Thursday, March 13, 2025
Thursday, March 13, 2025

ದಿಟ್ಟ ಆಟ, ಆಸಿಸ್ ಗೆ ಟಿ-20 ಕೀರಿಟ

Date:

ಟಿ – 20 ವಿಶ್ವಕಪ್ ಟೂರ್ನಿಯ ಅಂತಿಮ ಪಂದ್ಯ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನಡೆಯಿತು.ಈ ಫೈನಲ್ ಪಂದ್ಯಾವಳಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾ ಗೆಲುವು ಸಾಧಿಸಿದೆ.
ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್ ತಂಡವು 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು.
ಮಾರ್ಟಿನ್ ಗುಪ್ಟಿಲ್ ಮತ್ತು ಡೆವಿಲ್ ಪಿಚ್ಚರ್ ಉತ್ತಮ ಆರಂಭ ನೀಡುವ ಪ್ರಯತ್ನ ಮಾಡಿದರು. ಗ್ಲೇನ್ ಮ್ಯಾಕ್ಸ್ ವೆಲ್ ಹಾಕಿದ 3 ನೇ ಓವರ್ ನಲ್ಲಿ ಗುಪ್ಟಿಲ್ ಹೊಡೆದ ಚೆಂಡನ್ನು ಕ್ಯಾಚ್ ಹಿಡಿಯುವ ಮ್ಯಾಥ್ಯೂ ವೇಡ್ ಪ್ರಯತ್ನ ಫಲಿಸಲಿಲ್ಲ. ಆದರೆ ನಂತರದ ಓವರ್ ನಲ್ಲಿ ಜೋಶ್ ಹ್ಯಾಜಲ್ ವುಡ್, ಡೆರಿಲ್ ಮಿಚೆಲ್ 11 ರನ್ ಗಳಿಸಿದ್ದಾಗ ಅವರ ವಿಕೆಟ್ ಕಬಳಿಸುವಲ್ಲಿ ಸಫಲರಾದರು. ಸೆಮಿಫೈನಲ್ನಲ್ಲಿ ಕೀವಿಸ್ ಗೆಲುವಿಗೆ ಮಿಚೆಲ್ ಆಟವೇ ಕಾರಣವಾಗಿತ್ತು.
ಈ ಸಂದರ್ಭದಲ್ಲಿ ಗುಪ್ಟಿಲ್ ಜೊತೆಗೂಡಿದ ಕೇನ್ ತಮ್ಮ ಅನುಭವ ತಾಳ್ಮೆ ಮತ್ತು ಕೌಶಲಗಳನ್ನು ಸಮ್ಮಿಶ್ರ ಮಾಡಿದ ಅಂದ-ಚಂದದ ಬ್ಯಾಟಿಂಗ್ ಮಾಡಿದರು. ಅವರ ಆಟಕ್ಕೆ ಹೆಚ್ಚು ಆದ್ಯತೆ ಕೊಟ್ಟ ಗುಪ್ಟಿಲ್ ತಮ್ಮ ಆಟದ ವೇಗಕ್ಕೆ ಕಡಿವಾಣ ಹಾಕಿದರು 2 ನೇ ವಿಕೆಟ್ ಜೊತೆಯಾಟದಲ್ಲಿ 48 ರನ್ ಸೇರಿಸಿದರು. ಇವರಿಬ್ಬರ ತಾಳ್ಮೆ ಆಟದಿಂದಾಗಿ 11 ಓವರ್ ಗಳಲ್ಲಿ ಒಟ್ಟು 76 ರನ್ ಗಳು ಮಾತ್ರ ಸೇರಿದ್ದವು.ಆದರೆ ವಿಕೆಟ್ ಗಳನ್ನ ಕಾಪಾಡಿಕೊಂಡಿದ್ದರು. 11 ನೇ ಓವರ್ ನಲ್ಲಿ ಮಿಚೆಲ್ ಸ್ಟಾರ್ಕ್ ಬೌಲಿಂಗ್ ನಲ್ಲಿ ಕೇನ್ ವಿಲಿಯಮ್ಸನ್ ಗೆ ಫೀಲ್ಡರ್ ಜೋಶ್ ಜೀವದಾನ ಕೊಟ್ಟರು. ನಂತರದ ಓವರ್ ನಲ್ಲಿ ಗುಪ್ಟಿಲ್ ವಿಕೆಟ್ ಪಡೆದ ಆಡಂ ಜಂಪಾ ಸಂಭ್ರಮಿಸಿದರು. ಆದರೆ ವಿಲಿಯಮ್ಸನ್ ಅವರನ್ನು ನಿಯಂತ್ರಿಸುವುದು ಬೌಲರ್ಗಳಿಗೆ ಸಾಧ್ಯವಾಗಲಿಲ್ಲ. ಗ್ಲೇನ್ ಫಿಲಿಪ್ಸ್ 18 ರನ್ ಗಳಿಸಿಕೊಂಡು ಔಟಾದರು. ಶತಕದತ್ತ ಕಾಲಿಟ್ಟು ಹೋರಾಡಿದ ಕೇನ್ 48 ಎಸೆತಗಳಲ್ಲಿ 85 ರನ್ ಗಳಿಸಿದರು. ಇನ್ನು ಹೆಚ್ಚು ರನ್ ಗಳಿಕೆಯ ವೇಗ ಹೆಚ್ಚಿಸುವ ಭರದಲ್ಲಿ ಔಟಾದರು. ಜಿಮ್ಮಿ ನಿಶಾಮ್ ಔಟಾಗದೆ 13 ರನ್ ಗಳಿಸಿಕೊಂಡರು ಮತ್ತು ಸೀಫರ್ಟ್ ಔಟಾಗದೆ 8 ಗಳಿಸಿಕೊಂಡು ತಂಡದ ಮೊತ್ತ ಬೆಳೆಸಲು ತಮ್ಮ ಕಾಣಿಕೆ ನೀಡಿದರು.
173 ರನ್ ಗಳ ಗೆಲುವಿನ ಗುರಿಯನ್ನಿಟ್ಟುಕೊಂಡು ಬೆನ್ನತ್ತಿ ಆಡಿದ ಆಸ್ಟ್ರೇಲಿಯಾ ಉತ್ತಮ ಆರಂಭ ಮಾಡಿತು.ಕೇವಲ 18.5 ಓವರ್ ಗಳಲ್ಲಿಯೇ 2 ವಿಕೆಟ್ ಕಳೆದುಕೊಂಡು 173 ರನ್ ಗಳಿಸಿ ಗೆಲುವು ಸಾಧಿಸಿತು.
ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಮತ್ತು ಗ್ಲೇನ್ ಮ್ಯಾಕ್ಸ್ ವೆಲ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಯಾರನ್ ಫಿಂಚ್ ಬಳಗ 8 ವಿಕೆಟ್ ಗಳ ಜಯ ಸಾಧಿಸಿತು. ಈ ಮೂಲಕ ಟಿ – 20 ವಿಶ್ವಕಪ್ ಮೊದಲಿಗೆ ಪ್ರಶಸ್ತಿಯನ್ನು ಗೆದ್ದು ಬೀಗಿತು. ಏಕದಿನ ವಿಶ್ವಕಪ್ ನಲ್ಲಿ ತಂಡ 5 ಬಾರಿ ಚಾಂಪಿಯನ್ ಆಗಿದೆ.
ಟಿ – 20 ವಿಶ್ವಕಪ್ ನಲ್ಲಿ ಮೊದಲ ಪ್ರಶಸ್ತಿ ಗೆಲ್ಲುವ ನ್ಯೂಜಿಲೆಂಡ್ ಕನಸು ಇದರೊಂದಿಗೆ ನುಚ್ಚಿನೂರಾಯಿತು. ಆಸ್ಟ್ರೇಲಿಯಾ ತಂಡದ ಬೌಲರ್ ಗಳು ನ್ಯೂಜಿಲೆಂಡ್ ತಂಡದ ರನ್ ವೇಗಕ್ಕೆ ಕಡಿವಾಣ ಹಾಕಿದರು.
ಟಿ – 20 ವಿಶ್ವಕಪ್ ಚೊಚ್ಚಲವಾಗಿ ಮುಡಿಗೇರಿಸಿದ ಆಸ್ಟ್ರೇಲಿಯ ಭರವಸೆ ಆಟವಾಡಿ ಇಡೀ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

