ಶಿವಮೊಗ್ಗ: ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಶಿಕ್ಷಣ ಸಚಿವರಾದ ಸನ್ಮಾನ್ಯಶ್ರೀ ನಾಗೇಶ ರವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು,ಭಾರತ ದೇಶ ಬ್ರಿಟಿಷರ ದಬ್ಬಾಳಿಕೆ ಯಲ್ಲಿ ಇದ್ದಂತಹ ವೇಳೆಯಲ್ಲಿ, ನಮ್ಮ ದೇಶದಲ್ಲಿ ಇದ್ದಂತಹ ಶಿಕ್ಷಣ ಪದ್ಧತಿಯನ್ನು ತೆಗೆದುಹಾಕಿದರು. ನಂತರ ತಮಗೆ ಬೇಕಾಗುವ ರೀತಿಯಲ್ಲಿ ಶಿಕ್ಷಣ ಪದ್ಧತಿಯನ್ನು ರೂಪಿಸಿದರು ಎಂದು ಶಿಕ್ಷಣ ಸಚಿವರಾದ ನಾಗೇಶ್ ಅವರು ಹೇಳಿದರು.
ಸರ್ವ ಶಿಕ್ಷಣ ಅಭಿಯಾನದ ಮೂಲಕ ನಮ್ಮ ದೇಶದ ಪ್ರತಿಯೊಂದು ಮಗುವಿಗೂ ಶಿಕ್ಷಣ ತಲುಪಬೇಕು. ದೇಶದ ಪ್ರತಿಯೊಂದು ಮಗುವಿಗೂ ಜ್ಞಾನ ದೊರಕಬೇಕು. ಪ್ರತಿಯೊಂದು ಮಗು ಸ್ವಾವಲಂಬಿ, ಸ್ವಾಭಿಮಾನಿ ಪ್ರಜೆಯಾಗಿ ಹೊರಹೊಮ್ಮಬೇಕು. ಈ ಎಲ್ಲಾ ಕಲ್ಪನೆಗಳನ್ನು ಇಟ್ಟುಕೊಂಡು 2000ರಲ್ಲಿ ಸರ್ವ ಶಿಕ್ಷಣ ಅಭಿಯಾನ ಎಂಬುದನ್ನು ಈ ದೇಶದಲ್ಲಿ ಘೋಷಣೆ ಮಾಡಲಾಯಿತು ಎಂದರು.
ಮಕ್ಕಳು ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಇದು ಸಹಾಯಕ ಎಂದು ಸಲಹೆ ನೀಡಿದರು.
ಕಾರ್ಯಕ್ರಮಕ್ಕೆ ವಿವಿಧ ಜಿಲ್ಲೆಗಳಿಂದ ಹಲವು ಪ್ರತಿಭೆಗಳು ಆಗಮಿಸಿದ್ದರು. ಇಂದು ಮೊದಲ ದಿನ ಪ್ರತಿಭಾ ಕಾರಂಜಿ ಕಾರ್ಯಕ್ರಮ ಅತ್ಯಂತ ಸುಂದರ ಆಕರ್ಷವಾಗಿ ನಡೆಯಿತು.
ಈ ಸಂದರ್ಭದಲ್ಲಿ ಶಿವಮೊಗ್ಗ ಶಾಸಕ ಕೆ.ಎಸ್. ಈಶ್ವರಪ್ಪ, ಡಿಎಸ್ ಅರುಣ್, ಜಿಲ್ಲಾಧಿಕಾರಿಗಳಾದ ಡಾ.ಸೆಲ್ವ ಮಣಿ ಇನ್ನೂ ಮುಂತಾದ ಗಣ್ಯರು ಉಪ್ಥಿತರಿದ್ದರು.