Thursday, December 18, 2025
Thursday, December 18, 2025

ಹೋಮ್ ಗಾರ್ಡ್ಸ್ ವಿರುದ್ಧ ನೋಟೀಸ್ ನೀಡದೇ ಅಮಾನತು ಮಾಡಬಹುದು

Date:

ಗೃಹ ರಕ್ಷಕ ದಳದ ಸಿಬ್ಬಂದಿಯ ವಿರುದ್ಧ ಆರೋಪ ಕೇಳಿ ಬಂದಾಗ ಪೂರ್ವಭಾವಿ ನೋಟಿಸ್ ನೀಡದೆಯೂ ಅಮಾನತು ಆದೇಶ ಹೊರಡಿಸಬಹುದು ಎಂದು ಬೆಂಗಳೂರಿನ ಹೈಕೋರ್ಟ್ ಪೀಠ ತಿಳಿಸಿದೆ. ನಗರದ ಲಗ್ಗೆರೆಯ ಡಿ.ಇ ಕೆಂಪಾಮಣಿ ಎಂಬುವರನ್ನು ನೋಟಿಸ್ ನೀಡದೇ ಅಮಾನತುಗೊಳಿಸಿದ ಆದೇಶ ರದ್ದು ಕೋರಿ ಗೃಹರಕ್ಷಕ ದಳದ ಸಿಬ್ಬಂದಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಸ್.ಜಿ ಪಂಡಿತ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.

ಅಲ್ಲದೇ, ಗೃಹರಕ್ಷಕ ಸಿಬ್ಬಂದಿ ಶಿಸ್ತಿಗೆ ಹೆಸರಾದ ಪಡೆ, ಅಂತಹ ಪಡೆಯ ಸಿಬ್ಬಂದಿಯ ಅಶಿಸ್ತನ್ನು ಸಹಿಸಲಾಗದು. ಜತೆಗೆ ಅಮಾನತು ಎನ್ನುವುದು ಶಿಕ್ಷೆಯಲ್ಲ,

ತಾತ್ಕಾಲಿಕ ಕ್ರಮ, ತನಿಖೆ ಎದುರಿಸಬೇಕಾಗುತ್ತದೆ. ಹಾಗಾಗಿ ಡಿಜಿಪಿ ಹೊರಡಿಸಿರುವ ಅಮಾನತು ಆದೇಶ ಸಮಂಜಸವಾಗಿದೆ. ಅದರಲ್ಲಿ ಹಸ್ತಕ್ಷೇಪ ಮಾಡಲಾಗದು ಎಂದು ಪೀಠ ತಿಳಿಸಿದೆ. ಕರ್ನಾಟಕ ಗೃಹ ರಕ್ಷಕ ಸಿಬ್ಬಂದಿ ನಿಯಮ 1963ರ ಸೆಕ್ಷನ್ 14ಬಿ ಅಡಿ ಗೃಹರಕ್ಷಕ ದಳದ ಕಮಾಂಡೆಂಟ್ ಅಥವಾ ಕಮಾಂಡ್ ಜನರಲ್ ಗೆ ಹೋಮ್ ಗಾರ್ಡ್‌ಗಳನ್ನು ಅಮಾನತುಗೊಳಿಸುವ ಅಧಿಕಾರ ಇದೆ. ಹಾಗಾಗಿ ಅವರು ಆ ಅಧಿಕಾರ ಬಳಸಿಯೇ ಈ ಆದೇಶ ನೀಡಿದ್ದಾರೆ. ಅಮಾನತು ಆದೇಶಕ್ಕೂ ಮುನ್ನ ನೋಟಿಸ್ ನೀಡುವ ಅಗತ್ಯವಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ವಿವರಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ರೇಬೀಸ್ ಮಾರಣಾಂತಿಕ‌ ಕಾಯಿಲೆಯಾಗುವ ಸಾಧ್ಯತೆ ಇದೆ, ನಿರ್ಲಕ್ಷ್ಯ ಬೇಡ- ಡಾ.ಅರವಿಂದ್

Rotary Shivamogga ರೇಬೀಸ್ ಮಾರಣಾಂತಿಕ ಕಾಯಿಲೆ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ...

Department of Agriculture 2026 ಜನವರಿ 6. ಕೃಷಿ ಇಲಾಖೆಯಿಂದ “ಸಿರಿಧಾನ್ಯ & ಮರೆತು ಹೋದ ಖಾದ್ಯಗಳ ಪಾಕ ತಯಾರಿ” ಸ್ಪರ್ಧೆ

Department of Agriculture ಅಂತಾರಾಷ್ಟ್ರೀಯ ವಾಣಿಜ್ಯ ಮೇಳ-2026 ರ ಅಂಗವಾಗಿ ಕೃಷಿ...

Shivamogga Police ಶಿಕಾರಿಪುರ- ಚುರ್ಚುಗುಂಡಿಯಿಂದ ಯುವಕ ನಾಪತ್ತೆ, ಪೊಲೀಸ್ ಪ್ರಕಟಣೆ

Shivamogga Police ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ...