ಸಗಟು ಹಣದುಬ್ಬರವು ಏಪ್ರಿಲ್ ನಿಂದ ಈವರೆಗೆ ಸತತ ಏಳನೇ ತಿಂಗಳಿನಲ್ಲಿಯೂ ಎರಡಂಕಿ ಮಟ್ಟದಲ್ಲಿಯೇ ಇದೆ. ಈ ವರ್ಷದ ಸೆಪ್ಟೆಂಬರ್ ನಲ್ಲಿ ಶೇಕಡ 10.66ರಷ್ಟು ಇತ್ತು. ಇದಕ್ಕೆ ಹೋಲಿಸಿದರೆ ಶೇ. 1.88 ರಷ್ಟು ಹೆಚ್ಚಾಗಿದೆ. 2020 ರ ಅಕ್ಟೋಬರ್ ನಲ್ಲಿ ಇದ್ದ ಶೇಕಡ 1.31ಕ್ಕೆ ಹೋಲಿಸಿದರೆ ಶೇ.11. 23ರಷ್ಟು ಏರಿಕೆಯಾಗಿದೆ.
ತಯಾರಿಕಾ ಉತ್ಪನ್ನಗಳು ಮತ್ತು ಕಚ್ಚಾ ಪೆಟ್ರೋಲಿಯಂ ಬೆಲೆಯಲ್ಲಿ ಏರಿಕೆ ಆಗಿರುವುದೇ ಅಕ್ಟೋಬರ್ ನಲ್ಲಿ ಸಗಟು ಹಣದುಬ್ಬರವು ಈ ಪ್ರಮಾಣದಲ್ಲಿ ಏರಿಕೆ ಆಗಲು ಕಾರಣ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ವಾರ ಸರ್ಕಾರವು ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಗ್ರಾಹಕ ದರ ಸೂಚ್ಯಂಕ ಆಧರಿಸಿ ( ಸಿಪಿಐ) ಚಿಲ್ಲರೆ ಹಣದುಬ್ಬರವು ಅಕ್ಟೋಬರ್ ನಲ್ಲಿ ಶೇಕಡ 4.48ರಷ್ಟಾಗಿದೆ. ಸೆಪ್ಟೆಂಬರ್ ನಲ್ಲಿ ಇದು ಶೇ. 4.35ರಷ್ಟು ಇತ್ತು. ತಯಾರಿಕಾ ವೆಚ್ಚ, ಇಂಧನ ಮತ್ತು ಸರಕುಗಳ ಬೆಲೆ ಏರಿಕೆಯಿಂದಾಗಿ ಆಹಾರ ವಸ್ತುಗಳ ಬೆಲೆ ಹೆಚ್ಚಾಗಿದೆ.
ಇದರಿಂದಾಗಿ ಚಿಲ್ಲರೆ ಹಣದುಬ್ಬರವೂ ಹೆಚ್ಚಾಗಿದೆ ಎಂಬ ಮಾಹಿತಿ ದೊರೆತಿದೆ.
ಬೇಡಿಕೆಯು ಸುಧಾರಿಸುತ್ತಿದೆ. ಇಂಧನಗಳ ಮೇಲಿನ ತೆರಿಗೆ ಕಡಿತವು ತುಸು ಸಮಾಧಾನ ನೀಡಿದ್ದರೂ, ಕಂಪನಿಗಳು ತಮ್ಮ ತಯಾರಿಕೆ ಮತ್ತು ಸಾಗಣೆಗಳನ್ನು ವರ್ಗಾಯಿಸಲು ಆರಂಭಿಸಿವೆ. ಮುಂಬರುವ ತಿಂಗಳುಗಳಲ್ಲಿ ಸಗಟು ಹಣದುಬ್ಬರವು ತಗ್ಗುವ ನಿರೀಕ್ಷೆ ಇದೆ.
2021 ರ ಮಾರ್ಚ್ ವೇಳೆಗೆ ಶೇ.7.5 ರಿಂದ ಶೇ.8.5 ರ ಮಟ್ಟ ದಲ್ಲಿ ಇರುವ ಅಂದಾಜು ಮಾಡಲಾಗಿದೆ ಎಂದು ಐಸಿಆರ್ ಎ ಮುಖ್ಯ ಆರ್ಥಿಕ ತಜ್ಞೆ ಅದಿತಿ ನಾಯರ್ ಹೇಳಿದ್ದಾರೆ.
ಸಗಟು ಹಣದುಬ್ಬರಕ್ಕೆ ಇಂಧನ ಬೆಲೆ ಆಧಾರ
Date: