Wednesday, October 2, 2024
Wednesday, October 2, 2024

ರಕ್ತದಾನ ಜಾತಿ ಮತ ಧರ್ಮ ಒಗ್ಗೂಡಿಸುವ ಸಂಕೇತವೂ ಆಗಿದೆ- ಡಾ.ಅರುಣ್

Date:

ರಕ್ತದಾನ ಜಾತಿ, ಮತ, ಧರ್ಮ ಮತ್ತು ಹೆಚ್ಚಿನದನ್ನು ಲೆಕ್ಕಿಸದೆ ಜನರನ್ನು ಒಂದುಗೂಡಿಸುವ ಮಾನವೀಯತೆಯ ಸಂಕೇತವೂ ಆಗಿದೆ ಎಂದು ಐಎಂಎ ಅಧ್ಯಕ್ಷ ಡಾ . ಅರುಣ್ ಎಂ ಎಸ್ ಹೇಳಿದರು .

ವೈದ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಿತರಾಗಿ ಬಂದು ರಕ್ತದಾನ ಮಾಡಿದ್ದು ಬಹಳ ಖುಷಿಕೊಟ್ಟಿದೆ ಎಂದರು.

ದಿನಾಂಕ 8.1.2023 ರಂದು
ಭಾರತೀಯ ವ್ಯದ್ಯಕೀಯ ಸಂಘವು ರಕ್ತದಾನ ಶಿಬಿರವನ್ನು ಏರ್ಪಡಿಸಿತ್ತು. ಭಾನುವಾರ ಬೆಳಿಗ್ಗೆ 9-00 ಘಂಟೆಯಿಂದ ಮಧ್ಯಾಹ್ನ 1.30ರ ವರೆಗೆ ನಗರದ ಐಎಂಎ ಹಾಲ್ ನಲ್ಲಿ ಅಭಿರುಚಿ ಶಿವಮೊಗ್ಗ, ರೋಟರಿ ರಕ್ತನಿಧಿ ಕೇಂದ್ರ ಇವುಗಳ ಸಹಯೋಗದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

2 ಸಂಘದ ಸದಸ್ಯರು , ಅವರ ಕುಟುಂಬದವರು , ಆಸ್ಪತ್ರೆ ಸಿಬ್ಬಂಧಿಗಳು , ವೈದ್ಯಕೀಯ ವಿದ್ಯಾರ್ಥಿಗಳು ಹಾಗು ಸಮಾಜದ ಪ್ರಜ್ಞಾವಂತ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ರಕ್ತದಾನ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಸುಮಾರು 52 ರಷ್ಟು ರಕ್ತದ ಯುನಿಟ್ ಸಂಗ್ರಹಕ್ಕೆ ಕಾರಣೀಭೂತರಾಗಿದ್ದಾರೆ. ಜೀವ ಉಳಿಸುವ ಈ ಒಂದು ಶ್ರೇಷ್ಠ ವಾದ ಕಾರ್ಯವನ್ನು ಆಯೋಜಿಸಿ ಭಾರತೀಯ
ವೈದ್ಯಕೀಯ ಸಂಘ ಸಾಮಾಜಿಕ ಒಳಿತಿಗೆ ಕಾರಣವಾಗಿದೆ . ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಾರ್ಡ್ ನಂ .21 ರ ಕಾರ್ಪೋರೇಟೋರ್ ಶ್ರೀಮತಿ ಮೀನಾ ಗೋವಿಂದರಾಜು ಆಗಮಿಸಿದ್ದರು .

ಒಬ್ಬ ವ್ಯಕ್ತಿಯು ಸಮಾಜಕ್ಕೆ ನೀಡಬಹುದಾದ ಮಹತ್ವದ ಕೊಡುಗೆಗಳಲ್ಲಿ ರಕ್ತದಾನವು ಒಂದು. ವಯಸ್ಕ ವ್ಯಕ್ತಿಗೆ ರಕ್ತದಾನ ಮಾಡುವುದು ಹಾನಿಕಾರಕವಲ್ಲ. ದಾನಿಯ ದೇಹವು ಕೆಲವೇ ದಿನಗಳಲ್ಲಿ ರಕ್ತವನ್ನು ಪುನರುತ್ಪಾದಿಸುತ್ತದೆ. ಇದು ದೇಹದ ಚಯಾಪಚಯ ಕ್ರಿಯೆಗೆ ಯಾವುದೇ ಅಪಾಯವನ್ನುಂಟು ಮಾಡುವುದಿಲ್ಲವೆಂದು ಅಭಿರುಚಿ ಅಧ್ಯಕ್ಷರಾದ ಡಾ . ಶಿವರಾಮಕೃಷ್ಣ ಅವರು ಹೇಳಿದರು.

ರಕ್ತದಾನ ಮಾಡಲು ಅರ್ಹರಾಗಿರುವ ವ್ಯಕ್ತಿಯು 19-55 ವರ್ಷ ವಯಸ್ಸಿನವರಾಗಿರಬೇಕು. ಅವರು 50 ಕೆಜಿಗಿಂತ ಹೆಚ್ಚು ತೂಕವಿರಬೇಕು ಮತ್ತು ಉತ್ತಮ ಆರೋಗ್ಯವನ್ನು ಹೊಂದಿರಬೇಕು. ಮಧುಮೇಹ, ಅಧಿಕ ರಕ್ತದೊತ್ತಡ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿರುವವರು ರಕ್ತದಾನ ಮಾಡುವಂತಿಲ್ಲ ಎಂದು ರೋಟರಿ ಬ್ಲಡ್ ಬ್ಯಾಂಕ್ ವತಿಯಿಂದ ಆಗಮಿಸಿದ ಡಾ . ಸಂಜಯ್ ಅವರು ತಿಳಿಸಿದರು.

ಐಎಂಎ ಕಾರ್ಯದರ್ಶಿ ಡಾ . ರಕ್ಷಾ ರಾವ್ , ಖಜಾಂಚಿ ಡಾ . ಶಶಿಧರ್ , ಜಂಟಿ ಕಾರ್ಯದರ್ಶಿ ಡಾ . ಅನೂಪ್ ರಾವ್ , ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ ಕೌಸ್ತುಭಾ ಅರುಣ್ , ಅಭಿರುಚಿ ಕಾರ್ಯದರ್ಶಿ ಶ್ರೀ ಕುಮಾರ ಶಾಸ್ತ್ರೀ , ಶ್ರೀ ಬಾಪಟ್ ಉಪಸ್ಥಿತರಿದ್ದರು .

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...