Thursday, January 23, 2025
Thursday, January 23, 2025

ಶ್ರೀ ಸ್ವಾಮಿ ವಿವೇಕಾನಂದರು

Date:

ಯುವಜನತೆಗೆ ಉತ್ಸಾಹದ ಕಿರಣವಾದ ಸ್ವಾಮಿ

ವಿವೇಕಾನಂದರು 1863 ರ ಜನವರಿ12ರಂದು ಕಲ್ಕತ್ತಾ ನಗರದಲ್ಲಿ ಜನಿಸಿದರು.19 ನೆಯ ಶತಮಾನದಲ್ಲಿ ಭಾರತದಲ್ಲಿ ಸಾಮಾಜಿಕ,ಧಾರ್ಮಿಕ ಜಾಗೃತಿ ಮೂಡಿಸಿದ ಅನೇಕ ಸಮಾಜ ಸುಧಾರಕರಲ್ಲಿ ಸ್ವಾಮಿ ವಿವೇಕಾನಂದರೂ ಒಬ್ಬರು.

ಇವರು ಹುಟ್ಟಿದ ಜನವರಿ 12 ನೆಯ ದಿನಾಂಕವನ್ನು ರಾಷ್ಟ್ರೀಯ ಯುವದಿನವನ್ನಾಗಿ ಆಚರಿಸಲಾಗುತ್ತದೆ.

ವಿವೇಕಾನಂದರು ಕಲಕತ್ತೆಯ ನಿವಾಸಿಗಳಾಗಿದ್ದ ವಿಶ್ವನಾಥದತ್ತ ಮತ್ತು ಭುವನೇಶ್ವರಿದೇವಿ ಎಂಬ ದಂಪತಿಗಳ ಮಗನಾಗಿ ಹುಟ್ಟಿದರು. ನರೇಂದ್ರನಾಥದತ್ತ ಎಂಬುದು ಇವರ ಜನ್ಮನಾಮ.

ನರೇಂದ್ರನು ಬಾಲಕನಾಗಿದ್ದಾಗಲೇ ಅಧ್ಯಯನದಲ್ಲಿ ಏಕಾಗ್ರತೆ ಮತ್ತು ಎಲ್ಲವನ್ನೂ ತಿಳಿದುಕೊಳ್ಳುವ ಕುತೂಹಲವಿತ್ತು. ನರೇಂದ್ರನು ಕಲ್ಕತ್ತಾ ನಗರದಲ್ಲಿದ್ದುದರಿಂದ ಆಂಗ್ಲಭಾಷೆಯಲ್ಲೇ ವಿದ್ಯಾಭ್ಯಾಸವನ್ನು ಮಾಡಬೇಕಾಯಿತು. ಆಟ ಪಾಠಗಳಲ್ಲಿ ಸದಾ ಮಂಚೂಣಿಯಲ್ಲಿದವನು ನರೇಂದ್ರ. ಒಳ್ಳೊಳ್ಳೆಯ ಪುಸ್ತಕಗಳನ್ನು ಓದಿ ತನ್ನ ಜ್ಞಾನವನ್ನು ಹೆಚ್ಚಿಸಿಕೊಂಡಿದ್ದನು. ಅಪ್ಪಟ ದೇಶಪ್ರೇಮವನ್ನು ಬೆಳೆಸಿಕೊಂಡಿದ್ದ.

ಅವರ ಜ್ಞಾನ ಬೆಳೆಯುತ್ತಾ ಹೋದಂತೆ ದೇವರಿದ್ದಾನೆಯೇ ಮತ್ತು ದೇವರನ್ನು ಯಾರಾದರೂ ನೋಡಿದ್ದಾರೆಯೇ ಎಂಬ ಜಿಜ್ಞಾಸೆ ಕಾಡತೊಡಗಿತು.ಕೊನೆಗೆ ಶ್ರೀರಾಮಕೃಷ್ಣ ಪರಮಹಂಸರು ಗುರುಗಳಾಗಿ ಸಿಕ್ಕ ಮೇಲಷ್ಟೇ ಅವರ ಜಿಜ್ಞಾಸೆ ಪರಿಹಾರವಾಯಿತು.

