ಶಿವಮೊಗ್ಗ: ಹೊಸನಗರಗಳಲ್ಲಿನ ಪಿಡಬ್ಲ್ಯೂಡಿ ಕಾಮಗಾರಿಗಳೆಲ್ಲವನ್ನು ಗೃಹ ಸಚಿವರು ಅವರ ಸಂಬಂಧಿ ಸಿವಿ ಚಂದ್ರಶೇಖರ್ ಅವರಿಗೆ ನೀಡಿದ್ದಾರೆ. ಶೇ. 50ರಷ್ಟು ಪಾಲುದಾರಿಕೆಯು ಇದೆ ಎಂದು ಕಿಮ್ಮನೆ ರತ್ನಾಕರ್ ಅವರು ಆರಗ ಜ್ಞಾನೇಂದ್ರ ಅವರ ಮೇಲೆ ಆರೋಪಿಸಿದ್ದಾರೆ.
ಸರ್ಕಾರಿ ಭೂಮಿಯನ್ನು ಖಾಸಗಿ ಭೂಮಿಯನ್ನಾಗಿ ದಾಖಲಿಸಿ, ಲೇಔಟ್ ಗಳನ್ನ ಮಾಡುತ್ತಿದ್ದಾರೆ. ಇವರ ಮಗನೇ ಇದಕ್ಕೆ ಬಂಡವಾಳ ಹೂಡಿದ್ದಾರೆ ಎಂದು ಹೇಳಿದ್ದಾರೆ.
ಯಾವ ಅಧಿಕಾರಿಯನ್ನು ಎಲ್ಲಿಗೆ ವರ್ಗಾವಣೆ ಮಾಡಬೇಕು ಎಂಬ ಪಟ್ಟಿ, ಸ್ಯಾಂಟ್ರೋ ರವಿ ಬಳಿ ಇತ್ತು. ಅದರಂತೆ ವರ್ಗಾವಣೆ ಆಗಿದೆ. ಈ ವಿಚಾರದಲ್ಲಿ ಆರಗ ಜ್ಞಾನೇಂದ್ರ ಅವರನ್ನ ಬಂಧಿಸಬೇಕು. ಫೆಬ್ರವರಿ ಒಳಗೆ ಆರೋಗ್ಯ ಅವರು ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಕಿಮ್ಮನೆ ರತ್ನಾಕರ್ ಅವರು ಎಚ್ಚರಿಕೆ ನೀಡಿದ್ದಾರೆ.
ನಾನು 10 ವರ್ಷ ಶಾಸಕನಾಗಿದ್ದೇನೆ. ಬಿಜೆಪಿಯವರ ಇಂತಹ ರಾಜಕಾರಣಕ್ಕೆ ಹೆದರುವುದಿಲ್ಲ. ನಾನು ರಾಜಕೀಯಕ್ಕೆ ಬಂದಿದ್ದು ಸಮಾಜದ ಸೇವೆಗಾಗಿ. ಇದನ್ನು ಸವಾಲಾಗಿ ಸ್ವೀಕರಿಸುತ್ತೇನೆ. ಮಾನ್ಯ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರಿಗೆ ಈ ಬಗ್ಗೆ ಸವಾಲು ಎಸೆಯುತ್ತೇನೆ. ಅಮಿತ್ ಶಾ ಹಾಗೂ ಆರಗ ಜ್ಞಾನೇಂದ್ರ ಇವರಿಬ್ಬರೂ ನನ್ನ ವಿರುದ್ಧ ಈ ವಿಚಾರದಲ್ಲಿ ಸಿಬಿಐ ತನಿಖೆ ನಡೆಸಲಿ ಎಂದು ಮಾಧ್ಯಮಗೋಷ್ಠಿಯಲ್ಲಿ ಕಿಮ್ಮನೆ ರತ್ನಾಕರ್ ಅವರು ತಿಳಿಸಿದರು
