ದೇಶದಲ್ಲಿ ಡಿಜಿಟಲ್ ಕರೆನ್ಸಿಯನ್ನು ಚಲಾವಣೆಗೊಳಿಸುವ ನಿಟ್ಟಿನಲ್ಲಿ ಎಸ್‌ಬಿಐ, ಐಸಿಐಸಿಐ ಸೇರಿದಂತೆ ಐದು ಬ್ಯಾಂಕ್‌ಗಳನ್ನು ಆರ್‌ಬಿಐ ಆಯ್ಕೆ ಮಾಡಿದೆ.
ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಕೂಡ ಪಟ್ಟಿಯಲ್ಲಿದೆ.
ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಅನ್ನು ಈಗಿನ ಡಿಜಿಟಲ್ ಪೇಮೆಂಟ್ ಸಿಸ್ಟಮ್ ಜತೆಗೆ ಸಂಯೋಜಿಸಬೇಕೇ ಅಥವಾ ಪ್ರತ್ಯೇಕ ನೆಟ್ ವರ್ಕ್ ಅಳವಡಿಸಬೇಕೇ ಎಂಬುದರ ಬಗ್ಗೆ ಆರ್‌ಬಿಐ ಪರಿಶೀಲನೆ ನಡೆಸುತ್ತಿದೆ.
ಶೀಘ್ರದಲ್ಲಿಯೇ ಡಿಜಿಟಲ್ ಕರೆನ್ಸಿಯ ಪ್ರಾಯೋಗಿಕ ರಿಟೇಲ್ ಚಲಾವಣೆ ನಡೆಯಲಿದೆ. ಆರ್‌ಬಿಐ ಮತ್ತು ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಇದಕ್ಕಾಗಿ ಬ್ಯಾಂಕ್‌ಗಳ ಜತೆಗೆ ಸಾಥ್ ನೀಡಲಿವೆ. ಸಗಟು ವಿಭಾಗದಲ್ಲಿ ಈಗಾಗಲೇ ಡಿಜಿಟಲ್ ಕರೆನ್ಸಿ ಮೂಲಕ ಸಾಲಪತ್ರಗಳ (ಬಾಂಡ್) ಹಣಕಾಸು ವರ್ಗಾವಣೆಗಳು ನಡೆದಿವೆ.