Friday, October 4, 2024
Friday, October 4, 2024

“ತ್ಯಾಜ್ಯ ವಿಲೇವಾರಿಯ ನಿರ್ಲಕ್ಷ್ಯವು ಮನುಕುಲದ ವಿನಾಶಕ್ಕೆ ಕಾರಣವಾಗಲಿದೆ” – ಹಿರಿಯ ಪತ್ರಕರ್ತ ಎಚ್.ಬಿ.ಮಂಜುನಾಥ

Date:

ದಾವಣಗೆರೆ.ಜ.13. ಆಧುನಿಕ ಜೀವನ ವಿಧಾನದಲ್ಲಿ ತ್ಯಾಜ್ಯಗಳು ಅಂದರೆ ಕಸದ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದ್ದು ಇದರ ವಿಲೇವಾರಿಯಲ್ಲಿನ ನಿರ್ಲಕ್ಷವು ಮನುಕುಲದ ಹಾಗೂ ಜೀವಸಂಕುಲದ ವಿನಾಶಕ್ಕೆ ಭವಿಷ್ಯದಲ್ಲಿ ಕಾರಣವಾಗಬಹುದು ಎಂದು ಹಿರಿಯ ಪತ್ರಕರ್ತ ಎಚ್.ಬಿ.ಮಂಜುನಾಥ್ ಎಚ್ಚರಿಕೆ ಕೊಟ್ಟರು. ಅವರಿಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಟ್ರಸ್ಟ್ ದೇವನಗರಿ ತಾಲೂಕು, ದಾವಣಗೆರೆ ಜಿಲ್ಲಾ ಕಛೇರಿ ವತಿಯಿಂದ ನಿಟುವಳ್ಳಿ ಬಳಿಯ ಭೂಮಿಕಾ ನಗರದ ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಪರಿಸರದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ ಆಧುನಿಕ ಜೀವನ ಶೈಲಿಯ ಕೊಳ್ಳುಬಾಕ ಸಂಸ್ಕೃತಿ ಹಾಗೂ ಬಳಸು ಬಿಸಾಕು ಸಂಸ್ಕೃತಿಯು ಘನ ತ್ಯಾಜ್ಯ, ಕಸಗಳ ಪ್ರಮಾಣವನ್ನು ಹೆಚ್ಚಿಸುತ್ತಿದ್ದು ಇಂತಹ ಕಸಗಳ ಸೂಕ್ತ ವಿಂಗಡಣೆ ಹಾಗೂ ವಿಲೇವಾರಿ ಪ್ರಪಂಚದಾದ್ಯಂತ ಸಮರ್ಪಕವಾಗಿ ಆಗುತ್ತಿಲ್ಲ, ನಮ್ಮ ದೇಶದಲ್ಲೇ ವಾರ್ಷಿಕ ಸುಮಾರು 65 ಮಿಲಿಯನ್ ಟನ್ ಗಳಷ್ಟು ಕಸ ಉತ್ಪತ್ತಿಯಾಗುತ್ತಿದ್ದು ಇದರಲ್ಲಿ 45 ಮಿಲಿಯನ್ ಟನ್ನು ಮಾತ್ರ ಸಂಗ್ರಹವಾಗುತ್ತಿದೆ, ಇದರಲ್ಲಿ ಕೇವಲ 14 ಮಿಲಿಯನ್ ಟನ್ ಗಳಷ್ಟು ಮಾತ್ರ ಸಂಸ್ಕರಿಸಲ್ಪಡುತ್ತಿದ್ದು ಉಳಿದ 31 ಮಿಲಿಯನ್ ಟನ್ ಗಳಷ್ಟು ಕಸವು ಎಲ್ಲೆಂದರಲ್ಲಿ ಎಸೆಯಲ್ಪಡುತ್ತಿದೆ, ವಾರ್ಷಿಕ ಸುಮಾರು ನಾಲ್ಕು ಮಿಲಿಯನ್ ಟನ್ ಗಳಷ್ಟು ಪ್ಲಾಸ್ಟಿಕ್ ಕಸವು ಉತ್ಪತ್ತಿಯಾಗುತ್ತಿದ್ದು ಅಂತಿಮವಾಗಿ ಇದರಲ್ಲಿ ಹೆಚ್ಚಿನ ಪಾಲು ಸಮುದ್ರ ಸೇರುತ್ತಿದೆ, ಹೀಗೆ ಸಮುದ್ರ ಸೇರಿದ ಪ್ಲಾಸ್ಟಿಕ್ ಸೂಕ್ಷ್ಮ ಕಣಗಳಾಗಿ ಉಪ್ಪಿನ ಮುಖಾಂತರ, ಮೀನಿನ ಆಹಾರಗಳ ಮುಖಾಂತರ ನಮ್ಮ ದೇಹವನ್ನೇ ಸೇರುತ್ತಿದ್ದು ಇದು ಶ್ವಾಸಕೋಶದಲ್ಲಿ ಸಂಗ್ರಹವಾಗಿ ಕ್ಯಾನ್ಸರ್ ಗೂ, ಸಾವಿಗೂ ಕಾರಣವಾಗುತ್ತಿದೆ, ಬಳಸಿ ಬಿಸಾಕಿದ ಪ್ಲಾಸ್ಟಿಕ್ ನ ಸುಡುವಿಕೆಯಿಂದ ಅಪಾಯಕಾರಿ ಡಯಾಕ್ಸಿನ್, ಫ್ಯೂರಿನ್, ಫಿನೈಲ್ ಅನಿಲ ಸಂಯುಕ್ತಗಳು ಹೊಗೆ ರೂಪದಲ್ಲಿ ಗಾಳಿಗೆ ಸೇರಿ ಹೃದ್ರೋಗಕ್ಕೂ, ನರದೌರ್ಬಲ್ಯಕ್ಕೂ, ತಲೆ ನೋವಿಗೂ, ಕಿಡ್ನಿ ವೈಫಲ್ಯಕ್ಕೂ, ನಪುಂಸತೆಗೂ ಕಾರಣವಾಗುತ್ತಿದೆ, ನಾವು ನಮ್ಮ ಮೊಬೈಲ್ ಗಳಲ್ಲಿ ಬೇಡವಾದ ಸಂದೇಶಗಳನ್ನು ಡಿಲೀಟ್ ಮಾಡಿ ಡಸ್ಟ್ ಬಿನ್ನಿಗೆ ಹಾಕಿ ನಂತರ ರಿಸೈಕಲ್ ಬಿನ್ ಗೆ ಹಾಕುವಲ್ಲಿ ತೋರುವ ಆಸಕ್ತಿಯನ್ನು ನಿಜವಾದ ಕಸ ವಿಲೇವಾರಿಯಲ್ಲಿ ತೋರುತ್ತಿಲ್ಲ, ಇದರಿಂದ ಆಗುವ ಅಪಾಯಗಳನ್ನು ನಾವೀಗಾಗಲೇ ಎದುರಿಸುತ್ತಿದ್ದರೂ ಎಚ್ಚರಿಕೆ ವಹಿಸುತ್ತಿಲ್ಲ, ಮುಖ್ಯವಾಗಿ ಪ್ಲಾಸ್ಟಿಕ್ ಬ್ಯಾಗ್ ಗಳ ಬಳಕೆಯನ್ನು ಬಿಟ್ಟು ಬಟ್ಟೆ ಚೀಲಗಳನ್ನು, ಪೇಪರ್ ಕವರುಗಳನ್ನು ಬಳಸಬೇಕು ಎಂದರಲ್ಲದೆ ಸಮುದ್ರ ಸೇರುತ್ತಿರುವ ಪ್ಲಾಸ್ಟಿಕ್ ಕಸ ಗಳಿಂದಾಗಿ ಸಾಗರ ಸಸ್ಯಗಳು ವಿನಾಶವಾಗುತ್ತಿದ್ದು ಇದರಿಂದ ಆಮ್ಲಜನಕದ ಕೊರತೆಯನ್ನು ಭೂಮಿಯ ಜೀವಿಗಳು ಎದುರಿಸಬೇಕಾಗುತ್ತದೆ ಎಂಬುದನ್ನು ಎಚ್. ಬಿ. ಮಂಜುನಾಥ್ ನಿದರ್ಶನಗಳ ಸಹಿತ ವಿವರಿಸಿದರು. ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದ ಸಂಸ್ಥೆಯ ಯೋಜನಾಧಿಕಾರಿ ಬಾಬುರವರು ಧರ್ಮಸ್ಥಳ ಸಂಸ್ಥೆಯು ಪರಿಸರ ನೈರ್ಮಲ್ಯಕ್ಕೂ ಆದ್ಯತೆ ಕೊಡುತ್ತಿದ್ದು ಹೆಚ್ಚು ಜನರು ಬಂದು ಹೋಗುವ ದೇವಸ್ಥಾನಗಳು, ಪ್ರಾರ್ಥನಾ ಮಂದಿರಗಳು ಮುಂತಾದ ಪ್ರದೇಶಗಳಲ್ಲಿ ಜಾತಿ ಮತ ಭೇದವಿಲ್ಲದೆ ಸ್ವಚ್ಛತಾ ಕಾರ್ಯವನ್ನು ಸಂಸ್ಥೆಯು ಕೈಗೊಳ್ಳುತ್ತಿದ್ದು ಈ ಸಾಲಿನಲ್ಲಿ ಗ್ರಾಮಾಂತರ ಪ್ರದೇಶಗಳ ಸುಮಾರು 500 ದೇವಾಲಯ, ಪ್ರಾರ್ಥನಾ ಮಂದಿರಗಳ ಪರಿಸರವನ್ನು ಸ್ವಯಂ ಪ್ರೇರಣೆಯಿಂದ ಸ್ವಚ್ಛಗೊಳಿಸಲಾಗಿದೆ ಎಂದರು. ಧರ್ಮಸ್ಥಳ ಸಂಸ್ಥೆಯ ಅಧಿಕಾರಿ ಶ್ರೀಧರ್ ಸಂತೆಬೆನ್ನೂರು, ಜಿಲ್ಲಾ ಜನಜಾಗೃತಿಯ ಅಣಬೇರು ಮಂಜಣ್ಣ, ತಿಮ್ಮಪ್ಪ ಹೊನ್ನಾಳಿ, ಕಮಲಾಕ್ಷಿ, ಶ್ರೀ ಸಾಯಿಬಾಬಾ ದೇವಸ್ಥಾನ ಸಮಿತಿಯ ಅರ್ಚನಾ, ರಾಜೇಶ್ವರಿ, ರೂಪಾ ರಾಜೇಶ್ ಹಾಗೂ ಧರ್ಮಸ್ಥಳ ಸಂಸ್ಥೆಯ ಸಿಬ್ಬಂದಿ ವರ್ಗದವರು ಸ್ವಚ್ಛತಾ ಅಭಿಯಾನದಲ್ಲಿ ಉತ್ಸಾಹದಿಂದ ಕೈಜೋಡಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Jawahar Navodaya Vidyalaya ಗಾಜನೂರಿನ ನವೋದಯ ಶಾಲಾ ಪ್ರವೇಶಾತಿ 2025-26 ಪರೀಕ್ಷೆಗೆ ಆನ್ ಲೈನ್ ಅರ್ಜಿ ಆಹ್ವಾನ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯವು 2025-26ನೇ ಸಾಲಿಗೆ 9...

Department of Parliamentary Affairs and Legislation ಅಕ್ಟೋಬರ್ 5 ರಂದು ನಡೆಯುವ “ಯುವ ಸಂಸತ್” ಸ್ಥಳ‌ ಬದಲಾವಣೆ ಗಮನಿಸಿ

Department of Parliamentary Affairs and Legislation ಸಂಸದೀಯ ಮತ್ತು ವ್ಯವಹಾರಗಳು...

MESCOM ಅ.4 ರಿಂದ7 ವರೆಗೆ ಮೆಸ್ಕಾಂ ಆನ್ ಲೈನ್ ಸೇವೆ ತಾತ್ಕಾಲಿಕ ಅಲಭ್ಯ

MESCOM ಅ.04ರಿಂದ 07 ರ ವರೆಗೆ ಮೆಸ್ಕಾಂ ಮಾಹಿತಿ ತಂತ್ರಜ್ಞಾನ...

Shivamogga Dasara ಶಿವಮೊಗ್ಗ ಚಲನಚಿತ್ರ ದಸರಾ ಚಾಲನೆಗೆ ಹಿರಿಯ ನಟಿ ಉಮಾಶ್ರೀ ಆಗಮನ

Shivamogga Dasara ಶಿವಮೊಗ್ಗ ಮಹಾ ನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿರುವ...