ದೀಪಾವಳಿ ಸಿಡಿಮದ್ದು ಹಾಗೂ ಸುಂದರ ದೀಪಗಳನ್ನು ಬೆಳಗಿಸುವ ಹಬ್ಬ. ಮನದ ಕತ್ತಲೆಯನ್ನು ಕಳೆದು ಜೀವನದಲ್ಲಿ ಬೆಳಕು ಕಾಣುವ ಹಬ್ಬ. ಅದನ್ನೇ ತಮಸೋಮ ಜ್ಯೋತಿರ್ಗಮಯ ಎಂದಿದ್ದಾರೆ ಹಿರಿಯರು. ಹಬ್ಬಗಳಲ್ಲಿ ಊಟ, ಉಡುಗೆ ಅಲ್ಲದೆ ಹಾಡು-ಕುಣಿತ ಎಲ್ಲವೂ ಸೇರಿರುತ್ತದೆ. ಮಲೆನಾಡಿನ ದೀಪಾವಳಿ ಕೂಡ ಅತ್ಯಂತ ವಿಶಿಷ್ಟವಾದದ್ದು ದೀಪ ಬೆಳಗುವ ಜೊತೆಗೆ ಅಂಟಿಗೆ-ಪಿಂಟಿಗೆ ಒಂದು ವಿಶೇಷ ಗಮನ ಸೆಳೆಯುವ ಆಚರಣೆಯಾಗಿದೆ. ಇದರೊಂದಿಗೆ ಇನ್ನೊಂದು ವಿಶೇಷ ಆಕರ್ಷಣೆ ಎಂದರೆ ರಾತ್ರಿ ವೇಳೆ ದೀಪದ ಬೆಳಕಿನ ಮುಂದೆ ಕೋಲಾಟ ಪ್ರದರ್ಶನ ನಡೆಯುತ್ತದೆ. ಮನೆ ಅಂಗಳದಲ್ಲಿ ರಾತ್ರಿ ಹಣತೆ ಬೆಳಗಿ ಅದರ ಬೆಳಕಿನಲ್ಲಿ ಕೋಲಾಟ ಆಡುವುದು ಒಂದು ವಿಶೇಷ. ಗ್ರಾಮೀಣ ಯುವಕರು ವಿವಿಧ ರೀತಿಯ ಹೆಜ್ಜೆಹಾಕಿ ಕೋಲು ಹಾಕುತ್ತಾ ಕುಣಿಯುತ್ತಾರೆ. ಕೋಲು ಪದಕ್ಕೆ ಲಯಬದ್ಧವಾಗಿ ಕುಣಿಯುವ ಅವರ ವಿವಿಧ ಭಂಗಿಗಳನ್ನು ನೋಡುವುದೇ ಒಂದು ಆನಂದ. ಈಗ ನೀವು ನೋಡುತ್ತಿರುವುದು ಸಾಗರ ತಾಲೂಕಿನ ತಾಳಗುಪ್ಪ ಸಮೀಪದ ಸುತ್ತಮುತ್ತಲಿನ ಗ್ರಾಮದ ಯುವಕರ ಕೋಲಾಟ.
ದೀಪದ ಬೆಳಕಿನಲ್ಲಿ, ಕೋಲಾಟದ ಬೆಡಗು
Date: