Tuesday, November 26, 2024
Tuesday, November 26, 2024

₹20 ಕೋಟಿ ಮೌಲ್ಯದ ಶ್ವಾನ ಬಳ್ಳಾರಿ ಉತ್ಸವ ಶ್ವಾನ ಪ್ರದರ್ಶನದ ವಿಶೇಷ ಆಕರ್ಷಣೆ

Date:

ಬಳ್ಳಾರಿ: ಜಿಲ್ಲಾಡಳಿತ ವತಿಯಿಂದ ಪ್ರಥಮ ಬಾರಿಗೆ ನಡೆಸಲಾಗುತ್ತಿರುವ ಬಳ್ಳಾರಿ ಉತ್ಸವದಲ್ಲಿ ಈಗಾಗಲೇ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ.

ಉತ್ಸವದ ಮೆರಗನ್ನು ಇನ್ನಷ್ಟು ಹೆಚ್ಚಿಸಲು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಜನವರಿ 22 ರಂದು ಬೆಳಗ್ಗೆ 8ರಿಂದ ವಿವಿಧ ತಳಿಯ ಶ್ವಾನ ಪ್ರದರ್ಶನ ಕಾರ್ಯಕ್ರಮವನ್ನು ಬಳ್ಳಾರಿಯ ವಾಡ್ರ್ಲಾ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ.

ಬಳ್ಳಾರಿ ನಗರವಾಸಿಗಳು ತಮ್ಮ ತಮ್ಮ ಶ್ವಾನಗಳನ್ನು ಪ್ರದರ್ಶಿಸಲು ಈಗಾಗಲೇ ನೊಂದಣಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಸ್ಪರ್ಧೆಯಲ್ಲಿ ಶ್ವಾನಗಳಿಗೆ ನೆರಳು ಮತ್ತು ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ಪರ್ಧೆಯಲ್ಲಿ ಪ್ರಶಸ್ತಿ ವಿಜೇತ ಶ್ವಾನಗಳಿಗೆ ಆಕರ್ಷಕ ಬಹುಮಾನ ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಜಾತಿ ಶ್ವಾನಗಳಿಗೆ ಮಾತ್ರ ಅವಕಾಶವಿರುತ್ತದೆ. ಶ್ವಾನ ಪ್ರದರ್ಶನಕ್ಕೆ ನೊಂದಣಿಯು ಉಚಿತವಾಗಿರುತ್ತದೆ. ನೊಂದಣಿ ಮಾಡಿಸಲು ಕೊನೆಯ ದಿನ ಜನವರಿ 20ರಂದು ಸಂಜೆ 5 ರವರೆಗೆ ಇರುತ್ತದೆ.

ರೂ.20 ಕೋಟಿ ಮೌಲ್ಯದ ಶ್ವಾನ ಬಳ್ಳಾರಿಗೆ; ರಾಜ್ಯದಲ್ಲಿ ಅತ್ಯಂತ ದುಬಾರಿ ಬೆಲೆಯ ಶ್ವಾನ ಎಂಬ ಹೆಗ್ಗಳಿಕೆಗೆ ಪಾತ್ರವಾದ ಹಾಗೂ ರಾಜ್ಯ ಸೇರಿ ದೇಶದ ನಾನಾ ಪ್ರದರ್ಶನದಲ್ಲಿ ಪಾಲ್ಗೊಂಡು ನೋಡುಗರ ಗಮನ ಸೆಳೆದಿರುವ ಬೆಂಗಳೂರಿನ ಸತೀಶ್ ಕೆಡಬಾಮ್ಸ್ ಅವರ ಕೆಡಬಾಮ್ಸ್ ಹೈದರ್ ಎನ್ನುವ ಕಕೇಶಿಯಾ ಶೆಫರ್ಡ್ ಎಂಬ ವಿಶೇಷ ತಳಿಯ ಶ್ವಾನದ ಬೆಲೆಯು ಬರೋಬ್ಬರಿ ರೂ.20 ಕೋಟಿಯ ಶ್ವಾನವಾಗಿದೆ. ಸಿಂಹದಂತೆ ಕಾಣುವ ಅಪರೂಪದ ಈ ಶ್ವಾನದ ತೂಕ 100 ಕೆಜಿ ಇದೆ. ಎತ್ತರದಲ್ಲೂ 6 ಅಡಿ ಇದೆ. ಉಳಿದ ಸಾಮಾನ್ಯ ನಾಯಿಗಳಿಗಿಂತ ತುಂಬಾ ದೊಡ್ಡದಾಗಿರುವುದು ಮತ್ತೊಂದು ಆಕರ್ಷಣೆಯಾಗಿದೆ. ಇದು ಬಳ್ಳಾರಿ ಉತ್ಸವದ ಮೆರಗನ್ನು ಹೆಚ್ಚಿಸಲು ಜ.22ರಂದು ನಡೆಯುವ ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಲಿದೆ.

