ಭ್ರಷ್ಟಾಚಾರ ಎಂಬುದು ಸಮಾಜದ ಅನಿಷ್ಟ ಪದ್ದತಿಗಳಲ್ಲಿ ಒಂದಾಗಿದೆ… ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರ ಎಂಬುವುದು ಸರ್ವೇಸಾಮಾನ್ಯ. ಎಲ್ಲಾ ಕ್ಷೇತ್ರಗಳಲ್ಲೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ…
ದಿನನಿತ್ಯ ನಾವು ಮಾಧ್ಯಮಗಳ ಮುಖಾಂತರ ಅನೇಕ ಬೆಳಕಿಗೆ ಬಂದ ಭ್ರಷ್ಟಾಚಾರದ ಪ್ರಕರಣಗಳನ್ನು ನೋಡುತ್ತೇವೆ… ಹೀಗೆ ಬೆಳಕಿಗೆ ಬರದ ಅದೆಷ್ಟೋ ಭ್ರಷ್ಟಾಚಾರದ ಪ್ರಕರಣಗಳು ಮರೆಮಾಚುವೆ…
ಭ್ರಷ್ಟಾಚಾರದಿಂದ ದೇಶದ ಉನ್ನತಿಗೆ ಅಡ್ಡಿ ಉಂಟಾಗುತ್ತದೆ… ನೀವು ಯಾವುದೇ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಿ, ಅದರಲ್ಲಿ ಭ್ರಷ್ಟಾಚಾರ ಎಂಬ ಕೊಳಕು ಪದ್ಧತಿ ಇದ್ದೇ ಇರುತ್ತದೆ…
ಉದಾಹರಣೆಗೆ ಶಿಕ್ಷಣ, ರಾಜುಕೀಯ, ವೈದ್ಯಕೀಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ ನಾವು ಭ್ರಷ್ಟಾಚಾರ ಎಂಬ ಕೆಟ್ಟ ಹುಳುವನ್ನು ಕಾಣಬಹುದು…
ಭ್ರಷ್ಟಾಚಾರವು ಎಲ್ಲಾ ಸಮಾಜಗಳಲ್ಲಿಯೂ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಅಡ್ಡಿ ಉಂಟು ಮಾಡುತ್ತಿರುವ ಗಂಭೀರ ಅಪರಾಧವಾಗಿದೆ.
ಸಮಾಜದ ಕೆಟ್ಟ ಹುಳು ಎಂದು ಪ್ರತಿಬಿಂಬಿಸುವ ಭ್ರಷ್ಟಾಚಾರವನ್ನು ಬುಡ ಸಮೇತ ಕಿತ್ತು ಹಾಕಲು… ಮತ್ತು ಭ್ರಷ್ಟಾಚಾರದ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವಸಂಸ್ಥೆ 2003 ರ ಡಿಸೆಂಬರ್ 9 ಈ ದಿನದಂದು ಅಂತರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ ಎಂದು ಘೋಷಿಸಿತು.
ಇಷ್ಟಾದರೂ ಕೂಡ ಭ್ರಷ್ಟಾಚಾರ ಇನ್ನೂ ಕೊನೆಗಾಣದೇ ಇರುವುದು ವಿಷಾಧಕರ ಸಂಗತಿ…
- ರಚನಾ.ಕೆ. ಆರ್