭಕ್ತರು ಒಣ ಹುಲ್ಲನ್ನು ಸೇವೆಯಾಗಿ ಹುಲ್ಲಿನ ರೂಪದಲ್ಲಿ ಗೋಶಾಲೆಯಲ್ಲಿ ಇರುವ ಗೋಮಾತೆಗೆ ನೀಡಿರುವ ಭಕ್ತರ ಕುರಿತು ವಿಶೇಷವಾದ ಪ್ರಾರ್ಥನೆ ಸಲ್ಲಿಸಿದ್ದರು.

ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿರುವ ಶ್ರೀ ಭಾರತೀತೀರ್ಥ ಗೋಶಾಲೆ ಯಲ್ಲಿ ಇರುವ ಶಿವದಾಸ ಹಾಗು ಗೋವುಗಳಿಗೆ ಒಣ ಹುಲ್ಲನ್ನು ದೇವಾಲಯದ ಧರ್ಮ ದರ್ಶಿಗಳಾದ ಸಿ.ಎಂ. ನಾರಾಯಣ ಶಾಸ್ತ್ರೀ ಹಾಗು ದೇವಾಲಯಕ್ಕೆ ಬಂದಿದ್ದ ಸುತ್ತಮುತ್ತಲಿನ ಭಕ್ತರು ಸಮರ್ಪಣೆ ಮಾಡಿದರು ನಂತರ ದೇವಾಲಯದಲ್ಲಿ ಗೋಪೂಜೆಗೆ ಬಂದಿದ್ದ ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು .

ಶ್ರೀ ಉಮಾ ಮಹೇಶ್ವರ ದೇವಾಲಯದ ಅರ್ಚಕರಾದ ವಿಜಯ್ ವಿಠಲ ಹೆಬ್ಬಾರ್ , ಉಮಾಮಹೇಶ್ವರ ಹೆಗಡೆ ಹಾಗು ಗ್ರಾಮದ ಹಾಗು ಸುತ್ತಮುತ್ತಲಿನ ಐಗಿನ ಬೈಲು ದಿನೇಶ್ , ಗಣಪತಿ ಶೆಟ್ಟಿ , ಕೆ.ಟಿ. ರಮೇಶ್ , ಶ್ರೀಧರ ಜೋಯಿಸ್ , ಶ್ರೀ ರಕ್ಷಾ ಹಾಗು ಇನ್ನೂ ಅನೇಕ ಭಕ್ತರು ಉಪಸ್ಥಿತರಿದ್ದರು .

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Prabhuling Kavalikatti ಅಸ್ಪೃಶ್ಯತೆ ನಿರ್ಮೂಲನೆಗೆ ಒತ್ತು ಜೊತೆಗೆ ಕಾಯಿದೆಯಡಿ ಕಟ್ಟುನಿಟ್ಟಿನ ಕ್ರಮ- ಪ್ರಭುಲಿಂಗ ಕವಳಿಕಟ್ಟಿ.

Prabhuling Kavalikatti ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಮೇಲಿನ ದೌರ್ಜನ್ಯ ತಡೆ...

MESCOM ಮಾರ್ಚ್ 26. ಸಾಗರ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಜನ ಸಂಪರ್ಕ ಸಭೆ.

MESCOM ಸಾಗರ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಮಾ 26 ರಂದು...

World Tuberculosis Day ಕ್ಷಯರೋಗಿಗಳು ದುಶ್ಚಟಗಳಿಂದ ದೂರವಿದ್ದು ,ಪೌಷ್ಠಿಕ ಆಹಾರ ಸೇವಿಸಿದರೆ ರೋಗ ವಾಸಿ- ಡಾ.ಕೆ.ಎಸ್.ನಟರಾಜ್.

World Tuberculosis Day ಸೂಕ್ತ ಚಿಕಿತ್ಸೆಯಿಂದ ಕ್ಷಯರೋಗದಿಂದ ಸಂಪೂರ್ಣರಾಗಿ ಗುಣಮುಖರಾಗಬಹುದಾಗಿದ್ದು, ಎಲ್ಲಾ...

Shimoga News ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಬೆಳಿಸಿಕೊಳ್ಳಬೇಕು- ಎನ್.ಪ್ರಕಾಶ್

Shivamogga News ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸಲು ಮತ್ತು ಉನ್ನತ...