ಅಡಕೆ ಹಾಳೆಯಿಂದ ವಿವಿಧ ಉತ್ಪನ್ನಗಳನ್ನು ತಯಾರಿಸಿ ದೇಶ ಹಾಗೂ ವಿಶ್ವ ಮಟ್ಟದಲ್ಲಿ ಮಾರಾಟ ಮಾಡುತ್ತಿರುವ ಶಿವಮೊಗ್ಗ ಜಿಲ್ಲೆಯ ದಂಪತಿ ಬಗ್ಗೆ ಪ್ರಧಾನಿ ಮೋದಿಯವರು ತಮ್ಮ ಮನ್ ಕಿ ಬಾತ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..
ಕರ್ನಾಟಕದ ಶಿವಮೊಗ್ಗದ ಸುರೇಶ್ ಮತ್ತು ಅವರ ಪತ್ನಿ ಮೈಥಿಲಿ ಅವರು ಅಡಕೆ ಹಾಳೆಯಿಂದ ಮಾಡಿದ ಅನೇಕ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಪೂರೈಸುತ್ತಿದ್ದಾರೆ. ಟ್ರೇ, ಪ್ಲೇಟ್, ಹ್ಯಾಂಡ್ ಬ್ಯಾಗ್ ಮೊದಲಾದವು ಆ ಉತ್ಪನ್ನಗಳಲ್ಲಿ ಸೇರಿವೆ. ಅಡಕೆ ಹಾಳೆಯ ಪಾದರಕ್ಷೆಗಳನ್ನು ಸಹ ಜನ ಇಂದು ಬಹಳವಾಗಿ ಇಷ್ಟಪಡುತ್ತಿದ್ದಾರೆ. ಇಂದು ಅವರ ಉತ್ಪನ್ನಗಳಿಗೆ ಲಂಡನ್ ಮತ್ತು ಯುರೋಪ್ ಮಾರುಕಟ್ಟೆಗಳಿಂದ ಭಾರಿ ಬೇಡಿಕೆ ಇದೆ. ಇದು ನಮ್ಮ ನೈಸರ್ಗಿಕ ಸಂಪನ್ಮೂಲ ಮತ್ತು ಸಾಂಪ್ರದಾಯಿಕ ಕೌಶಲಗಳ ಸಮರ್ಥ ಬಳಕೆಗೆ ಅತ್ಯುತ್ತಮ ಉದಾಹರಣೆ. ಭಾರತದ ಈ ಸಾಂಪ್ರದಾಯಿಕ ಜ್ಞಾನವನ್ನು ಇಡೀ ಜಗತ್ತು ಇಂದು ಸುಸ್ಥಿರ ಭವಿಷ್ಯಕ್ಕಾಗಿ ಎದುರು ನೋಡುತ್ತಿದೆ. ನಾವು ಭಾರತೀಯರು ಸಹ ಈ ನಿಟ್ಟಿನಲ್ಲಿ ಮತ್ತಷ್ಟು ಗಮನ ನೀಡಬೇಕಿದೆ ಎಂದು ನರೇಂದ್ರ ಮೋದಿಯವರು ತಿಳಿಸಿದ್ದಾರೆ.
ಶಿವಮೊಗ್ಗದ ವಿನೋಬನಗರ ವಾಸಿ ಸುರೇಶ್, `ಭಟ್ ಮತ್ತು ಮೈಥಿಲಿ, ದಂಪತಿ ಉದ್ಯಮ ಸ್ಥಾಪಿಸಿ, ಆ ಮೂಲಕ ಪರಿಸರ ಸ್ನೇಹಿ ಅಡಕೆ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಅಡಕೆ ಹಾಳೆಯಿಂದ ತಟ್ಟೆ, ಟ್ರೇ, ‘ಚಪ್ಪಲಿ, ಪೆನ್‌ಸ್ಟ್ಯಾಂಡ್, ಡೈರಿ ಮೊದಲಾದ ಆಕರ್ಷಕ ಉತ್ಪನ್ನಗಳನ್ನು ತಯಾ ರಿಸಿ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೆಸರು ಮಾಡಿದ್ದಾರೆ. ಉತ್ತಮ ಗುಣಮಟ್ಟದ ವಸ್ತುಗಳ ತಯಾರಿಕೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.
ಸುರೇಶ್ ಮತ್ತು ಮೈಥಿಲಿ ದಂಪತಿ ಅಡಕ ಹಾಳೆ ಉತ್ಪನ್ನಗಳ ರಫ್ತುದಾರರು ಮತ್ತು ಪೂರೈಕೆದಾರರಲ್ಲಿ ಒಬ್ಬರಾಗಿದ್ದಾರೆ. ಪ್ರಾಣಿಗಳ ಚರ್ಮ, ಪ್ಲಾಸ್ಟಿಕ್ ಮತ್ತು ರಬ್ಬರ್‌ಗೆ ಪರ್ಯಾ ಯವಾಗಿ, ಕಡಿಮೆ ಬೆಲೆಗೆ ಸಸ್ಯಾಧಾರಿತ ಉತ್ಪನ್ನ ಗಳನ್ನು ತಯಾರಿಸುತ್ತಾರೆ.
ನೈಸರ್ಗಿಕವಾಗಿ ಅಡಕೆ ಹಾಳೆಯಿಂದ ತಯಾರು ಮಾಡುವ ಪಾದರಕ್ಷೆಗಳಿಗೆ ಸುರೇಶ್ ಭಟ್ ದಂಪತಿ ಹೆಸರುವಾಸಿ.