ಗ್ರಾಮ ಪಂಚಾಯತಿಗಳಿಗೆ ಮಂಜೂರಾಗಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ಹಿರಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂದು ಉನ್ನತೀಕರಿಸುವ ಬಗ್ಗೆ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆ ಮುಂದುವರೆಸುವ ಬಗ್ಗೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
1500 ಪಿಡಿಒ ಹುದ್ದೆಗಳನ್ನು ಗ್ರೂಪ್ ಸಿ ನಿಂದ ಗ್ರೂಪ್ ಬಿ’ಗೆ ಮೇಲ್ದರ್ಜೆಗೇರಿಸಿ ಸರ್ಕಾರ ಆದೇಶ ಹೊರಡಿಸಿದೆ. ‘ಗ್ರೂಪ್ ಸಿ’ನಲ್ಲಿನ 37,900-70,850 ರೂ. ವೇತನ ಶ್ರೇಣಿಯನ್ನು 40,900-78,200 ವೇತನ ಶ್ರೇಣಿಯ ಗ್ರೂಪ್-ಬಿ ಕಿರಿಯ ವೃಂದಕ್ಕೆ ಉನ್ನತೀಕರಿಸಲಾಗಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕು ಮಟ್ಟದಲ್ಲಿ ಸೃಜನೆಯಾಗಿರುವ 176 ಹೆಚ್ಚುವರಿ ಕಾರ್ಯಕ್ರಮ ಅಧಿಕಾರಿ ಹುದ್ದೆಗಳನ್ನು ಸಹಾಯಕ ನಿರ್ದೇಶಕರು ಎಂದು ಪುನರ್ ಪದನಾಮಗೊಳಿಸಲಾಗಿದೆ.
ರಾಜ್ಯದಲ್ಲಿನ 226 ತಾಲೂಕು ಪಂಚಾಯಿತಿಗಳಲ್ಲಿ ಅಸ್ತಿತ್ವದಲ್ಲಿದ್ದ ತಲಾ ಒಂದು ಸಹಾಯಕ ನಿರ್ದೇಶಕರು ಹುದ್ದೆಯ ಜೊತೆಗೆ ಹೆಚ್ಚುವರಿಯಾಗಿ ಪ್ರತಿ ತಾಲೂಕಿಗೆ ಒಂದು ಸಹಾಯಕ ನಿರ್ದೇಶಕರು ಹುದ್ದೆಯಂತೆ ಒಟ್ಟು 26 ಸಹಾಯಕ ನಿರ್ದೇಶಕರ ಹುದ್ದೆಗಳನ್ನು ಸೃಜಿಸಿ ಆದೇಶಿಸಲಾಗಿದೆ.
ಪ್ರಸ್ತುತ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಮುಂಬಡ್ತಿಗಾಗಿ 452 ಸಹಾಯಕ ನಿರ್ದೇಶಕರು ಹುದ್ದೆಗಳನ್ನು ಸೃಷ್ಟಿಸಲಾಗಿದೆ.