ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯವನ್ನು ರಾಹುಲ್ ಅವಿಸ್ಮರಣೀಯವನ್ನಾಗಿಸಿದ್ದಾರೆ. ಸಹಜವಾಗಿ ಆರಂಭಿಕ ಬ್ಯಾಟರ್ ಆಗಿರುವ ರಾಹುಲ್ ಎರಡನೇ ಕ್ರಮಾಂಕದಲ್ಲಿ ಕ್ರೀಸ್ ಗಿಳಿದಿದ್ದರು.
ಆಟದ ಕೊನೆಯ ತನಕ ಅವರು ತೋರಿದ ಸಹನೆ, ಜವಾಬ್ದಾರಿ ಮರೆಯುವಂತಿಲ್ಲ. ರಾಹುಲ್ ಗಳಿಸಿದ ಅಜೇಯ 64 ರನ್ ಗಳಲ್ಲಿ 06 ಬೌಂಡರಿಗಳಿದ್ದವು.
ರೋಹಿತ್ ಶರ್ಮಾ 17, ಗಿಲ್ 21, ಕೊಹ್ಲಿ 4, ಶ್ರೇಯಸ್ 28 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. 86 ರನ್ ಗಳಿಗೆ ನಾಲ್ಕು ವಿಕೆಟ್ ಕಬಳಿಸಿದ ಶ್ರೀಲಂಕಾ ಗೆ ಈ ಪಂದ್ಯ ಬಾಯಿಗೆ ಬಂದ ತುತ್ತಾಗಿದ್ದಂತೆ ಕಂಡುಬಂದಿತು.
ಆದರೆ ರಾಹುಲ್ ಜೊತೆಗೂಡಿದ ಹಾರ್ದಿಕ್ ಪಾಂಡ್ಯ ರನ್ ಗತಿ ಹೆಚ್ಚಿಸಿದರು .53 ಬಾಲ್ ಗಳಲ್ಲಿ 35 ರನ್ ಗಳಿಸಿದ ಹಾರ್ದಿಕ್ ಬ್ಯಾಟಿಂಗ್ ಜಯದತ್ತ ಶೀಘ್ರ ಮುಖ ಮಾಡಿತ್ತು.
ಆದರೆ ಕರುಣಾ ರತ್ನೆ ಅವರ ಬೌಲಿಂಗ್ ನಲ್ಲಿ ಕಾಟ್ ಬಿಹೈಂಡ್ ಆದರು. ಮತ್ತೆ ಆಟಕ್ಕೆ ಮಂಕು ಕವಿಯಬಹುದೇನೋ ಅನ್ನಿಸಿತ್ತು. ಅಕ್ಸರ್ ಪಟೇಲ್ ಅವರು 21 ಬಾಲ್ ಗಳಲ್ಲಿ 21 ರನ್ ಸೇರಿಸಿದರು. ಬ್ಯಾಟಿಂಗ್ ಅದೇ ಬಿಸಿಯಲ್ಲಿತ್ತು.
ಅವರೂ ಹೆಚ್ಚು ಹೊತ್ತು ನಿಲ್ಲಲಿಲ್ಲ. ಡಿಸಿಲ್ವ ಅವರ ಬೌಲಿಂಗ್ ನಲ್ಲಿ ಔಟಾದರು. 191 ರನ್ ಗೆ 6 ವಿಕೆಟ್ ಸ್ಕೋರ್ ಆಗಿತ್ತು.
ಜಯ ಇನ್ನೇನು ಸಮೀಪವಿತ್ತು. ಕುಲದೀಪ್ ಯಾದವ್ ತಮ್ಮ ಬ್ಯಾಟಿಂಗ್ ಸಾಥ್ ನೀಡಿದರು. ಜಯದ ಬೌಂಡರಿ ಬಾರಿಸಿದರು.
ಅಂತೂ ರಾಹುಲ್ ಆತ್ಮವಿಶ್ವಾಸ ಕುದುರಿಸಿಕೊಂಡು ಶ್ರೀಲಂಕಾ ತಂಡದಿಂದ ಜಯ ಕಸಿದುಕೊಂಡರು.
ಶ್ರೀಲಂಕಾ -215 (39-4)
ಭಾರತ-219-06 (43.2)