ಕೊಪ್ಪ ತಾಲ್ಲೂಕಿನ ಹಾಡುಗಾರು ಗ್ರಾಮವು ಮೂಲಭೂತ ಸೌಲಭ್ಯದ ಹಕ್ಕನ್ನು ಹೋರಾಟದ ಮುಖಾಂತರ ಪಡೆಯಬೇಕೇ ಹೊರತು ಚುನಾವಣೆ ಬಹಿಷ್ಕರಿಸಿ ಸಂವಿಧಾನವನ್ನು ಉಲ್ಲಂಘಿಸಬಾರದು ಎಂದು ಜಿಲ್ಲಾ ಆಮ್‌ಆದ್ಮಿ ಅಧ್ಯಕ್ಷ ಕೆ.ಸುಂದರಗೌಡ ಹೇಳಿದ್ದಾರೆ.
ಈ ಸಂಬಂಧ ಹೇಳಿಕೆಯಲ್ಲಿ ತಿಳಿಸಿರುವ ಅವರು ಎಲ್ಲಾ ಪಕ್ಷಗಳ ಮುಖಂಡರುಗಳು ರಾಜೀನಾಮೆ ನೀಡಿ ಚುನಾವಣೆಯನ್ನು ಬಹಿಷ್ಕರಿಸಿರುವುದು ಸಂವಿಧಾನ ಬಾಹಿರವಾಗಿದ್ದು ಸೌಲಭ್ಯ ಪಡೆಯಲು ಪ್ರತಿಭಟನೆ ಮತ್ತು ಹೋರಾಟಗಳ ಮೂಲಕ ಮುಂದಾಗಬೇಕೆ ಹೊರತು ಚುನಾವಣೆ ಬಹಿಷ್ಕರಿಸಿ ಅಸಹಾಯಕತೆ ತೋರಿದಲ್ಲಿ ಗ್ರಾಮದಲ್ಲಿ ಅಭಿವೃದ್ದಿ ಕಾಣಲು ಸಾಧ್ಯವಿಲ್ಲ ಎಂದಿದ್ದಾರೆ.
ಹಾಡುಗಾರು ಗ್ರಾಮದಲ್ಲಿ ರಸ್ತೆ, ಸೇತುವೆ, ಬಿಪಿಎಲ್‌ಕಾರ್ಡ್, ಸಾಗುವಳಿ ಚೀಟಿ ಹಾಗೂ ಮನೆ ಇಲ್ಲದವರಿಗೆ ಮನೆ ನಿರ್ಮಾಣ ಸೇರಿದಂತೆ ಮೂಲಸೌಕರ್ಯವನ್ನು ಲಭಿಸುವವರೆಗೂ ಚುನಾವಣೆಯನ್ನು ಬಹಿಷ್ಕರಿಸಿ ಪ್ರತಿಜ್ಞೆ ಮಾಡಿರುವುದು ಸೂಕ್ತವಲ್ಲ. ಸೌಲಭ್ಯವನ್ನು ಪಡೆಯಲು ಹೋರಾಟಗಳ ಮೂಲಕ ಒತ್ತಾಯಿಸಲು ಎಎಪಿಯೊಂದಿಗೆ ಕೈಜೋಡಿಸಬೇಕು ಎಂದು ತಿಳಿಸಿದ್ದಾರೆ.
ಗ್ರಾಮದಲ್ಲಿ ರಾಜಕೀಯ ನಾಯಕರನ್ನು ನಿಷೇಧಿಸಿರುವುದು ಸಂವಿಧಾನ ವಿರುದ್ಧ ಹಾಗೂ ಪ್ರಜಾ ಪ್ರಭುತ್ವಕ್ಕೆ ಮಾರಕ. ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ನೇತೃತ್ವದಲ್ಲಿ ಮೂಲಭೂತ ಸಮಸ್ಯೆಗಳ ಹೋರಾಡಬೇಕು. ಚುನಾವಣೆ ಬಹಿಷ್ಕರಿಸಿ ಹೋರಾಟ ಮುಂದುವರೆಸಿದ್ದಲ್ಲಿ ಸಮಸ್ಯೆ ಬಗೆಹರಿಯದು ಆ ನಿಟ್ಟಿನಲ್ಲಿ ಗ್ರಾಮಸ್ಥರ ಸೌಲಭ್ಯಗಳನ್ನು ಕೊಡಿಸಲು ಎಎಪಿ ಸಂಪೂರ್ಣವಾಗಿ ಬೆಂಬಲ ಸೂಚಿಸಲಿದೆ ಎಂದು ತಿಳಿದುಬಂದಿದೆ.