ಗುರುಗಳಾದ ಶ್ರೀರಾಮಕೃಷ್ಣ ಪರಮಹಂಸರು ಆಧ್ಯಾತ್ಮದ ಸಕಲ ಅನುಭವವನ್ನೂ ಮಾಡಿಕೊಟ್ಟರು. ಶ್ರೀರಾಮಕೃಷ್ಣಪರಮಹಂಸರ ಶಿಷ್ಯರಾದ ಇವರು ಸನ್ಯಾಸ ಸ್ವೀಕರಿಸಿ”ವಿವೇಕಾನಂದ”ರೆಂದು ಹೆಸರು ಪಡೆದರು. ಆಧ್ಯಾತ್ಮಿಕತೆಯನ್ನು ಎತ್ತಿ ಹಿಡಿಯಲು ಸಮರ್ಥ ಯುವಕನಾದ ವಿವೇಕಾನಂದ ನೆಂಬ ಸೂರ್ಯನ ಉದಯವಾಯಿತು.

ವಿವೇಕಾನಂದರು ಧರ್ಮ ಸಮ್ಮೇಳನದಲ್ಲಿ ಭಾಗವಹಿಸಲುಚಿಕಾಗೋನಗರಕ್ಕೆಹೋಗುತ್ತಾರೆ.ಸಮ್ಮೇಳನದಲ್ಲಿ ಹಿಂದೂಧರ್ಮದ ಬಗ್ಗೆ ತಿಳಿಸಿ, ವೇದಾಂತದ ಭಾವನೆಗಳನ್ನು ತಮ್ಮ ಭಾಷಣದ ಮೂಲಕ ಜನರ ಮುಂದಿರಿಸಿದರು. ಅವರ ಭಾಷಣದ ಸಾರ ಭಾರತದ ಶ್ರೇಷ್ಠತೆಯನ್ನು ಎತ್ತಿ ಹಿಡಿಯಿತು. ತಮ್ಮ ವಿದ್ವತ್ಪೂರ್ಣ ಭಾಷಣಗಳಿಂದ ವಿಶ್ವವಿಖ್ಯಾತರಾದರು. ಮೂರುವರ್ಷಗಳ ಕಾಲ ವಿದೇಶಗಳಲ್ಲಿ ಸಂಚರಿಸಿ,ಚರ್ಚಾಸಭೆಗಳಲ್ಲಿ ಭಾಗವಹಿಸಿ ಮತ್ತೆ ಭಾರತಕ್ಕೆ ಮರಳಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯಾತ್ರೆಕೈಗೊಂಡು ತಮ್ಮ ಉಪನ್ಯಾಸದಿಂದ ಯುವಜನತೆಯಲ್ಲಿ ಜಾಗೃತಿ ಮೂಡಿಸಿದರು. ಭಾರತೀಯ ಯುವ ಜನತೆ ಇವರ ಮನಮುಟ್ಟುವ ಉಪನ್ಯಾಸದ ವೈಖರಿಗೆ ವಿವೇಕಾನಂದರಿಗೆ ಗುರುವಿನ ಸ್ಥಾನಕೊಟ್ಟು ಗೌರವಿಸಿದರು.

ಲೇ; ಎನ್.ಜಯಭೀಮ ಜೊಯಿಸ್. ಶಿವಮೊಗ್ಗ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Mallikarjun Kharge ಸಂವಿಧಾನ & ಪ್ರಜಾಪ್ರಭುತ್ವ ಇಲ್ಲದಿದ್ದರೆ ದೇಶದಲ್ಲಿ ಅರಾಜಕತೆ ಉಂಟಾಗುತ್ತಿತ್ತು- ಮಲ್ಲಿಕಾರ್ಜುನ ಖರ್ಗೆ

Mallikarjun Kharge ಬೆಳಗಾವಿ, ಜ.21 ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924ರಲ್ಲಿ ಬೆಳಗಾವಿಯಲ್ಲಿ...

MESCOM ಜನವರಿ 24. ಶಿವಮೊಗ್ಗ ನಗರ ಉಪವಿಭಾಗೀಯ ಮೆಸ್ಕಾಂ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಶಿವಮೊಗ್ಗ ಮೆಸ್ಕಾಂ ನಗರ ಉಪವಿಭಾಗ – 3 ಕಛೇರಿಯಲ್ಲಿ ಜ....