Thursday, September 17, 2026
Thursday, September 17, 2026

ಮಡಿವಾಳ ಸಮಾಜ ಸಂಘದ ಪದಾಧಿಕಾರಿಗಳ ಆಯ್ಕೆ ಬೈಲಾ ವಿರುದ್ಧ – ನಾಗರಾಜ್

Date:

ಡಿ.11 ರಂದು ನಡೆದ ಜಿಲ್ಲಾ ಮಡಿವಾಳ ಸಮಾಜ ಸಂಘದ ಪದಾಧಿಕಾರಿಗಳ ಆಯ್ಕೆ ಆಗಿರುವುದು ಬೈಲಾಕ್ಕೆ ವಿರುದ್ಧವಾಗಿದೆ ಎಂದು ಮಡಿವಾಳ ಸಂಘದ ನಿರ್ದೇಶಕ ನಾಗರಾಜ್ ಎಂ ಆಗ್ರಹಿಸಿದ್ದಾರೆ.

ಈ ಕುರಿತು ಶಿವಮೊಗ್ಗದ ಮಿಡಿಯಾ ಹೌಸ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು, ಸಿ.ಹನುಮಂತಪ್ಪ, ಪಿ.ಮಧು, ಕೊಟ್ಟಪ್ಪ ಎಂಬುವರು ಅನುಕ್ರಮವಾಗಿ ಉಪಾಧ್ಯಕ್ಷರಾಗಿದ್ದಾರೆ. ಸಹಕಾರ್ಯದರ್ಶಿ ಮತ್ತು ಸಂಚಾಲಕರಾಗಿದ್ದಾರೆ. ಇವರ ಹೆಸರು ಚುನಾವಣೆಯಲ್ಲಿ ಚುನಾಯಿತರಾದ ಪಟ್ಟಿಯಲ್ಲಿ ಇಲ್ಲ.ಮತ್ತು ಮಾನ್ಯತೆ ಪಡೆದ ಸಂಘಗಳ ಪಟ್ಟಿಯಲ್ಲಿ ಇಲ್ಲದವರನ್ನ ದಿಡೀರ್ ಅಂತ ಪದಾಧಿಕಾರಿಯನ್ನಾಗಿ ಮಾಡಲಾಗಿದೆ ಎಂದರು.

ಸಂಘದ ಅಂಗರಚನೆಯ ನಿಯಮ ನಿಬಂಧನೆಯ ಭಾಗ-3 ರಲ್ಲಿ 16 ರ ಪ್ರಕಾರ ತಾಲೂಕು ಸಂಘಗಳು ಜಿಲ್ಲಾ ಸಂಘದ ಮಾನ್ಯತೆ ಪಡೆದಿಲ್ಲ. ಆದ್ದರಿಂದ ಮಾನ್ಯತೆ ಹೊಂದದೆ ಇರುವ ಸಂಘಗಳ ಪ್ರತಿನಿಧಿಗಳು ಪದಾಧಿಕಾರಿಯಾಗಲು ಸಂಘದ ಕಾನೂನಿನಲ್ಲಿ ಅವಕಾಶ ಖಂಡಿತವಿಲ್ಲವೆಂದು ತಿಳಿಸಿದರು.

ಸಂಘದ ಕಾರ್ಯಕಾರಿ ಸಮಿತಿಯ ಆಯ್ಕೆಗೆ ನಡೆದ ಚುನಾವಣೆಗೆ ನಿಗದಿಯಾಗುವ ದಿನಾಂಕದ ಪೂರ್ವದ 15ದಿನಗಳ ಮುಂಚೆ ನಿಗಧಿತ ಶುಲ್ಕ ಪಾವತಿ ಮಾಡಿ ನವೀಕರಿಸಿದ ಮಾನ್ಯತೆ ಪಡೆದ ಸಂಘಗಳ ಪಟ್ಟಿಯನ್ನ ಪ್ರಕಟಿಸಿಲ್ಲ.ಮಾನ್ಯತೆ ಪಡೆದ ಸಂಘಗಳ ಪ್ರತಿನಿಧಿಗಳು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ ಎಂದು ಸಂಘದ ಚುನಾವಣಾಧಿಕಾರಿ ಅಧಿಕೃತವಾಗಿ ಘೋಷಣೆ ಮಾಡಿ ಪ್ರಕಟಿಸಿಲ್ಲ. ಆದ್ದರಿಂದ ಇವರ ನೇಮಕ ರದ್ದುಪಡಿಸಬೇಕು. ಈಗಾಗಲೇ ಸಹಕಾರ ಉಪನಿಬಂಧಕರ ಗಮನಕ್ಕೆ ತರಲಾಗಿದೆ. ಒಂದು ವೇಳೆ ಸರಿಹೋಗದಿದ್ದರೆ ಪ್ರಕರಣ ದಾಖಲಿಸಲಾಗುವುದು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಡಿವಾಳ ಸಮಾಜದ ಮುಖಂಡರಾದ ಹಿರಣ್ಣಯ್ಯ ,ಟಿ.ಎಸ್. ಗುರುಮೂರ್ತಿ , ಪ್ರಮೋದ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...