ದೇಶದ ಸಂಪನ್ಮೂಲಗಳನ್ನು ಬಾಂಬು ಟ್ಯಾಂಕರ್ ಗಳಿಗೆ ವ್ಯರ್ಥ ಮಾಡಲು ಪಾಕ್ ಸಿದ್ಧವಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಶಹಬಾಜ್ ಶರೀಫ್ ಅವರು ಹೇಳಿದ್ದಾರೆ.
ಈಗಾಗಲೇ ಆರ್ಥಿಕತೆ ಜರ್ಜರಿತವಾಗಿರುವ ಪಾಕಿಸ್ತಾನದಲ್ಲಿ ದಿನನಿತ್ಯದ ದಿನಸಿ ಬೆಲೆ ಗಗನಕ್ಕೇರಿದೆ. ಆಂತರಿಕ ರಾಜಕಾರಣದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ಸೆಣೆಸಾಡುತ್ತಿವೆ. ಪ್ರವಾಹದ ಕಾರಣದಿಂದಾಗಿ ಅಲ್ಲಿನ ಮೂರನೇ ಒಂದು ಭಾಗದ ಜನರ ಬಾಳು ದಮನೀಯವಾಗಿತ್ತು. ಇಂಧನ ತುರ್ತು ರಕ್ಷಿಸಲು ದೇಶದ ಎಲ್ಲಾ ಮಾಲ್ ಗಳನ್ನು ರಾತ್ರಿ 8:30ಕ್ಕೆ ಮುಚ್ಚಲು ಆದೇಶಿಸಿತ್ತು. ಸರ್ಕಾರಿ ಕಛೇರಿಗಳಲ್ಲಿ ವಿದ್ಯುತ್ ಬಳಕೆ ಶೇಕಡ 30ರಷ್ಟಕ್ಕೆ ಮಿತಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
ಈ ದುಃಸ್ಥಿತಿಗೆ ಕೋವಿಡ್ ಕೂಡ ಪ್ರಮುಖ ಕಾರಣವಾಗಿದೆ.
ಮಾಧ್ಯಮಗಳ ವರದಿಗಳು ಹೇಳುವಂತೆ ಕೃಷಿಗೆ ನೀಡುವ ಸಹಾಯಧನವನ್ನು ವಾಣಿಜ್ಯ ಬೆಳೆಗಳಿಗೆ ಬಹುಪಾಲು ನೀಡಿದ್ದರ, ಪರಿಣಾಮ ಆಹಾರ ಬೆಳೆಗಳ ಉತ್ಪಾದನೆಯಲ್ಲಿ ಕುಸಿತವಾಗಿದೆ. ಸಹಾಯಧನದ ಆಸೆಗೆ ಕೃಷಿಕರು ವಾಣಿಜ್ಯ ಬೆಳೆಗಳತ್ತ ಆಸಕ್ತಿ ತೋರಿಸಿದ್ದರ ಪರಿಣಾಮ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದೆ.
ಅಂತರಾಷ್ಟ್ರೀಯ ಹಣಕಾಸು ನಿಧಿಗೆ 23 ಸಲ ಪಾಕಿಸ್ತಾನ ಸಾಲಕ್ಕೆ ಅರ್ಜಿ ಹಾಕಿದೆ. ಐಎಂಎಫ್ ನಾ ಷರತ್ತಿಗೆ ಪಾಕಿಸ್ತಾನ ಒಪ್ಪಿಲ್ಲ. ಒಪ್ಪುವ ಸ್ಥಿತಿಯಲ್ಲಿಲ್ಲದ ಕಾರಣ ಹಣಕಾಸು ನೆರವು ತಕ್ಷಣ ಲಭಿಸಿಲ್ಲ. ಇದೂ ಒಂದು ದೊಡ್ಡ ಪೆಟ್ಟು.
ಸದ್ಯ ಹೊರದೇಶಗಳಿಂದ ಆರ್ಥಿಕ ನೆರವು ಸಿಗುವ ಭರವಸೆಯಿಂದ ಪಾಕಿಸ್ತಾನ ಉಸಿರಾಡುತ್ತಿದೆ. ಇಂತಹ ವಿಲಕ್ಷಣ ಸನ್ನಿವೇಶದಲ್ಲಿ ಪಾಕಿಸ್ತಾನ ಮತ್ತು ಕಾಶ್ಮೀರ ಸಮಸ್ಯೆ ಬಗ್ಗೆ ವಿದೇಶಿ ಸಂಯುಕ್ತ ಅರಬ್ ರಾಷ್ಟ್ರದ ಮಧ್ಯಸ್ಥಿಕೆ ಬಗ್ಗೆ ಹಪಹಪಿ ಹೇಳಿಕೆ ನೀಡಿದೆ.
ಭಾರತದೊಂದಿಗೆ ಶಾಂತಿ ಬಯಸುತ್ತೇನೆ ಎಂದು ಹೇಳಿ ಹಳೆಯ ದ್ವೇಷ, ಯುದ್ಧಗಳ ಬಗ್ಗೆ ಪಶ್ಚಾತ್ತಾಪವಾದಂತೆ ಮಾತನಾಡುತ್ತಿದೆ. ಉಭಯ ರಾಷ್ಟ್ರಗಳ ಜನ ಕೂಡಿ ಬಾಳಬೇಕು ಎಂದು ಪ್ರಧಾನಿ ಮೋದಿ ಅವರಿಗೆ ತನ್ನ ಸಂದೇಶ ಕಳಿಸಿದೆ.
ಭಾರತ ವಿದೇಶಾಂಗ ಇಲಾಖೆ ಕಾಶ್ಮೀರ ಸಮಸ್ಯೆ ಬಗ್ಗೆ ಮೂರನೇ ದೇಶದ ಮಧ್ಯಸ್ಥಿಕೆ ಒಪ್ಪುವುದಿಲ್ಲ ಎಂದು ತಿಳಿಸಿದೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.