ಶ್ರೀ ರೋಜಾ ಷಣ್ಮುಗಂ ಗುರೂಜಿಯವರ ಹುಟ್ಟು ಹಬ್ಬದ ಪ್ರಯುಕ್ತ ಶಿವಮೊಗ್ಗದಲ್ಲಿ ನಡೆದ ಅಯ್ಯಪ್ಪೋತ್ಸವದಲ್ಲಿ ಸಾವಿರಾರು ಭಕ್ತರು ಅಯ್ಯಪ್ಪ ವ್ರತ ಧಾರಿಗಳು, ಹಿರಿಯರು ಮಾತೆಯರು ಸಡಗರ ಸಂಭ್ರಮದಿಂದ ಪಾಲ್ಗೊಂಡಿದ್ದರು.
ಕುವೆಂಪು ರಂಗಮಂದಿರದಲ್ಲಿ ಶ್ರೀ ರೋಜಾ ಗುರೂಜಿ ಶಿಷ್ಯ ವೃಂದವು ಆಯೋಜಿಸಿದ್ದ ಈ ಕಾರ್ಯಕ್ರಮದ ನಿಮಿತ್ತ ನಗರದ ಕಾಮಾಕ್ಷಿ ಬೀದಿಯ ಗಣಪತಿ ದೇವಸ್ಥಾನದಿಂದ ಕಳಶ ಹೊತ್ತ ಮಹಿಳೆಯರ ಜೊತೆ ವಿಶೇಷ ಅಯ್ಯಪ್ಪ ವಿಗ್ರಹವನ್ನು ರಾಜ ಬೀದಿ ಉತ್ಸವದಿಂದ ಮಣಿಕಂಠನ ವೇಷದಲ್ಲಿದ್ದ ಅಯ್ಯಪ್ಪನ ಜೊತೆ ಕುವೆಂಪು ರಂಗಮಂದಿರಕ್ಕೆ ಕರೆತರಲಾಯಿತು.
ಶ್ರೀ ರೋಜಾ ಗುರೂಜಿಯ ಆಪ್ತರಾದ ಯುವರಾಜ್ ಅಯ್ಯಪ್ಪನ ಕುರಿತು ಗುರೂಜಿಯ ಹಾಡನ್ನು ಹಾಡಿದರು. ವಿಶೇಷವಾಗಿ 70ಕ್ಕು ಹೆಚ್ಚು ಪುಟಾಣಿಗಳು ಒಗ್ಗೂಡಿ ಶ್ಲೋಕ ಪಠಣೆಯಿಂದ ಕಾರ್ಯಕ್ರಮ ಆರಂಭವಾಯಿತು.
ಶಬರಿಮಲೆಯ ಮಾಲಿಕಾಪುರಂ ಮೇಲ್ ಶಾಂತಿ ಬ್ರಹ್ಮಶ್ರೀ. K ಶಂಭು ನಂಬೂದರಿ ಯವರು ಅಯ್ಯಪ್ಪನ ಪೂಜೆ ಮಾಡಿ ಎಲ್ಲಾ ಭಕ್ತ ವೃಂದದವರಿಗೆ ಆಶೀರ್ವಚನ ನೀಡಿದರು. ಮಾಲಿಕಾಪುರಂ ಮೇಲ್ ಶಾಂತಿ ಅವರು ಶ್ರೀ ಶಬರೀಶ್ ರೋಜಾ ಷಣ್ಮುಗಂ ಗುರುಸ್ವಾಮಿ ಅವರಿಗೆ ಸನ್ಮಾನಿಸಿದರು.
ಶಬರಿಮಲೆಯಿಂದ ತಂದ ವಿಶೇಷ ಪ್ರಸಾದವನ್ನು ಎಲ್ಲರಿಗೂ ವಿತರಿಸಲಾಯಿತು. ಭೋಜನ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು.
ವಿಶೇಷವಾಗಿ ಮಾತೆಯರಿಗೆ ಅಯ್ಯಪ್ಪನ ದರ್ಶನ ಮಾಡುವ ಸೌಭಾಗ್ಯವನ್ನು ಶ್ರೀ ಶಬರೀಶ್ ಷಣ್ಮುಗಂ ಗುರುಸ್ವಾಮಿಯವರು ಶಿವಮೊಗ್ಗ ಭಕ್ತರಿಗೆ ಒದಗಿಸಿದರು.
ಈ ಕಾರ್ಯಕ್ರಮದಲ್ಲಿ ನಗರದ ಪ್ರಥಮ ಪ್ರಜೆ ಪಾಲಿಕೆಯ ಮೇಯರ್ ಶಿವಕುಮಾರ್, ಮಾಜಿ ಸೂಡಾ ಅಧಕ್ಷರಾದ ರಮೇಶ್, ಸಾರ್ವಜನಿಕ ಶ್ರೀ ಅಯ್ಯಪ್ಪ ದೇವಸ್ಥಾನದ ಸಮಿತಿಯ ಮುರಳಿ, ಕೇಶವ್, ಸತ್ಯನಾರಾಯಣ್, ಮಂಜುನಾಥ್, ಶಂಕರ್, ಪ್ರತ್ಯಂಗಿರಾ ದೇವಿ ಉಪಾಸಕರಾದ ಶ್ರೀ ಸುಪ್ರೀತ್ ಗುರೂಜಿ, ಪಲ್ಲವಿ ಹಾಗೂ ಕರ್ನಾಟಕ ರಾಜ್ಯದ ವಿವಿಧ ಗುರುಸ್ವಾಮಿಗಳು ಹಾಗೂ ಅಪಾರ ಶಿಷ್ಯ ವೃಂದ ಉಪಸ್ಥಿತರಿದ್ದರು.