ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಸರ್ವರಿಗೂ ಸೂರು, ಈ ನಾಡನ್ನು ಗುಡಿಸಲು ಮುಕ್ತ ಮಾಡುತ್ತವೆ ಎಂದು ಘೋಷಣೆ ಯನ್ನು ಮೂಡಿಸುತ್ತವೆ. ಆದರೆ, ಕಳೆದ ಮೂರು ವರ್ಷಗಳಿಂದ ರಾಜ್ಯದ ಗ್ರಾಮೀಣ ವಸತಿ ಯೋಜನೆಗಳು ಸ್ಥಗಿತಗೊಂಡಿದೆ. ಗ್ರಾಮೀಣ ವಸತಿಯನ್ನೆ ನಂಬಿಕೊಂಡು ಕೂತ ಅದೆಷ್ಟೋ ಕುಟುಂಬಗಳು ಇಂದಿಗೂ ಸರ್ಕಾರದ ವಸತಿ ಮನೆಗಳ ನಿರ್ಮಾಣಕ್ಕಾಗಿ ಕಾದು ಕುಳಿತಿವೆ.
ರಾಜ್ಯ ಸರ್ಕಾರ 2018- 19 ನೇ ಸಾಲಿನಿಂದ ಗ್ರಾಮೀಣ ವಸತಿ ಯೋಜನೆಗಳಿಗೆ ಅನುದಾನ ಹಂಚಿಕೆಯನ್ನೇ ನಿಲ್ಲಿಸಿದೆ. 2016-17, 2017-18ನೇ ಸಾಲಿನ ಫಲಾನುಭವಿಗಳಿಗೆ 2-3 ಬಿಲ್ ಗಳನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಇದರಿಂದ ಮನೆಗಳು ಅರೆಬರೆ ನಿರ್ಮಾಣದ ಸ್ಥಿತಿಯಲ್ಲಿವೆ.
ರಾಜೀವ್ ಗಾಂಧಿ ವಸತಿ ನಿಗಮವು ಗ್ರಾಮೀಣ ಭಾಗದಲ್ಲಿ ಪಂಚಾಯಿತಿಗಳ ಮೂಲಕ ಪ್ರಧಾನ ಮಂತ್ರಿ ಅವಾಸ್ ಯೋಜನೆ, ಅಂಬೇಡ್ಕರ್, ಬಸವ ವಸತಿ ಯೋಜನೆ, ಮತ್ಸ್ಯಾಶ್ರಯ ವಸತಿ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇವುಗಳ ಹಂಚಿಕೆ ಪಂಚಾಯಿತಿಗಳ ಮೂಲಕ ನಡೆಯುತ್ತದೆ. ಹಲವು ಪಂಚಾಯಿತಿ ಸದಸ್ಯರು ಮನೆ ನೀಡುವ ಭರವಸೆಯೊಂದಿಗೆ ಚುನಾವಣೆ ಎದುರಿಸುತ್ತಾರೆ. ಈಗ ಸರ್ಕಾರವೇ ಅನುದಾನವನ್ನೇ ನಿಲ್ಲಿಸಿರುವುದರಿಂದ ಮನೆಗಳ ನಿರ್ಮಾಣ ಪ್ರಕ್ರಿಯೆಯು ಸಂಪೂರ್ಣವಾಗಿ ನಿಂತಂತಾಗಿದೆ.
2018- 19 ರಲ್ಲಿ ಅತಿವೃಷ್ಟಿಯಲ್ಲಿ ಮನೆ ಕಳೆದುಕೊಂಡವರಿಗೆ ರಾಜ್ಯ ಸರಕಾರ 5 ಲಕ್ಷ ರೂ. ಪರಿಹಾರ ಘೋಷಿಸಿತ್ತು.
ರಾಜೀವ್ ಗಾಂಧಿ ವಸತಿ ನಿಗಮದ ಮೂಲಕವೇ ಪರಿಹಾರ ಹಂಚಿಕೆ ಮಾಡಿದ್ದರಿಂದಾಗಿ ವಸತಿ ಯೋಜನೆಗಳಿಗೆ ಅನುದಾನ ಹಂಚಿಕೆ ಸ್ಥಗಿತಗೊಂಡಿತೆಂಬ ಮಾತುಗಳು ಸರ್ಕಾರಿ ವಲಯದಿಂದ ಕೇಳಿಬಂದಿವೆ.
ಈಗ ವಸತಿ ಯೋಜನೆ ಮನೆಗಳ ಹಂಚಿಕೆಗೂ ಹಣ ಇಲ್ಲ. ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳಿಗೂ ಪರಿಹಾರ ಇಲ್ಲ ಎಂಬಂತಾಗಿದೆ.
ಇದರಿಂದಾಗಿ ಸರ್ಕಾರದಿಂದ ಕೇವಲ ಎರಡು ಅಥವಾ ಮೂರು ಬಿಲ್ಲುಗಳು ಸ್ವಿಕೃತಗೊಂಡ ಪರಿಣಾಮ ಮಿಕ್ಕ ಹಣ ಬಾಕಿಯಾಗಿ ಫಲಾನುಭವಿಗಳು ಅತಂತ್ರರಾಗಿದ್ದಾರೆ. ಫಲಾನುಭವಿಗಳ ಹಿತಾಸಕ್ತಿ ಮತ್ತು ಸದ್ಯದ ಮಳೆಗಾಲದ ಸಂಕಷ್ಟ ಪರಿಸ್ಥಿತಿಯನ್ನು ಸಹಾನುಭೂತಿಯಿಂದ ಸರ್ಕಾರ ಗಮನಿಸಬೇಕಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.