ಹೊಸ ವರ್ಷದ ಹಿನ್ನೆಲೆ ಸಾವಿರಾರು ಲೀಟರ್ ಮದ್ಯ ಮಾರಾಟವಾಗಿದೆ. ಅಬಕಾರಿ ಇಲಾಖೆ ಬೊಕ್ಕಸಕ್ಕೆ ಸಾವಿರಾರು ಕೋಟಿ ಆದಾಯ ಬಂದಿದೆ.
ಕಳೆದ 5 ದಿನದಲ್ಲಿ ಬಹಳ ಜೋರಾಗಿ ಮದ್ಯ ಮಾರಾಟವಾಗಿದೆ.
ಡಿ.27 ರಂದು 3.57 ಲಕ್ಷ ಲೀ. ಐಎಂಎಲ್ , 2.41 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ
ಡಿ.28ರಂದು 2.31 ಲಕ್ಷ ಲೀಟರ್ ಐಎಂಎಲ್, 1.67 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ.
ಡಿ.29ರಂದು 2.31 ಲಕ್ಷ ಲೀಟರ್ ಐಎಂಎಲ್, 1.93 ಲಕ್ಷ ಲೀಟರ್ ಬಿಯರ್ ಮಾರಾಟ
ಡಿ.30ರಂದು 2.93 ಲಕ್ಷ ಲೀಟರ್ ಐಎಂಎಲ್, 2.59 ಲಕ್ಷ ಲೀಟರ್ ಬಿಯರ್ ಮಾರಾಟ
ಡಿ.31ರಂದು 3 ಲಕ್ಷ ಲೀಟರ್ ಐಎಂಎಲ್, 2.41 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ.
ಡಿಸೆಂಬರ್ 31ರಂದು ಒಂದೇ ದಿನ ಮೂರು ಲಕ್ಷ ಲೀಟರ್ ಐಎಂಎಲ್, 2.41 ಲಕ್ಷ ಲೀಟರ್ ಬಿಯರ್ ಸೇಲ್ ಆಗಿದೆ.
ಡಿ.23ರಿಂದ ಡಿ.31ರವರೆಗಿನ ಸೇಲ್ ವ್ಯಾಲ್ಯೂ 1,262 ಕೋಟಿ ರೂಪಾಯಿ. ಈ ಒಂದು ವಾರದಲ್ಲಿ ಒಟ್ಟು 20.66 ಲಕ್ಷ ಲೀಟರ್ ಐಎಂಎಲ್ ಮದ್ಯ ಹಾಗೂ 15.04 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ.
