Thursday, September 17, 2026
Thursday, September 17, 2026

ಗಾಡಿಕೊಪ್ಪ ಕೆರೆ ಅಭಿವೃದ್ಧಿ ಮಾಡಲು ಭೂಮಿ ಸಂಸ್ಥೆ ಸಿದ್ಧ

Date:

ಶಿವಮೊಗ್ಗ ತಾಲೂಕು ಕಸಬಾ ಹೋಬಳಿ ಗಾಡಿಕೊಪ್ಪ ಗ್ರಾಮದ ಸರ್ವೆ ನಂಬರ್ 15ರಲ್ಲಿ ಬರುವ ಕೆರೆಯನ್ನು ಸರ್ವೇ ಮಾಡಿ ಕೆರೆ ಅಭಿವೃದ್ಧಿ ಪಡಿಸಲು ಭೂಮಿ ಸಂಸ್ಥೆಗೆ ವಹಿಸಿಕೊಡುವಂತೆ, ಈ ಕೆರೆಯ ಅಭಿವೃದ್ಧಿ ಪಡಿಸಲು ಭೂಮಿ ಸಂಸ್ಥೆಗೆ ಅನುಮತಿ ನೀಡಿದಲ್ಲಿ, ಭೂಮಿ ಸಂಸ್ಥೆಯ ಜೊತೆಗೆ ಹಲವಾರು ಸಂಘ ಸಂಸ್ಥೆಗಳು ಕೈಜೋಡಿಸಿವೆ, ಸದರಿ ಕೆರೆ ಅಭಿವೃದ್ಧಿ ಪಡಿಸಿದಲ್ಲಿ ಈ ಭಾಗದ ಸಾರ್ವಜನಿಕರಿಗೆ, ಜಾನುವಾರುಗಳಿಗೆ ಬೇಸಿಗೆ ಸಂದರ್ಭದಲ್ಲೂ ನೀರು ಒದಗಿಸಬಹುದಾಗಿದೆ. ಸಂಘ-ಸಂಸ್ಥೆಗಳು, ಸಾರ್ವಜನಿಕರ ಸಹಕಾರದಿಂದ ಈ ಕೆರೆಯ ಹೂಳು ತೆಗೆಸುವುದರಿಂದ ಅಂತರ್ಜಲ ವೃದ್ಧಿಯಾಗಲಿದೆ. ಹಾಗೆಯೇ ಕೆರೆ ಏರಿಯನ್ನು ಅಭಿವೃದ್ಧಿ ಪಡಿಸಿದಲ್ಲಿ ಸಾರ್ವಜನಿಕರು ವಾಯು ವಿಹಾರ ನಡೆಸಲು ಅನುಕೂಲವಾಗಲಿದೆ. ಕೆರೆ ಏರಿ ಸುತ್ತ ಗಿಡಗಳನ್ನು ನೆಟ್ಟು ಪೋಷಿಸುವುದರಿಂದ ಮಣ್ಣು ಸವಕಳಿ ತಪ್ಪಿಸಬಹುದು. ಸೂಕ್ತ ನಿರ್ವಹಣೆ ಇಲ್ಲದೇ ಹಾಳಾಗುತ್ತಿರುವ ಕೆರೆಯನ್ನು
ಸಂರಕ್ಷಿಸಲು ಭೂಮಿ ಸಂಸ್ಥೆ ಮುಂದಾಗಿದ್ದು, ಜಿಲ್ಲಾಡಳಿತ ಭೂಮಿ ಸಂಸ್ಥೆಗೆ ಕೆರೆ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಡಬೇಕಾಗಿ ಮನವಿ ಮಾಡಿದ್ದಾರೆ .

ಈ ಸಂದರ್ಭದಲ್ಲಿ ಭೂಮಿ ಸಂಸ್ಥೆ ಯ ಪ್ರಧಾನ ಕಾರ್ಯದರ್ಶಿ ನವೀನ್ ತಲಾರಿ, ಕಾಮಧೇನು ಗೋ ಶಾಲೆಯ ಅರ್ ತೇಜೇಶ್, ಜೈ ಸಂಸ್ಥೆ ಅಧ್ಯಕ್ಷ ಯತೀಶ್, ಪುಟ್ಟಪ್ಪ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಶಿವಕುಮಾರ್ ಕೆ ಪಿ, ಭೂಮಿ ಸಂಸ್ಥೆಯ ಸದಸ್ಯರು, ಪರಿಸರ ಪ್ರೇಮಿಗಳು ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...