State Film Awards 2020 ನೇ ಸಾಲಿನ ಚಲನಚಿತ್ರ ಪ್ರಶಸ್ತಿ ಘೋಷಣೆ

State Film Awards 2020ನೇ ಸಾಲಿನ ಆಯ್ಕೆ ಸಮಿತಿಯು ಸಲ್ಲಿಸಿರುವ ವರದಿಯಲ್ಲಿ...

Klive Special ಹೆತ್ತವಳಿಗೊಂದು ಕವನ-ನಮನ

Klive Special ದೇವರ ಸ್ವರೂಪ ಗರ್ಭದಲ್ಲಿ ಹೊತ್ತುನವಮಾಸಕ್ಕೆ ಹೆತ್ತುಮೌಲ್ಯಗಳನ್ನೇ ಬಿತ್ತುಸಲಹಿದೆ ನೀಡಿ ಕೈತುತ್ತು ಅಮ್ಮ...

Guarantee Scheme ಸತ್ಯ & ಶುದ್ಧ ಮಾರ್ಗದಿಂದ ರಾಷ್ಟ್ರ ಕಟ್ಟಲು ಸಾಧ್ಯ- ಸಿ.ಎಸ್.ಚಂದ್ರಭೂಪಾಲ್

Guarantee Scheme ಅಂತರಂಗ ಮತ್ತು ಬಹಿರಂಗ ಶುದ್ದಿಯಿಂದ ಹಾಗೂ ಸತ್ಯದ ಮಾರ್ಗದಲ್ಲಿ...