ಮಕ್ಕಳಿಗೆ ಸಂಸ್ಕೃತಿ ಮತ್ತು ಸಂಸ್ಕಾರ ಧಾರೆಯುವ ಕೆಲಸವನ್ನು ಪ್ರತಿಯೊಬ್ಬ ಪೋಷಕರೂ ಮಾಡಬೇಕು ಎಂದು ಪದ್ಮಶ್ರೀ ಪುರಸ್ಕೃತೆ ಡಾ.ಮಂಜಮ್ಮ ಜೋಗತಿ ಸಲಹೆ ನೀಡಿದರು.
ಶಿವಮೊಗ್ಗದ ಕುವೆಂಪು ರಂಗ ಮಂದಿರದಲ್ಲಿ ವಿದ್ಯಾದೀಪ ಎಜುಕೇಷನ್ ಟ್ರಸ್ಟ್ ನಲ್ಲಿ ಹಮ್ಮಿಕೊಂಡಿದ್ದ ಕ್ರಿಯೇಟಿವ್ ಕಿಡ್ಸ್ ಸ್ಕೂಲ್‌ನ 7ನೇ ವಾರ್ಷಿಕೋತ್ಸವ ಸಮಾರಂಭವನ್ನು ಅವರು ದೀಪ ಬೆಳೆಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳನ್ನು ಕೇವಲ ಓದಿಗಷ್ಟೇ ಸೀಮಿತಗೊಳಿಸದೇ ಗುರು- ಹಿರಿಯರನ್ನು ಗೌರವದಿಂದ ಕಾಣುವಂತ ಮನಸ್ಥಿತಿ ಬೆಳೆಸಬೇಕು. ಅಲ್ಲದೇ ನಾಡಿನ ಹಬ್ಬ- ಹರಿದಿನ, ಪರಂಪರೆಯ ಬಗ್ಗೆ ತಿಳಿಸಿಕೊಡಬೇಕು, ನಯ- ವಿನಯ, ಆಚಾರ- ವಿಚಾರಗಳನ್ನು ಮಕ್ಕಳಿಗೆ ಕಲಿಸಬೇಕು ಎಂದು ಸಲಹೆ ನೀಡಿದರು.
ನಾನು ಬಂಧು- ಬಳಗ, ಸಮಾಜದ ದೌರ್ಜನ್ಯ ಹಾಗೂ ತಾತರಸಾರದ ಮಧ್ಯೆಯೇ ಬೆಳೆದು ಬಂದೆ. ಯಾವತ್ತೂ ಎದೆಗುಂದಲಿಲ್ಲ. ಹಾಗಾಗಿ ಪೋಷಕರು ಮಕ್ಕಳಿಗೆ ಸಾಧಕರ ಪರಿಚಯವನ್ನು ತಿಳಿಸುತ್ತಾ ಅವರಲ್ಲಿ ಆತ್ಮಸ್ಥೈರ್ಯವನ್ನು ತುಂಬುವ ಪ್ರಯತ್ನಮಾಡಬೇಕು ಎಂದು ಹೇಳಿದರು.
ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಧನಂಜಯ ಮಾತನಾಡಿ, ವಿದ್ಯಾದೀಪ ಎಜುಕೇಷನ್ ಟ್ರಸ್ಟ್ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಮೂಲಕ ಸಂಸ್ಥೆಯು ಬೆಳೆಯುತ್ತಿದೆ. ಈ ನಿಟ್ಟಿನಲ್ಲಿ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಪಾತ್ರದ ದೊಡ್ಡದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದು ಸಂಕ್ರಾಂತಿ ಸಂಬ್ರಮದ ಕಾಲ. ಈ ವೇಳೆ ಸೂರ್ಯ ಆರಾಧನೆಯೇ ಒಂದು ವಿಶೇಷ. ಭಾರತೀಯ ಸಂಸ್ಕೃತಿಯಲ್ಲಿ ಪ್ರತಿ ಹಬ್ಬಗಳಿಗೂ ಒಂದೊಂದು ವಿಶೇಷ ಸಂಪ್ರದಾಯ, ಆಚರಣೆಯ ಮಹತ್ವವಿದೆ. ರೈತರು ಆ ದಿನ ಎತ್ತುಗಳಿಗೆ ಪೂಜೆ ಸಲ್ಲಿಸಿ ಕಿಚ್ಚು ಹಾಯಿಸುತ್ತಾ, ತಾವು ಬೆಳೆದ ಬೆಳೆಗಳನ್ನು ರಾಶಿ ರಾಶಿಯಾಗಿ ಹಾಕಿ ಪೂಜೆ ಸಲ್ಲಿಸಿ ಸುಗ್ಗಿಯ ಹಬ್ಬವಾಗಿ ಸಂಭ್ರಮಿಸುತ್ತಾರೆ. ಈ ಹಬ್ಬವು ನಾಡಿಗೆ ಸಮೃದ್ಧಿಯನ್ನು ನೀಡಲಿ ಎಂದು ಪ್ರಾರ್ಥಿಸಿದರು.
ಸಂಕ್ರಾಂತಿ ಸಂದರ್ಭ ಉತ್ತರಾಯಣದ ನಂತರ ಸೂರ್ಯ ದಕ್ಷಿಣಾಯಣದತ್ತ ಸೂರ್ಯ ತನ್ನ ಪಥವನ್ನು ಬದಲಿಸುತ್ತಾನೆ. ಮಹಾಭಾರತದ ಭೀಷ್ಮ ಪಿತಾಮಹನು ಬಾಣಗಳ ಮೇಲೆ ಮಲಗಿಯಾತನೆ ಅನುಭವಿಸುತ್ತಿದ್ದರೂ ದಕ್ಷಿಣಾಯನದಲ್ಲಿ ತನ್ನ ದೇಹವನ್ನು ತ್ಯಜಿಸಲು ಒಪ್ಪದೆ ಉತ್ತರಾಯಣದ ಪುಣ್ಯಕಾಲದ ಅಷ್ಟಮಿ ದಿನ ಸಾವನ್ನು ಬರ ಮಾಡಿಕೊಳ್ಳುತ್ತಾನೆ. ಅಂತಹ ಪುಣ್ಯಕಾಲವಿದು ಎಂದರು.
ವಿದ್ಯಾದೀಪ ಎಜುಕೇಷನ್ ಟ್ರಸ್ಟ್ ನ ಕಾರ್ಯದರ್ಶಿ ರಾಮಕೃಷ್ಣ ಶೆಟ್ಟಿ, ಚೇರ್ಮನ್ ದೀಪ್ತಿ ಆರ್.ಶೆಟ್ಟಿ, ಸ್ಕೂಲ್‌ನ ಪ್ರಾಂಶುಪಾಲರಾದ ರೇಖಾ ಕೆ.ಬಸವರಾಜ್ ಮತ್ತಿತರರು ಭಾಗವಹಿಸಿದ್ದರು. ಈ ಸಂದರ್ಭ ಡಾ.ಮಂಜಮ್ಮ ಜೋಗತಿ ಹಾಗೂ ಡಾ. ಧನಂಜಯ ಸರ್ಜಿಅವರನ್ನು ಸನ್ಮಾನಿಸಲಾಯಿತು.
ವೇದಿಕೆಯ ಮೇಲೆ ಸ್ತ್ರೀ ಒಂದು ಶಕ್ತಿ ಶೀರ್ಷಿಕೆಯ ಫೋಟೊ ಬೂತ್ ಗಮನ ಸೆಳೆಯಿತು. ಪುಟಾಣಿ ಮಕ್ಕಳು ವೈವಿಧ್ಯಮಯ ಮನರಂಜನಾ ಕಾರ್ಯಕ್ರಮಗಳನ್ನು ಪ್ರದರ್ಶಿಸುವ ಮೂಲಕ ಜನಮನಸೂರೆಗೊಂಡರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.