Friday, May 15, 2026
Friday, May 15, 2026

ರಸ್ತೆಗೆ ಡಾ.ಪುನೀತ್ ರಾಜಕುಮಾರ್ ಹೆಸರನ್ನ ಅಧಿಕೃತ ನಾಮಕರಣಮಾಡಲು ಮನವಿ

Date:

ಶಿವಮೊಗ್ಗ, ಹೊಸಮನೆ 1 ನೇ ಮುಖ್ಯ ರಸ್ತೆಗೆ ಕರ್ನಾಟಕ ರತ್ನ ದಿವಂಗತ ಡಾ|| ಪುನೀತ್ ರಾಜ್ ಕುಮಾರ್ ರಸ್ತೆ ಎಂದು ನಾಮಕರಣ ಮಾಡಲು ಕೋರಿ ಮಹಾಪೌರರಿಗೆ ಮನವಿ ನೀಡಲಾಯಿತು.

ನಾಡುಕಂಡ ಹೆಸರಾಂತ ನಟ, ಮಾನವೀಯ ಮೌಲ್ಯಗಳನ್ನು ನಾಡಿಗೆ ಸಾರಿದ ಮಹಾನ್ ನಟ, ಮೇರು ವ್ಯಕ್ತಿತ್ವದ ಕರ್ನಾಟಕ ರತ್ನ ದಿವಂಗತ ಡಾ. ಪುನೀತ್ ರಾಜ್ ಕುಮಾರ್ ರವರ ಹೆಸರನ್ನು ನಗರದ 20 ನೇ ವಾರ್ಡ್ ಹೊಸಮನೆ ಬಡಾವಣೆ, 1 ನೇ ಮುಖ್ಯ ರಸ್ತೆಗೆ ದಿವಂಗತ ಡಾ. ಪುನೀತ್ ರಾಜ್ ಕುಮಾರ್ ರಸ್ತೆ ಎಂದು ನಾಮಕರಣ ಮಾಡಬೇಕೆಂದು ಅವರ ಅಭಿಮಾನಿಗಳು ಹಾಗೂ ಬಡಾವಣೆ ನಾಗರೀಕರು ಒಕ್ಕೊರಲಿನಿಂದ ಪಾಲಿಕೆ ಸದಸ್ಯರಾದ ಶ್ರೀಮತಿ ರೇಖಾ ರಂಗನಾಥ್ ರವರೊಂದಿಗೆ ಸಭೆ ಸೇರಿ ತೀರ್ಮಾನಿಸಿದ್ದು.

ತಾವುಗಳು ಸಹ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಅನುಮೋದಿಸಿ ಡಾ.ಪುನೀತ್ ರಾಜ್ ಕುಮಾರ್ ರಸ್ತೆ ಎಂದು ನಾಮಕರಣ ಮಾಡಲು ಒಪ್ಪಿಗೆ ನೀಡಬೇಕೆಂದು ತಮ್ಮಲ್ಲಿ ವಿನಯ ಪೂರ್ವಕವಾಗಿ ಕೋರಿಕೊಂಡಿದ್ದು.

ಈ ಸಂದರ್ಭದಲ್ಲಿ  ಹೊಸಮನೆ ಬಡಾವಣೆ ಪಾಲಿಕೆ ಸದಸ್ಯೆ ಹಾಗೂ ವಿರೋಧ ಪಕ್ಷದ ನಾಯಕಿ ಶ್ರೀಮತಿ ರೇಖಾ ರಂಗನಾಥ್, ಹೊಸಮನೆ ನಾಗರೀಕ ಸಮಿತಿ ಅಧ್ಯಕ್ಷರಾದ ಆರ್. ನಾಗರಾಜ್, ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಪದಾದಿಕಾರಿಗಳಾದ ಸುರೇಶ್, ಮಾರುತಿಭಗತ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Club Shivamogga ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರುಣಿಸುವುದು ಮನುಷ್ಯರ ಜವಾಬ್ದಾರಿ- ಬಿ.ಜಿ.ಶಿವಮೂರ್ತಿ

Rotary Club Shivamogga ಬೇಸಿಗೆ ಕಾಲದಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರನ್ನು ಒದಗಿಸುವುದು...

Bhadra dam ಮೇ17 ರ ಮಧ್ಯರಾತ್ರಿಯಿಂದ ಭದ್ರಾ ಬಲ ಮತ್ತು ಎಡದಂಡೆ ಕಾಲುವೆಗಳ ಮೂಲಕ ಹರಿಯುತ್ತಿರುವ ನೀರು ಬಂದ್

Bhadra dam ಭದ್ರಾ ಜಲಾಶಯದಿಂದ ಬೇಸಿಗೆ ಹಂಗಾಮಿನ ಬೆಳೆಗಳಿಗೆ ಬಲದಂಡ...

Royal Diamond English Medium School ಮನೆಯೇ ಮೊದಲ ಪಾಠಶಾಲೆ.ತಾಯಿಯೇ ಮೊದಲ ಗುರು- ವೀಣಾ ನಾಯಕ್

Royal Diamond English Medium School ಸಿರಿಗನ್ನಡ ವೇದಿಕೆ, ಮಹಿಳಾ...

Priyanka Kharge ಗ್ರಾಮ ಪಂಚಾಯತ್ ಗಳು ರಾಷ್ಡ್ರಮಟ್ಟದಲ್ಲಿ ಗಮನ ಸೆಳೆದು ಪ್ರಶಸ್ತಿಗೆ ಭಾಜನ: ಸಶಕ್ತೀಕರಣಕ್ಕೆ ಹಿಡಿದ ಕನ್ನಡಿ- ಸಚಿವ ಪ್ರಿಯಾಂಕ ಖರ್ಗೆ

Priyanka Kharge ಕೇಂದ್ರ ಸರ್ಕಾರದಿಂದ ಕೊಡಮಾಡುವ ರಾಷ್ಟ್ರೀಯ ಪಂಚಾಯತ್ ಪುರಸ್ಕಾರಕ್ಕೆ ಕರ್ನಾಟಕದ...