ಶ್ವಾನ ಪ್ರದರ್ಶನದಲ್ಲಿ ಭಾಗವಹಿಸುವ ಮಾಲೀಕರಿಗೆ ಸೂಚನೆಗಳು: ಶ್ವಾನ ಪ್ರದರ್ಶನಕ್ಕೆ ಬರುವ ಶ್ವಾನಗಳಿಗೆ ಸರಿಯಾದ ಬೆಲ್ಟ್ ಮತ್ತು ಚೈನ್‍ನ್ನು ತೊಡಿಸಿಕೊಂಡು ಬರಬೇಕು. ಶ್ವಾನದ ಉತ್ತಮ ಗುಣಗಳನ್ನು ನಿರ್ಣಾಯಕರ ಗಮನಕ್ಕೆ ಬರುವಂತೆ ಪ್ರದರ್ಶಿಸಬೇಕು. ಶ್ವಾನದ ಸಂಪೂರ್ಣ ಮಾಹಿತಿ ಮಾಲೀಕರು ತಿಳಿದಿರಬೇಕು. ಶ್ವಾನ ಪ್ರದರ್ಶನದ ದಿನಾಂಕದಂದು ಸ್ನಾನ ಮಾಡಿಸಬಾರದು. ಶ್ವಾನ ಪ್ರದರ್ಶನದಂದು ನಿರ್ಣಾಯಕರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕು. ಶ್ವಾನದ ದೇಹದ ಅಂಗ ರಚನೆಯ ಜೊತೆಗೆ ಕೂದಲಿನ ಕಾಂತಿ, ಹಲ್ಲುಗಳನ್ನು, ಮೂಗು, ಕಿವಿಗಳನ್ನು ಪರೀಕ್ಷಿಸುವುದರಿಂದ ಅವುಗಳನ್ನು ಶುಚಿಯಾಗಿಟ್ಟಿರಬೇಕು.
ಶ್ವಾನ ಪ್ರದರ್ಶನದಂದು ತುರ್ತು ಚಿಕಿತ್ಸೆಯ ಸೌಲಭ್ಯಗಳು ಲಭ್ಯವಿರುತ್ತದೆ.

ಸ್ಪರ್ಧೆಯ ಬಹುಮಾನದ ವಿವರಗಳು: ಪ್ರತಿ ತಳಿಗೆ ಮೊದಲನೇ ಸ್ಥಾನ ರೂ.3 ಸಾವಿರ, ಎರಡನೇ ಸ್ಥಾನ ರೂ.2 ಸಾವಿರದಂತೆ ಬಹುಮಾನ ನೀಡಲಾಗುವುದು. ಎಲ್ಲಾ ತಳಿಯ ಪುಟ್ಟ ನಾಯಿ ಮರಿಗಳಿಗೆ (3 ರಿಂದ 12ನೇ ತಿಂಗಳವರೆಗಿನ) ಮೊದಲನೇ ಸ್ಥಾನ ರೂ.3 ಸಾವಿರ, ಎರಡನೇ ಸ್ಥಾನ ರೂ.2 ಸಾವಿರ ಮತ್ತು ಮೂರನೇ ಸ್ಥಾನ ರೂ.1 ಸಾವಿರದಂತೆ ಬಹುಮಾನ ನೀಡಲಾಗುವುದು. ಪ್ರತಿ ವಯಸ್ಕ ಗುಂಪಿನ ಶ್ವಾನ ತಳಿಯಲ್ಲಿ ಮೊದಲ ಸ್ಥಾನ ಪಡೆದ ಶ್ವಾನವನ್ನು ಕೊನೆಯ ಸುತ್ತಾದ “ಪ್ರದರ್ಶನದ ಉತ್ತಮ ತಳಿ” ಸ್ಪರ್ಧೆಗೆ ಆಯ್ಕೆಮಾಡಿ ರೂ.10 ಸಾವಿರ ಬಹುಮಾನವನ್ನು ನೀಡಲಾಗುತ್ತದೆ.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಶ್ವಾನಗಳಿಗೆ ಭಾಗವಹಿಸಿದ ಪ್ರಶಸ್ತಿ ಪತ್ರ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಹಾಗೂ ನೊಂದಣಿಗಾಗಿ ಮೊ.9590576964, 8310089055, 9980254131, 9916503138, 9686041441, 9880678426 ಗೆ ಸಂಪರ್ಕಿಸಬಹುದು.
ಉತ್ಸವದ ಅಂಗವಾಗಿ ನಡೆಸಲಾಗುತ್ತಿರುವ ವಿವಿಧ ಸ್ಪರ್ಧೆ ಮತ್ತು ಕಾರ್ಯಕ್ರಮಗಳಲ್ಲಿ ಸಾರ್ವಜನಿಕರೆಲ್ಲರೂ ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಉತ್ಸವ ಆಚರಣಾ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

COSMO Club Shivamogga ಅಧ್ಯಯನಶೀಲ ತತ್ವದತ್ತ ಮುನ್ನಡೆದು ಸಮರ್ಥ ಸಮಾಜಕ್ಕೆ ದೀಪವಾಗೋಣ- ರಂಜಿನಿ ದತ್ತಾತ್ರಿ

COSMO Club Shivamogga ನಮ್ಮ ನಿಮ್ಮ ನಗುವಿಗೊಂದು ದೀಪ, ಸಂತಸದ ಬೆಳಕಿಗೊಂದು...

MESCOM ನವೆಂಬರ್ 27. ಎಂ.ಆರ್.ಎಸ್. ನಲ್ಲಿ ತ್ರೈಮಾಸಿಕ ನಿರ್ವಹಣೆ. ಶಿವಮೊಗ್ಗದ ಬಹುಪಾಲು ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

MESCOM ಶಿವಮೊಗ್ಗ ಎಂ.ಆರ್.ಎಸ್. ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ...